ಉತ್ತಮ ಸಮಾಜಕ್ಕಾಗಿ

ಪ್ಯಾಸ್ ಪ್ರತಿಷ್ಠಾನವತಿಯಿಂದ ‘ಕೆರೆ ಹಸ್ತಾಂತರ’ ಸಮಾರಂಭ

0

ಬೆಳಗಾವಿಯ ಪ್ಯಾಸ್ ಪ್ರತಿಷ್ಠಾನವು ಅರಳಿಕಟ್ಟಿ ಗ್ರಾಮದಲ್ಲಿ ‘ಕೆರೆ ಹಸ್ತಾಂತರ’ ಸಮಾರಂಭವನ್ನು ಶುಕ್ರವಾರ 5 ಜನೆವರಿ 2018 ರಂದು ಮುಂಜಾನೆ 8.45 ಗಂಟೆಗೆ ಗ್ರಾಮದ ಕೆರೆ ಆವರಣದಲ್ಲಿ ಆಯೋಜಿಸಿದೆ.
ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜ ಹೋರಾಟಗಾರಾದ ಶ್ರೀ ಅಣ್ಣಾ ಹಜಾರೆ ಅವರು ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಶ್ರೀ ಎಸ್. ಝಿಯಾವು¯್ಲÁ, ಮಾನ್ಯ ಜಿ¯್ಲÁಧಿಕಾರಿಗಳು, ಬೆಳಗಾವಿ, ಶ್ರೀ ರಾಮಚಂದ್ರ ಆರ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ¯್ಲÁ ಪಂಚಾಯತ, ಬೆಳಗಾವಿ ಹಾಗೂ ಡಾ.ಸುರೇಶ ಇಟ್ನಾಳ, ಅಪರ ಜಿ¯್ಲÁಧಿಕಾರಿಗಳು, ಬೆಳಗಾವಿ ಇವರು ಆಗಮಿಸಲಿz್ದÁರೆ.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪರಮಪೂಜ್ಯ
ಶ್ರೀ ಡಾ.ಸಿದ್ಧರಾಮ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಲಿದ್ದಾರೆ.
2016ರ ಬರಗಾಲದ ಸಮಯದಲ್ಲಿ ಅರಳಿಕಟ್ಟಿ ಗ್ರಾಮವು ಸಂಕಷ್ಟಕ್ಕೆ ಈಡಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಿತ್ತಲ್ಲದೇ, ಈ ಗ್ರಾಮದ ಕೆರೆಯು ನೀರಿಲ್ಲದಂತಾಗಿ ದುಸ್ತಿತಿಯಲ್ಲಿತ್ತು. ಸುಮಾರು 2 ಎಕರೆ ವಿಸ್ತೀರ್ಣ ಹೊಂದಿರುವ, 30 ಅಡಿ ಆಳವಿರುವ ಈ ಕೆರೆಯನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಪ್ಯಾಸ್ ಪ್ರತಿಷ್ಠಾನವು ದತ್ತು ಸ್ವೀಕರಿಸಿ 2017ರ ಬೇಸಿಗೆಯಲ್ಲಿ ಕಾಮಗಾರಿಯನ್ನು ಕೈಗೊಂಡು ಕೇವಲ ಎರಡೇ ತಿಂಗಳಲ್ಲಿ ಕೆರೆಯನ್ನು ಪುನರುಜ್ಜೀವನಗೊಳಿಸಿ, ಯಶಸ್ವಿಯಾಗಿದೆ. ಇಂದು ಈ ಕೆರೆಯು ಬೇಸಿಗೆಯಲ್ಲಿ ಅರಳಿಕಟ್ಟಿ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವುದ¯್ಲÉೀ ಸುತ್ತಮುತ್ತಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿದೆ. ಗ್ರಾಮದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವನ್ನು ನೀಡಿದ್ದು, ಸ್ತುತ್ಯಾರ್ಹ ಕಾರ್ಯವೆನಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.