ಉತ್ತಮ ಸಮಾಜಕ್ಕಾಗಿ

ಜ.5 ರಂದು ಬೆಳಗಾವಿ ರಂಗೊತ್ಸವ

0

ಬೆಳಗಾವಿ: ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು ಮತ್ತು ರಂಗಪರಿಸರ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ರಂಗೊತ್ಸವವನ್ನು ಜನೇವರಿ 5, 7 ಹಾಗೂ 8ರಂದು ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಬಸವರಾಜ ದೊಡ್ಡಮನಿ ಅವರು ತಿಳಿಸಿದರು.

ನಗರದ ವಾರ್ತಾಭವನದಲ್ಲಿ ಗುರುವಾರ(ಜ.4) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ನಿವೃತ್ತ ಪ್ರಾಚಾರ್ಯರಾದ ಬಸವರಾಜ ಜಗಜಂಪಿ ಅವರು ಜ.5ರಂದು ಸಂಜೆ 6.30 ಗಂಟೆಗೆ ರಂಗೋತ್ಸವವನ್ನು ಉದ್ಘಾಟಿಸುವರು. ಹಿರಿಯ ಸಾಹಿತಿಗಳಾದ ಚಂದ್ರಕಾಂತ ಕುಸನೂರ ಅವರು ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಐ. ಕರಿಶಂಕರಿ ಅವರು ಉಪಸ್ಥಿತರಿರುವರು. ಧಾರವಾಡದ ನಾವಿಕಾ ರಂಗಭೂಮಿ ಸಂಸ್ಥೆಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಜನೇವರಿ 7 ರಂದು ರವಿವಾರ ಸಂಜೆ 6:30 ಗಂಟೆಗೆ ಮಂಗಳೂರಿನ ಆಕರಂ ತಂಡದಿಂದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರು ನಿರ್ದೇಶನದ ‘ನಿನಗೆ ನೀನೆ ಗೆಳತಿ’ ನಾಟಕ ಪ್ರದರ್ಶನಗೊಳ್ಳಲಿದೆ. ಜನೇವರಿ 8 ರಂದು ಸಂಜೆ 6:30ಕ್ಕೆ ಎಂ.ಕೆ.ಹುಬ್ಬಳ್ಳಿಯ ಕರ್ನಾಟಕ ಸರ್ವ ಕಲಾವಿದರ ಹಿತರಕ್ಷಣಾ ಸಂಘದ ವತಿಯಿಂದ ಚಂದ್ರಶೇಖರ ಜಿಗಜಿನ್ನಿ ಅವರ ನಿರ್ದೇಶನದ ಬಸವಂತ ಬಲವಂತ ನಾಟಕ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.
ಧಾರವಾಡದ ರಂಗಪರಿಸರ ಕಾರ್ಯದರ್ಶಿಗಳಾದ ಚಂದ್ರಶೇಖರ ಜಿಗಜಿನ್ನಿ, ರಂಗ ಪರಿಸರದ ಅಧ್ಯಕ್ಷರಾದ ವಿಠ್ಠಲ ಕೊಪ್ಪದ, ಮಲ್ಲನಗೌಡ ಪಾಟೀಲ ಹಾಗೂ ಮಕಬುಲ್ಲ್ ಹುಣಶಿಕಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.