ಉತ್ತಮ ಸಮಾಜಕ್ಕಾಗಿ

ಜ. 9ರಂದು VTU 17ನೇ ಘಟಿಕೋತ್ಸವ: ಡಾ. ಕರಿಸಿದ್ದಪ್ಪ

0

ಬೆಳಗಾವಿ: ಜನವರಿ 9 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವ ಸಮಾರಂಭ ಜರುಗಲಿದೆ ಎಂದು ವಿಟಿಯು ಕುಲಪತಿ ಪ್ರೊ. ಡಾ. ಕರಿಸಿದ್ದಪ್ಪ ತಿಳಿಸಿದ್ದಾರೆ. ವಿಟಿಯು ಸೆನೆಟ್ ಹಾಲನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜ್ಞಾನಸಂಗಮದಲ್ಲಿ ಘಟಿಕೋತ್ಸವ ನಡೆಯಲಿದೆ. ರಾಜ್ಯಪಾಲ ವಜುಬಾಯಿ ವಾಲಾ ಘಟಿಕೋತ್ಸವ ಉದ್ಘಾಟಿಸಲ್ಲಿದ್ದಾರೆ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಅನಿಲ ಸಹಸ್ರಬುದ್ದೆ ಘಟಿಕೋತ್ಸವ ಭಾಷಣ ಮಾಡುವರು ಎಂದರು.

ಇಸ್ರೋ ಅಧ್ಯಕ್ಷ ಎ.ಎಸ್. ಕಿರಣಕುಮಾರ ಹಾಗೂ ಆನಂದ ಮಹೀಂದ್ರಾ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿಯನ್ನು ಗೌರವಿಸಲಿದೆ ಎಂದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪದವಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿಧ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಗುವುದು ಹಾಗೂ ಸನ್ಮಾನಿಸಲಾಗುವುದು ಎಂದರು. ಜಗನ್ನಾಥ ರೆಡ್ಡಿ, ಸತೀಶ ಅಣ್ಣಿಗೇರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

.ಎಸ್. ಕಿರಣಕುಮಾರ-ಆನಂದ ಮಹಿಂದ್ರಾ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪದವಿ
ಜನೇವರಿ 9 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವ
ಜನೇವರಿ 03 (ಕರ್ನಾಟಕ ವಾರ್ತೆ): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 17ನೇ ವಾರ್ಷಿಕ ಘಟಿಕೋತ್ಸವ ಜನೇವರಿ 9 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಘಟಿಕೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಅವರು ತಿಳಿಸಿದರು.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹಾಗೂ ರಾಜ್ಯಪಾಲರಾದ ವಜುಬಾಯಿ. ಆರ್. ವಾಲಾ ಅವರು ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ, ಉದ್ಘಾಟನೆ ನೆರವೇರಿಸುವರು. ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪ್ರೊ. ಅನಿಲ.ಡಿ. ಸಹಸ್ರಬುದ್ಧೆ ಅವರು ಘಟಿಕೋತ್ಸವ ಭಾಷಣ ಮಾಡುವರು ಎಂದು ಹೇಳಿದರು.
ಘಟಿಕೋತ್ಸವದಲ್ಲಿ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳು ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಎ.ಎಸ್. ಕಿರಣಕುಮಾರ ಹಾಗೂ ಮಹಿಂದ್ರಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಆನಂದ ಮಹಿಂದ್ರಾ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ 61790 ಬಿ.ಇ., 384 ಬಿ.ಆರ್ಕ್, 4592 ಎಂಬಿಎ, 2741 ಎಂಸಿಎ, 4347 ಎಂ.ಟೆಕ್., 15 ಎಂ.ಆರ್ಕ್, 302 ಪಿಎಚ್.ಡಿ ಹಾಗೂ 20 ಎಂ.ಎಸ್ಸಿ (ಇಂಜಿನೀಯರಿಂಗ್) ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುವುದು. ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು, ಹಾಗೂ ಆಹ್ವಾನಿತರಿಗೆ 2018ರ ಜನವರಿ 9 ರಂದು ಬೆಳಿಗ್ಗೆ 8 ರಿಂದ 10:30 ಗಂಟೆಯವರೆಗೆ ಪ್ರತಿ 15 ನಿಮಿಷಕ್ಕೆ ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವ ಡಾ|| ಸತೀಶ ಅಣಿಗೇರಿ, ಕುಲಸಚಿವರಾದ ಡಾ|| ಎಚ್.ಎನ್. ಜಗನಾಥ ರೆಡ್ಡಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪದಕ ವಿಜೇತರು:
ಚಿಕ್ಕಮಂಗಳೂರಿನ ಆಧಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಯಾದ ಸಚಿನ ಕೀರ್ತಿ ಅವರು 13 ಪದಕಗಳನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಬೆಂಗಳೂರಿನ ಬಿ.ಎನ್.ಎಮ್. ಇನಜೀನಿಯರಿಂಗ್ ಕಾಲೇಜಿನ ಪ್ರತ್ಯೂಷಾ ಎ, ಬೆಂಗಳೂರಿನ ಶಿರಡಿ ಸಾಯಿ ಇನಜೀನಿಯರಿಂಗ್ ಕಾಲೇಜಿನ ಬಿಂದು ಎಸ್, ಬೆಳಗಾವಿಯ ಕೆ.ಎಲ್.ಇ. ಶೇಷಗಿರಿ ಇನಜೀನಿಯರಿಂಗ್ ಕಾಲೇಜಿನ ರಜತ್ ಹೊಗಾರ್ತಿ ಹಾಗೂ ಸುಳ್ಳೆಯ ಕುರಂಜಿ ವೆಂಕಟರಮನ ಕಾಲೇಜಿನ ಅರ್ಪಿತಾ.ಕೆ.ಎಸ್ ಅವರು ತಲಾ 5 ಪದಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ಬೆಂಗಳೂರಿನ ಆರ್.ಎನ್.ಎಸ್ ಇನ್ಸ್ಟಿಟ್ಯೂಟ್‍ನ ಅಪೂರ್ವ ಶರ್ಮಾ ನಾಲ್ಕು ಪದಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪದಕ ವಿಜೇತ ಕಾಲೇಜುಗಳು:
ಬೆಂಗಳೂರಿನ ಡಿ.ಎಸ್.ಸಿ.ಇ ಕಾಲೇಜು ಒಟ್ಟು 54 ಅಂಕಗಳನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ, ಬೆಂಗಳೂರಿನ ಆರ್.ವಿ.ಸಿ.ಇ ಕಾಲೇಜು ಒಟ್ಟು 32 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಬೆಂಗಳೂರಿನ ಬಿ.ಐ.ಟಿ. ಕಾಲೇಜು ಒಟ್ಟು 26 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಗಳಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.