ಉತ್ತಮ ಸಮಾಜಕ್ಕಾಗಿ

ಯೇ ಲೋಕತಂತ್ರ ನಹೀ ಹುಕುಂ ತಂತ್ರ ಹೈ : ಅಣ್ಣಾ ಹಜಾರೆ ಕಳವಳ

0

ಬೆಳಗಾವಿ: ನಾನು 80 ರ ಹರೆಯದಲ್ಲಿ ಇಡೀ ದೇಶ ಸುತ್ತಿ ಸಮಾಜ ಸುಧಾರಣೆಯ ಯತ್ನ ನಡೆಸಿದ್ದೇನೆ, ನಾನು ಮತಕ್ಕಾಗಿ, ರಾಜಕೀಯಕ್ಕಾಗಿ ಅಲ್ಲ ನಾನು ನೂರು ವರ್ಷ ಬದುಕಿ ತಮಗಾಗಿ ಧ್ವನಿಯಾಗುತ್ತೇನೆ ಎಂದು ಅಣ್ಣಾ ಹಜಾರೆ ಇಂದು ನಗರದಲ್ಲಿ ಸಾರ್ವಜನಿಕ ಸಭೆಯುದ್ದೇಶಿಸಿ ಮಾತನಾಡಿದರು. ಪ್ರತಿ ಮಾನವನ ಜನ್ಮ ಸೇವೆಗಾಗಿ ಇದೆ. ಜನರ ಸೇವೆ ಭಗವಂತನ ಪೂಜೆ ಆಗಿದೆ. ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಸೈನಿಕರು ಸತ್ತರು ನಾನು ಬದುಕುಳಿದೆ. ನಾನು, ನನ್ನ ಹಳ್ಳಿ, ನನ್ನ ಜೀವನ ದೇಶಕ್ಕಾಗಿ ಮುಡಿಪಾಗಿದೆ. 45 ವರ್ಷವಾಯಿತು ನನ್ನ ಸ್ವಂತ ಮನೆಗೆ ಹೋಗಿಲ್ಲ. ನನಗೆ ಬಂದ ಪ್ರಶಸ್ತಿ, ಮೊತ್ತ ಇನ್ನೊಬ್ಬರಿಗೆ ಕೊಟ್ಟು ಹಾಸಿಗೆ ಹೊದಿಕೆ ಮತ್ತು ಒಂದು ಪ್ಲೇಟನಲ್ಲಿ ನನ್ನ ಜೀವನ; ಅದೇ ನನ್ನ ಆನಂದ ಅದೇ ನನಗೆ ದೈಹಿಕ ಶಕ್ತಿ ನೀಡಿದೆ ಎಂದರು.

ಗ್ರಾಮ ವಿಕಾಸವಾಗಬೇಕಾದರೆ ವ್ಯಕ್ತಿತ್ವ ವಿಕಸನವಾಗಬೇಕು. ಆಗ ದೇಶ ವಿಕಾಸವಾಗುತ್ತದೆ. ಹೊಟ್ಟೆಗೆ ಊಟವಿಲ್ಲದೇ ಮಲಗುತ್ತಿದ್ದ ಪ್ರದೇಶದ ಜನರು ಸದ್ಯ ಉಂಡು ಲಾರಿ ತುಂಬಿ ತರಕಾರಿ, ಆಹಾರ ಬೆಳೆದು ಬೇರೆಡೆ ಪೂರೈಸುವಂತಾಗಿದೆ ಎಂದರು. ಮಹಾತ್ಮಾ ಗಾಂಧೀಜಿ ಆಸೆ ಹಳ್ಳಿಗಳ ಅಭಿವೃದ್ಧಿ ಆಗಿತ್ತು. 6 ಮಂತ್ರಿಗಳು, 400 ಅಧಿಕಾರಿಗಳು ಅಧಿಕಾರ ಕಳೆದುಕೊಂಡರು. ಮಾಹಿತಿ ಹಕ್ಕು ಅಧಿನಿಯಮ ಸದ್ಯ ಗ್ರಾಮೀಣ ಜನರಿಗೆ ಸಹಾಯಕವಾಗಿದೆ. 1968ರ ಲೋಕಪಾಲ ಕಾಯ್ದೆ ಇನ್ನೂ ಪಾಸ್ ಆಗ್ತಿಲ್ಲ. ಅದನ್ನು ಪಾಸ್ ಮಾಡಿಸಲು ನಾನು ಮುಂದಾದೆ. ನನಗೆ ನನ್ನ ದೇಶವಾಸಿಗಳು ಬೆಂಬಲಿಸಿದ್ದು ಇಂದು ಇತಿಹಾಸ. ಲೋಕಪಾಲ್ ಮಾಡಲು ಮುಂದಾದ ಸರಕಾರ ಅದನ್ನು ಬಲಹೀನ ಮಾಡಿತು. ನರೇಂದ್ರ ಮೋದಿ ಲೋಕಪಾಲ ಮತ್ತು ಲೋಕಾಯುಕ್ತ ಜಾರಿ ಮಾಡುವ ಮಾತು ಹೇಳಿ ಈಗ ಸುಮ್ಮನಾಗಿದ್ದಾರೆ. ನಾನು ಮೋದಿಗೆ 3 ವರ್ಷ ಸಮಯ ಕೊಟ್ಟು ನಾನು ಕಾಯ್ದಿದ್ದೇನೆ. ಈಗ ದೆಹಲಿಯಲ್ಲಿ ನಿರಶನ ಆರಂಭಿಸಲಿದ್ದೇನೆ ಎಂದರು. ಸರಕಾರಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಡಲಾಗಿದೆ ಎಂದರು. ದೇಶದ ಪ್ರಜಾಪ್ರಭುತ್ವವೇ ಬುಡಮೇಲು ಮಾಡಲಾಗುತ್ತಿದೆ, ಅದಕ್ಕಾಗಿ ನಾನು ನಿರಶನಕ್ಕೆ ಇಳಿದಿದ್ದೇನೆ. ಸಂಸತ್ತಿನಲ್ಲಿ ಜನಪರ ಕಾಳಜಿಯ ಕಾಯ್ದೆಗಳು ಚರ್ಚೆಗಳಿಲ್ಲದೇ ಜಾರಿಯಾಗುತ್ತಿವೆ. ಇದೆಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಅಣ್ಣಾ ಅಸಮಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಸಹಾಯಕ ಕಾನೂನುಗಳನ್ನು ಬಲಹೀನ ಮಾಡಿ, ಮಾಫಿಯಾಗಳಿಗೆ ಅನುಕೂಲಕರ ಕಾನೂನುಗಳು ಜಾರಿಯಾಗುತ್ತಿವೆ. ಸ್ವಾತಂತ್ರ್ಯ ನಂತರವೂ ಗುಂಡಾಗಿರಿ, ದಾದಾಗಿರಿ, ಭ್ರಷ್ಟಾಚಾರ ಎಲ್ಲವೂ ದೇಶದಲ್ಲಿ ನಡೆದಿದೆ, ಮತ್ತೇನು ಬದಲಾಗಿಲ್ಲ. ಕೆಂಪು ಮೋತಿಯವರು(British) ಹೋಗಿ, ಕಪ್ಪು ಮುಖದವರು ಇಲ್ಲಿ ಉಳಿದಿದ್ದೇ ಈ ದೇಶದ ಸ್ವಾತಂತ್ರ್ಯಾ ನಂತರದ ಸಾಧನೆ ಎಂದರು. ಬಂಡವಾಳ ಹಾಕಿದಷ್ಟು ತಿರುಗಿ ಬಾರದ್ದರಿಂದ ರೈತ ಇಂದು ಆತ್ಮಹತ್ಯೆಗೆ ಒಳಗಾಗುತ್ತಿದ್ದಾನೆ ಎಂದು ಅಣ್ಣಾ ದುಖಃ ವ್ಯಕ್ತಪಡಿಸಿದರು. ರೈತರಿಗೆ ಪಿಂಚಣಿ ಕೊಡುವ ಬಿಲ್ ಇನ್ನೂ ಸಂಸತ್ತಿನಲ್ಲಿ ಹಾಗೇ ಉಳಿದುಕೊಂಡಿದೆ ಎಂದು ಖೇದ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.