ಉತ್ತಮ ಸಮಾಜಕ್ಕಾಗಿ

ಲೇವಾದೇವಿ ಲೈಸನ್ಸ್ ನವೀಕರಣಕ್ಕಾಗಿ ಜ.31 ಕೊನೆಯ ದಿನ

0

ಬೆಳಗಾವಿ: ಬೆಳಗಾವಿ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಲೇವಾದೇವಿ, ಗಿರವಿ, ಹಣಕಾಸು ಸಂಸ್ಥೆಗಳು 2018 ಮಾರ್ಚ ಕರ್ನಾಟಕ ಲೇವಾದೇವಿ ಕಾಯ್ದೆ ಕಲಂ 10 ರ ಪ್ರಕಾರ ನವೀಕರಿಸಬೇಕಾದ ಲೈಸನ್ಸಗಳ ನವೀಕರಣಕ್ಕಾಗಿ ಪ್ರಸ್ತಾವಣೆಯನ್ನು 2018ರ ಜನವರಿ 31ರೊಳಗಾಗಿ ಸಲ್ಲಿಸಬೇಕು.
ನಂತರ ಸಲ್ಲಿಸಲಾದ ಪ್ರಸ್ತಾನೆಗಳಿಗೆ ದಂಡದ ಶುಲ್ಕ ಭರಿಸಬೇಕಾಗುತ್ತದೆ. ನವೀಕರಣಕ್ಕೆ ಸಲ್ಲಿಸದ ಲೇವಾದೇವಿ, ಗಿರವಿ, ಹಣಕಾಸು ಸಂಸ್ಥೆಗಳ ಪರವಾನಿಗೆಯನ್ನು ರದ್ದುಪಡಿಸಿ ಭದ್ರತಾ ಠೇವಣಿಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂದಕರು ಬೆಳಗಾವಿ ಉಪವಿಭಾಗ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.