ಉತ್ತಮ ಸಮಾಜಕ್ಕಾಗಿ

ಸಾವಿತ್ರಿಬಾಯಿಪುಲೆ ಜನ್ಮದಿನಾಚರಣೆ ಹೆಣ್ಣು ಮಕ್ಕಳು ಸುರಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲಿ:ಆಶಾ ಐಹೊಳೆ

0

ಬೆಳಗಾವಿ:ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಭಾಯಿ ಪುಲೆಯು ಮಹಿಳಾ ಸಮಾಜಕ್ಕೆ ಸ್ಪೂರ್ತಿಯಾಗಿರುವವರು.ಮತ್ತು ವಿವೇಚನ ಕೀರ್ತಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿ ಇತಿಹಾಸದಲ್ಲಿ ಅಮರ ಆಗಿದ್ದರೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೇ ಆಶಾ ಪ್ರಶಾಂತರಾವ್ ಐಹೊಳೆ ಹೇಳಿದರು.
ನಗರದ ತಾಲೂಕ ಪಂಚಾಯತಯಲ್ಲಿ ಬುಧವಾರ 3 ರಂದು ಜರುಗಿದ ಕರ್ನಾಟಕ ರಾಜ್ಯ ಎಸ್ ಸಿ/ಎಸ್ ಡಿ ಶಿಕ್ಷಕರ ಬಳಗದ ವತಿಯಿಂದ ಶ್ರೀಮತಿ ಸಾವಿತ್ರಿಬಾಯಿ ಪುಲೆಯವರ ಜಯಂತಿ ಅಂಗವಾಗಿ ಸಾಧಕರಿಗೆ ಸನ್ಮಾನ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಚಿಂತನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು.
ಸಾವಿತ್ರಿ ಬಾಯಿ ಪುಲೆಯು ಮಹಿಲಾ ಜೊತೆಗೆ ಶ್ರಮಿಸಿದರು ಇಂದು ಹೆಣ್ಣು ಮಕ್ಕಳ ಸುರಕ್ಷಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಅವರು ಸ್ಪೂರ್ತಿದಾಯಕರಾಗಿರುವವರು ಎಂದು ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣಕ್ಕೆ ಬಹುಮುಖ್ಯ ಪಾತ್ರವಿದೆ.ಉತ್ತಮ ವಿಚಾರಧಾರನೆಗೆ ಬದ್ಧರಾಗಿ ಎಲ್ಲರೂ ಸುರಕ್ಷತರಾಗಿರಬೇಕೆಂದರು.
ಮುಖ್ಯ ಅಥಿತಿಯಾಗಿ ತಾಲೂಕ ಪಂಚಾಯತ ಸದಸ್ಯ ಯಲ್ಲಪ್ಪಾ.ಎಚ್.ಕೋಳೆಕರ ವರು ಮಾತನಾಡಿ ಸಾವಿತ್ರಿ ಬಾಯಿ ಅವರು ಶಿಕ್ಷಕ ಸಮುದಾಯದ ಸ್ಪೂರ್ತಿ ನೆಲೆಯಾಗಿರುವವರು ಸಮಾಜ ಸುದಾರಣೆಗೆ ಮಹಿಳೆಯರ ಶೊಷೀತ ಬದುಕು ಬದಾವಣೆಗೆ ಬುದ್ಧ ಬಸವ,ಅಂಬೇಡ್ಕರ ಹೋರಾಟ ಜೊತೆಗೆ ಸಾವಿತ್ರಿಬಾಯಿಯವರು ಮಹಾನ ಕಾರ್ಯ ಸದಾಸ್ಮರಣೀಯ ಎಂದು ಹೇಳಿ ಸಮಾಜ ಜಾಗೃತಿಗೆ ಅವರ ಹಾದಿಯಲ್ಲಿ ಪ್ರಯತ್ನನಿಸಬೇಕಾಗಿದೆ ಎಂದರು.ಸಮಾರಂಭದ ಅದ್ಯಕ್ಷತೆಯನ್ನು ಅರ್ಜುನ,ಸಾಗರ ಸ್ವಾಗತಿದರು.ಕಿತ್ತೂರ ಶಾಲೆಯ ಪ್ರಧಾನಗುರು ರಾಘವೇಂದ್ರ ಮುಂಡೇವಾಡಿ ಸಾವಿತ್ರಿಬಾಯಿಯವರು ಜೀವನ ಸಾಧನೆಯ ಕುರಿತು ಉಪನ್ಯಾಸ ನೀಡಿದರು.
ಸಮಾಜದ ವಿವಿಧ ಶಾಲೆಗಳಲ್ಲಿ ಸ್ಮರಣೀಯ ಕಾರ್ಯ ಮಾಡಿರುವ ಮಾಳ ಮಾರುತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಹಾದೇವ ಕೋಲಕಾರ, ರಕ್ಷಣಾ ವೇದಿಕೆ ಅದ್ಯಕ್ಷರು ಮಹಾದೇವ ತಳವಾರ,ಅಶೋಕ ಕುರೇರ,ಯಲ್ಲಪ್ಪಾ ಹುದಲಿ, ಆರ್ ಬನಶಂಕರಿ ಅವರು ಅಭಿನಂದಿಸಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಶೈಕ್ಷಣಿಕ ಕ್ಷೇತ್ರದ ಸಾಧಕರ ಸೇವೆಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿಯನ್ನು ಶಿಕ್ಷಕಿಯರಾಗಿರುವ ಯಲ್ಲವ್ವಾ ನೇಸರಗಿ,ಮಹಾದೇವ ಪಾಟೀಲ,ವರದಾ ಹೇಗಡೆ(ಕೇಸ್ತಿ),ಅನುರಾಧಾ ತಾರಿಹಾಳಕರ,ಪುಂಡಲೀಕ ಮಾದಿಗರ,ವಿಷ್ಣು ಚವ್ಹಾಣ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಯಾಗಿ ಆಥಿತಿಯಾಗಿ ಕ್ಷೇತ್ರಶಿಕ್ಷಣಾಧಿಕಾರಿ ಲೀಲಾವತಿ ಹೀರೆಮಠ,ಇಸ್ಮಾಂಪುರ ಸಮಾಜ ಸೇವಕ ಸದು ಕಲ್ಲಟ್ಟಿ,ಅಣ್ಣಪ್ಪಾ ಅಗಸ,ಶಿಕ್ಷಕಿಯರಾದ ರೇಖಾ ಅಂಗಡಿ,ಶಿಕ್ಷಕ ಸಂಘದ ಬಸವರಾಜ ಸುಣಗಾರ,ವಿ ದೇಶನೂರು ಹಾಗೂ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘಟಕ ರಾಜು ಕೋಲಕಾರರವರು ಸ್ವಾಗತಿಸಿದರು.ಸುಮಿತ್ರಾ ದುರ್ಗಿ,ಶಶಿಕಾಂತ ಶಿಂಗೆನ್ನವರ, ಜಿ.ಜಿ ತಳವಾರ, ಸುರೇಶ ಮಾದಾರ,ಪ್ರಕಾಶ ಕಾಂಬಳೆ,ಎಸ್ ತಳವಾರ, ಆರ್ ಮೇಟಲಮಠ ,ವಿನೋದ ಜಗಜಂಪಿ,ಶಶಿಕಾಂತ ಶಿಂಗೇನ್ನವರ,ಅನೀಲ ವೇತಾಳ ಹಾಗೂ ಉಪಸ್ಥಿತರಿದ್ದರು. ಜಿ.ಎಸ್ ನಿರೂಪಿಸಿದರು. ಬಿ.ಬಿ ಹಟ್ಟಿಹೊಳಿ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.