ಉತ್ತಮ ಸಮಾಜಕ್ಕಾಗಿ

ರಾಷ್ಟ್ರ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಜಿಐಟಿ ಗೆ ಚಿನ್ನದ ಪದಕ

0

ಬೆಳಗಾವಿ: ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ೫ ನೇ ಸೆಮಿಸ್ಟರ್ ವಿದ್ಯಾರ್ಥಿ ವಿಕ್ರಾಂತ್ ಧಾಮನೆಕರ್ ಮೊಹಾಲಿಯ ಚಂಡೀಗಡ್ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯದ ದೇಹದಾರ್ಡ್ಯ ಸ್ಪರ್ಧೆಯ ೬೫ ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ರಾಷ್ಟ್ರ ಮಟ್ಟದ ಚಾಂಪಿಯನ್ ಪಟ್ಟವನ್ನು ಗಳಿಸಿದ್ದಾರೆ.
ಮಹಾವಿದ್ಯಾಲಯಕ್ಕೆ ರಾಷ್ಟ್ರ ಮಟ್ಟದ ಗೌರವ ತಂದುಕೊಟ್ಟ ಈ ವಿದ್ಯಾರ್ಥಿಯನ್ನು ಕೆಎಲ್ಎಸ್ ಸಂಸ್ಥೆಯ ಅಧ್ಯಕ್ಷ ಶ್ರೀ ಅನಂತ್ ಮಂಡಗಿ ಹಾಗೂ ಕೆಎಲ್ಎಸ್ ಚೇರಮನ್ ಶ್ರೀ. ಎಂ. ಆರ್. ಕುಲಕರ್ಣಿ ಸಂಸ್ಥೆಯ ವತಿಯಿಂದ ಸನ್ಮಾನಿಸಿದರು. ಈ ಸಮಯದಲ್ಲಿ ಜಿಐಟಿ ಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ. ಯು. ಏನ್. ಕಾಲಕುಂದ್ರಿಕರ್, ಸಂಸ್ಥೆಯ ಎಲ್ಲ ಸದಸ್ಯರು, ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ ಹಾಜರಿದ್ದು ವಿದ್ಯಾರ್ಥಿಯನ್ನು ಅಭಿನಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.