ಉತ್ತಮ ಸಮಾಜಕ್ಕಾಗಿ

ಅಣ್ಣಾ ಬೆಂಬಲಕ್ಕೆ ಹಲವು ಸಂಘಟನೆಗಳು ಸಿದ್ಧ

0

ಬೆಳಗಾವಿ: ದೇಶವ್ಯಾಪಿ ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತಾರ ಅಣ್ಣಾ ಹಜಾರೆ ಅವರ ಬೆಳಗಾವಿ ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳು ಬೆಂಬಲಿಸಿವೆ.

ಉಚಗಾಂವ ರೈತರು, ಮ್ಯಾಕ್ಸಿಕ್ಯಾಬ್ ಮಾಲೀಕರ ಸಂಘಟನೆ, ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ನಗರದ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಜ.5 ಕ್ಕೆ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅಣ್ಣಾ ಹಜಾರೆ ಮಾತನಾಡಲಿದ್ದಾರೆ. ಈಗಾಗಲೇ ಬೃಹತ್ ಪೆಂಡಾಲ್ ಹಾಕುವ ಕಾರ್ಯ ನಡೆದಿದ್ದು, ಅಣ್ಣಾ ಅಭಿಮಾನಿ ಯುವ ಜನತೆ ಅವರ ಭೇಟಿಗೆ ಖಾತರರಾಗಿರುವುದು ಗಮನಾರ್ಹ. ಬೆಳಗಾವಿಯಲ್ಲಿ ಅಣ್ಣಾ ಯಾವ ವಿಷಯದಲ್ಲಿ ಮಾತನಾಡಲಿದ್ದಾರೆ ಎಂಬ ಕುತೂಹಲ ಕಾಯ್ದು ನೋಡಬೇಕಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: