ಉತ್ತಮ ಸಮಾಜಕ್ಕಾಗಿ

ಸಂಗೊಳ್ಳಿ ರಾಯಣ್ಣ ಸ್ಮಾರಕ ಶಾಲೆ 8ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

0

ಬೆಳಗಾವಿ: \ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡ ತಾ:ಖಾನಾಪೂರ ಜಿ: ಬೆಳಗಾವಿ ಈ ಶಾಲೆಯ 2018-19 ಸಾಲಿಗೆ 8ನೇ ತರಗತಿ ಇಂಗ್ಲೀಷ ಮಾಧ್ಯಮದ ವಿಭಾಗಕ್ಕೆ ಪ್ರವೇಶ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ವಿಜಯಪೂರ, ಬಾಗಲಕೋಟ, ಗದಗ, ಹಾವೇರಿ, ಕಾರವಾರ. ಜಿಲ್ಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಹರಿದ್ದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
2017-18 ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಸಂಬಂಧ 50 ಸೀಟುಗಳು ಲಭ್ಯವಿದ್ದು, ಇದರಲ್ಲಿ ಶೇ.50 ರಷ್ಟು ಸಾಮಾನ್ಯ ವರ್ಗದವರಿಗೆ ಉಳಿದ ಶೇ. 50 ರಲ್ಲಿ ಶೇ. 25 ರಷ್ಟು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರಿಗೆ ಇನ್ನೂಳಿದ ಶೇ. 25 ರಷ್ಟು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಮೀಸಲಿವೆ.
ಈ ಮೇಲಿನ ಎಲ್ಲ ವರ್ಗಗಳಲ್ಲಿ ಶೇ. 50 ರಷ್ಟು ಬಾಲಕಿಯರಿಗೆ ಮೀಸಲಿರಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣ ನೀಡಲಾಗುವದು. ಅರ್ಜಿ ನಮೂನೆಗಳು ಹಾಗೂ ವಿವರಗಳಿಗೆ ಸಂಬಂಧಿಸಿದ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಿಂದ ಹಾಗೂ ಬೆಳಗಾವಿ ವಿಭಾಗದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಗಳಿಂದ ಮತ್ತು ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ನಂದಗಡ ಇಲ್ಲಿಂದ ಪಡೆಯಬಹುದಾಗಿದೆ.
ಭರ್ತಿಮಾಡಿದ ಅರ್ಜಿಗಳನ್ನು 2018ರ ಫೆಬ್ರುವರಿ 9 ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ ಪ್ರವೇಶ ಪತ್ರ ರವಾನೆಗಾಗಿ 5/- ಮೌಲ್ಯದ ಸ್ವಯಂ ವಿಳಾಸವುಳ್ಳ ಒಂದು ಅಂಚೆ ಲಕೋಟೆಯನ್ನು ಎಲ್ಲ ಅರ್ಜಿದಾರರು ಕಡ್ಡಾಯವಾಗಿ ಲಗತ್ತಿಸಿ, ನೇರವಾಗಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡ ಇಲ್ಲಿಗೆ ಸಲ್ಲಿಸಬೇಕೆಂದು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.