ಉತ್ತಮ ಸಮಾಜಕ್ಕಾಗಿ

ಸಂಜಯ ಪಾಟೀಲ ನೇತೃತ್ವದಲ್ಲಿ ಪಾಲಿಕೆ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ 9 ವರ್ಷ ಕುಂಭಕರ್ಣ ನಿದ್ದೆಯಲ್ಲಿದ್ದ ಸಂಜಯ ಪಾಟೀಲ: ಲಕ್ಷ್ಮೀ ಹೆಬ್ಬಾಳಕರ ವ್ಯಗ್ರ

0

ಸಂಜಯ ಪಾಟೀಲ ನೇತೃತ್ವದಲ್ಲಿ ಪಾಲಿಕೆ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಬೆಳಗಾವಿ: ಬಿಜೆಪಿ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ₹9 ಕೋಟಿ ಅನುದಾನ ಬಿಡುಗಡೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಗ್ಗ ಜಗ್ಗಾಟ ಇಂದು ನಡೆದು ಸಾರ್ವಜನಿಕ ಚರ್ಚೆಗೆ ಒಳಗಾಗಿದೆ.

ಮುಖ್ಯಮಂತ್ರಿಗಳ ₹100 ಕೋಟಿ ವಿಶೇಷ ಅನುದಾನದಲ್ಲಿ ಮಂಜೂರಾಗಿದ್ದ ₹9 ಕೋಟಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಮಾಡಲಾಗುತ್ತಿದೆ. ಹಾಲಿ ಶಾಸಕ ಸಂಜಯ ಪಾಟೀಲ ಏನೂ ಅಭಿವೃದ್ಧಿ ಕೆಲಸ ಇಲ್ಲಿ ಮಾಡಿಲ್ಲ ಹಣ ಬಿಡುಗಡೆಗೆ ಆಸಕ್ತಿ ತೋರಿಸಿಲ್ಲ, ಇದು ವರೆಗೆ ನಿದ್ದೆ ಮಾಡುತ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹೇಳಿಕೆ ಖಂಡಿಸಿ ಪ್ರತಿಭಟನೆ ತೀವೃ ಸ್ವರೂಪ ಪಡೆಯಿತು. ಹೆಬ್ಬಾಳ್ಕರ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆಗೆ ಸ್ಥಳಿಯ ಶಾಸಕರನ್ನ ಆಹ್ವಾನ ನೀಡಿದಿಲ್ಲ ಎಂದು ಶಾಸಕ ಸಂಜೆಯ ಪಾಟೀಲ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿ ಸಂಜೆ ವರೆಗೆ ಮುಂದುವರೆಸಿದರು.

9 ವರ್ಷ ಕುಂಭಕರ್ಣ ನಿದ್ದೆಯಲ್ಲಿದ್ದ ಸಂಜಯ ಪಾಟೀಲ: ಲಕ್ಷ್ಮೀ ಹೆಬ್ಬಾಳಕರ ವ್ಯಗ್ರ

ಬೆಳಗಾವಿ: ಶಾಸಕ ಸಂಜಯ ಪಾಟೀಲ ಯಾವ ಕಾರಣಕ್ಕೆ ಧರಣಿ ನಡೆಸುತ್ತಿದ್ದಾರೆ ನನಗೆ ಆಶ್ಚರ್ಯ ತರಿಸಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಪ್ರತಿಕ್ರಿಯಿಸಿದರು. ಇಂದು ಬೆಳಿಗ್ಗೆ ಬಾಕ್ಸೈಟ್ ರಸ್ತೆಯ ಸಿದ್ದೇಶ್ವರ ನಗರ ಬಡಾವಣೆಯ 9 ಬಡಾವಣೆಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಸರಕಾರಿ ಕಾರ್ಯಕ್ರಮ ಸ್ಥಳದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಅತ್ತ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ ತನ್ನ ಕ್ಷೇತ್ರದ ಸರಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಿ ಕೆಲಸಗಳನ್ನು ನಾನೇ ಮಾಡಿಸಿದ್ದು ಎನ್ನುತ್ತಿದ್ದಾರೆ ಎಂದು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಬೀದಿ ದೀಪ ಹಾಕಿಸಿಕೊಡದ ಸಂಜಯ ಪಾಟೀಲ ಕಳೆದ 9ವರ್ಷ ಕುಂಭಕರ್ಣ ನಿದ್ದೆ ಮಾಡಿ ಈಗ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೆಬ್ಬಾಳಕರ ಶಾಸಕ ಸಂಜಯ ಪಾಟೀಲ ಅವರನ್ನು ಜರಿದರು.

ಮುಖ್ಯಮಂತ್ರಿಗಳ ₹100 ಕೋಟಿ ವಿಶೇಷ ಅನುದಾನದ ₹9 ಕೋಟಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಮಾಡಲಾಗುತ್ತಿದೆ. ನಾನೂ ಈ ಕ್ಷೇತ್ರದ ಮತ ಪಡೆದವಳೇ. ನನಗೂ ಜವಾಬ್ದಾರಿ ಇದೆ. ಸಂಜಯ ಪಾಟೀಲ ತಮ್ಮ ಹಕ್ಕುಚ್ಯುತಿಯಾಗುತ್ತಿದೆ ಎಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಜರಿದರು.

ಶಿಷ್ಟಾಚಾರ ಉಲ್ಲಂಘನೆಯಾಗಿದ್ದರೆ ಅಧಿಕಾರಿಗಳು ಸಸ್ಪೆಂಡ್: ರಮೇಶ ಜಾರಕಿಹೊಳಿ

ಬೆಳಗಾವಿ: ಸರಕಾರಿ ಕಾಮಗಾರಿ ಗುದ್ದಲಿಪೂಜೆಗೆ ಶಾಸಕರಿಗೆ ಅಧಿಕಾರಿಗಳು ಆಹ್ವಾನ ನೀಡಿರುವ ಮಾಹಿತಿ ನನಗಿದೆ. ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗುಡುಗಿದ್ದಾರೆ.
ಇದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಕೆಲಸವಲ್ಲ. ಇದು ಸರಕಾರದ ಕಾರ್ಯಕ್ರಮ ಇಲ್ಲಿ ಆಹ್ವಾನ ಸ್ವೀಕರಿಸಿ ಬರಬೇಕು. ಅಧಿಕಾರಿಗಳ ಆದ್ಯ ಕರ್ತವ್ಯ ಸಹ ಆಗಿದೆ. ಶಾಸಕರನ್ನು ಅಧಿಕಾರಿಗಳು ಕರೆದಾಗಲೂ ಬಾರದೇ ಪ್ರತಿಭಟನೆ ಮಾಡುವುದು ಕಾನೂನಿನ ಅರಿವು ಅವರಿಗಿಲ್ಲ ಎಂದು ಭಾವಿಸಬೇಕಾಗುತ್ತದೆ. ಬಿಜೆಪಿಯವರಿಗೆ ಪ್ರತಿಭಟನೆಯೇ ದೊಡ್ಡ ಉದ್ಯೋಗ, ಮೋಡಿಗೀಡಿ ಎಲ್ಲ ಸುಳ್ಳು, ಗುಜರಾತ ನಲ್ಲಿ ತಾಂತ್ರಿಕವಾಗಿ ಬಿಜೆಪಿ ಗೆದ್ರೆ, ಕಾಂಗ್ರೆಸ್ ಮಾನಸಿಕವಾಗಿ ಗೆದ್ದಿದೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.