ಉತ್ತಮ ಸಮಾಜಕ್ಕಾಗಿ

ಸಂಗೀತಪ್ರಿಯರ ಮನತಣಿಸಲಿರುವ ಸುಮಧುರಗೀತೆಗಳ ಯಾನ ‘ಗಾನಯಾನ’ ಸಂಗೀತ ಕಾರ್ಯಕ್ರಮ ಜ.6ರಂದು

0

ಬೆಳಗಾವಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಶನಿವಾರ (ಜ.6) ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ “ಗಾನಯಾನ”-ಸುಮಧುರ ಗೀತೆಗಳ ಯಾನ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
“ಗಾನಯಾನ” ಕಾರ್ಯಕ್ರಮದಲ್ಲಿ ಸಮಾನತೆಯ ಆಶಯವನ್ನು ಆಧರಿಸಿರುವ ಕನ್ನಡದ ಚಿತ್ರಗೀತೆಗಳನ್ನು ಶಿವಮೊಗ್ಗದ ಸಾಯಿದೀಪ ಕಲಾವೃಂದದ ಮಹೇಂದ್ರ ಗೋರೆ ಮತ್ತು ತಂಡದವರು ಪ್ರಸ್ತುತಪಡಿಸಲಿದ್ದಾರೆ.
ಶಿರಡಿಯ ಸಾಯಿಬಾಬಾ ದೇವಸ್ಥಾನದ ಆಸ್ಥಾನ ಗಾಯಕರಾಗಿರುವ ಮಹೇಂದ್ರ ಗೋರೆಯವರು ಕನ್ನಡ ಚಿತ್ರಗೀತೆಗಳು, ಭಾವಗೀತೆ, ದಾಸರಪದಗಳು, ಭಕ್ತಿಗೀತೆಗಳು, ಭಜನ ಗಾಯನದಲ್ಲಿ ಪ್ರಸಿದ್ಧರಾಗಿದ್ದಾರೆ.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಲಿರುವ ಗಾನಯಾನ ಕಾರ್ಯಕ್ರಮದಲ್ಲಿ ಸಾಯಿದೀಪ ಕಲಾವೃಂದದವರು ಭಾವಗೀತೆ, ದಾಸರಪದಗಳು ಸೇರಿಂದಂತೆ 30ಕ್ಕೂ ಅಧಿಕ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ಸಂಗೀತಾಸಕ್ತರ ಮನತಣಿಸಲಿದ್ದಾರೆ.

ಉದ್ಘಾಟನಾ ಸಮಾರಂಭ:
ಗಾನಯಾನ ಸಂಗೀತ ಕಾರ್ಯಕ್ರಮವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯಕ್ತರಾದ ಶಿವಯೋಗಿ ಕಳಸದ ಅವರು ಜನವರಿ 6ರಂದು ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ.
ಜಿಲ್ಲಾಧಿಕಾರಿಗಳಾದ ಎಸ್.ಜಿಯಾವುಲ್ಲಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಹಾಗೂ ಖ್ಯಾತ ನಾಟಕಕಾರರಾದ ಡಿ.ಎಸ್.ಚೌಗಲೆ ಅವರು ಅತಿಥಿಗಳಾಗಿ ಆಗಮಿಸುವರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.