ಉತ್ತಮ ಸಮಾಜಕ್ಕಾಗಿ

ಮೂರೂವರೆ ನೂರು ವರ್ಷಗಳ ನಂತರ ಬೆಳಕಿಗೆ ಬಂದ ಬೆಳವಡಿ ಮಲ್ಲಮ್ಮನ ಇತಿಹಾಸ

0

ಬೆಳಗಾವಿ – ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ವಚನ ಸಾಹಿತ್ಯ ಬೆಳಕಿಗೆ ಬರಬೇಕಾದರೆ, ಸುಮಾರು ಎಂಟು ನೂರು ವರ್ಷಗಳ ನಂತರ ಫ.ಗು.ಹಳಕಟ್ಟಿಯವರೇ ಬರಬೇಕಾಯಿತು. ಕೆ.ಎಲ್.ಇ. ಸಂಸ್ಥೆಯ ಇತಿಹಾಸ ಬೆಳಕಿಗೆ ಬರಬೇಕಾದರೆ ಬಸವೇಶ್ವರ ಗವಿಮಠರವರೇ ಬರಬೇಕಾಯಿತು. ಅದೇ ರೀತಿ ಬೆಳವಡಿ ಮಲ್ಲಮ್ಮನ ಇತಿಹಾಸ ಮೂರೂವರೆ ನೂರು ವರ್ಷಗಳ ನ0ತರ ಬೆಳಕಿಗೆ ಬರಬೇಕಾದರೆ ಯ.ರು.ಪಾಟೀಲರವರೇ ಬರಬೇಕಾಯಿತು. ಕನ್ನಡ ಮರಾಠಿ ಭಾಷೆ ಹಾಗೂ ಸಂಸ್ಕøತಿಯ ಬಾ0ಧವ್ಯವೇ ಬೆಳವಡಿ ಮಲ್ಲಮ್ಮ ಹಾಗೂ ಛತ್ರಪತಿ ಶಿವಾಜಿ ಸಮರೋತ್ಸವÀ. ಈ ಸಮರದಲ್ಲಿ ಇಬ್ಬರ ಗೆಲುವೂ ಇದೆ. ಬೆಳವಡಿ ಇತಿಹಾಸ ಸೋತವರ ಇತಿಹಾಸವಲ್ಲ. ಗೆದ್ದವರ ಇತಿಹಾಸ.
ಬೆಳವಡಿ ರಾಣಿ ಮಲ್ಲಮ್ಮ ಸಾಂಸ್ಕøತಿಕ ಪ್ರತಿಷ್ಠಾನ, ಬೆಳವಡಿ, ತಾ. ಬೈಲಹೊಂಗಲ ಹಾಗೂ
ಹೊಂಬೆಳಕು ಸಾಂಸ್ಕøತಿಕ ಸಂಘ, ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ನಿವೃತ್ತ ತಹಸೀಲ್ದಾರ ಯ.ರು.ಪಾಟೀಲರವರು ಬರೆದ ಕರುನಾಡ ಸಿಡಿಲು ಬೆಳವಡಿ ಮಲ್ಲಮ್ಮ ಕಾದ0ಬರಿಯನ್ನು ಬಿಡುಗಡೆಗೊಳಿಸಿ ಪರಿಚಯ ಮಾಡಿ ಖ್ಯಾತ ಪತ್ರಕರ್ತರಾz ಡಾ. ಸರಜೂ ಕಾಟ್ಕರ್‍ರವರು ಹೇಳಿದರು.
ಇತಿಹಾಸವನ್ನು ಸಾಹಿತ್ಯ ರೂಪಕ್ಕೆ ಇಳಿಸುವುದು ಮಹತ್ತ್ವದ ಹಾಗೂ ಹೊಣೆಗಾರಿಕೆ ಕೆಲಸ. ಈ ಹೊಣೆಗಾರಿಕೆ ಬೆಳವಡಿ ಮಲ್ಲಮ್ಮ ಕಾದಂಬರಿಯಲ್ಲಿ ಈಡೇರಿದೆ ಎ0ದು ಮುಖ್ಯ ಅತಿಥಿಗಳ ಸ್ಥಾನದಿಂದ ಚಂದ್ರಕಾಂತ ಪೊಕಳೆಯವರು ಹೇಳಿದರು.
ಮೂರುವರೆ ನೂರು ವರ್ಷಗಳ ಹಿಂದಿನ ಇತಿಹಾಸವನ್ನು ಕಟ್ಟಿ ಕೊಡುವ ಜೊತೆಗೆ ಅಂದಿನ ಕಾಲದ ಸಾಂಸ್ಕøತಿಕ ಜಾನಪÀದೀಯ ಅಂಶಗಳನ್ನು ಬೆಳಕಿಗೆ ತರುವ ಪ್ರಯತ್ನ ಈ ಕಾದಂಬರಿಯಲ್ಲಿ ಮೂಡಿದೆ ಎ0ದು ಅಭಿನ0ದನಾಪರ ನುಡಿ ಹೇಳಿದ ಖ್ಯಾತ ವಿದ್ವಾಂಸರಾದ ಡಾ. ಗುರುಪಾದ ಮರಿಗುದ್ದಿಯವರು ಹೇಳಿದರು.
ಇದೇ ಸ0ದರ್ಭದಲ್ಲಿ ಪ್ರೊ. ಎ.ಕೆ.ಕಮತೆಯವರು ಭಾಷಾ0ತರಿಸಿದ ಮೂಲ ಮರಾಠಿ ಕೃತಿ ಶ್ರೀ ಮಾಧವ ಜೋಷಿಯವರ
‘ಆರೋಗ್ಯದ ಮಹಾಮಾರ್ಗ ಪಿ.ಎಚ್. 7.4’ ಕನ್ನಡ ಅವತರಣಿಕೆಯನ್ನು ಬಿಡುಗಡೆಗೊಳಿಸಲಾಯಿತು. ನಿವೃತ್ತ ಪ್ರಾಚಾರ್ಯರರಾದ ಜಿ.ಎ. ತಿಗಡಿಯವರು ಕೃತಿಯನ್ನು ಪರಿಚಯ ಮಾಡಿ ಪ್ರಸ್ತುತ ಉದ್ವೇಗದ ವಾತಾವರಣದಲ್ಲಿ ಆರೋಗ್ಯವನ್ಜು ಕಾಪಾಡಿಕೊಳ್ಳುವ ಕುರಿತು ಚಿಂತನೆ ವ್ಯಕ್ತಪಡಿಸಿದರು.
ವಿಶೇಷ ಅಹ್ವಾನಿತರಾದ ಕೆನಡಾ ದೇಶದ ಭಾರತೀಯ ಅನಿವಾಸಿ ಗಿರೀಶ್ ತುಳಜಣ್ಣವರ ಮಾತನಾಡಿ, ಬೆಳಗಾವಿ ಹಾಗೂ ಕೆನಡಾದಲ್ಲಿಯ ಕನ್ನಡಿಗರ ಸ್ಥಿತಿಗತಿ ಕುರಿತು ವಿವರಿಸಿದರು.
ಕನ್ನಡಿಗರಲ್ಲಿ ಇತಿಹಾಸಪ್ರಜ್ಞೆ ಇಲ್ಲ. ಉತ್ತರ ಭಾರತದ ಕಡೆಗೆ ಈ ಪ್ರಜ್ಞೆ ಹೆಚ್ಚಿಗೆ ಇದ್ದು, ಸ್ಮಾರಕಗಳನ್ನು ರಕ್ಷಿಸುತ್ತಾರೆ ಇ0ತಹ ಕಾದಂಬರಿಗಳಿಂದ ನಮ್ಮ ನೆಲದ ಇತಿಹಾಸ ಪ್ರಜ್ಞೆ ಬೆಳೆಯಲು ಸಾಧ್ಯ ಎ0ದು ಅಧ್ಯಕ್ಷ ಸ್ಥಾನದಿಂದ ಬಸವೇಶ್ವರ ಗವಿಮಠರವರು ಹೇಳಿದರು.
ಬೆಳಗಾವಿ ಕಾರಂಜಿಮಠದ ಶ್ರೀ.ಮ.ನಿ.ಪ್ರ.ಸ್ವ. ಗುರುಶಿದ್ಧೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಅನಾದಿ ಕಾಲದಿಂದಲೂ ಮಹಿಳೆಯರ ಕುರಿತು ನಮ್ಮಲ್ಲಿ ಬಂದಿರುವ ಕೀಳರಿಮೆಯ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಾತ್ರ ಜಾತಿ ಮತ ನೋಡದೇ ಮಹಿಳೆಯರಿಗೆ ಮಾತೃ ಸ್ಥಾನ ನೀಡಿದ್ದು ವಿಶೇಷÀ ಸಂಗತಿಯಾಗಿದೆಯೆಂದು ಹೇಳಿ, ಇಂತಹ ಕಾದಂಬರಿಗಳು ಚಲನಚಿತ್ರ ಮತ್ತು ಧಾರಾವಾಹಿಗಳಾಗಿ ರಾಜ್ಯದ ಮನೆ ಮನಗಳಿಗೆ ತಲುಪಬೇಕೆಂದು ಹೇಳಿದರು.
ಕಾದಂಬರಿ ರಚಿಸಿದ ಯ.ರು.ಪಾಟೀಲರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೃತಿಯ ರಚನೆಗೆ ಪ್ರೋತ್ಸಾಹ ನೀಡಿದವರನ್ನು ಸ್ಮರಿಸಿದರು.
ಬೆಳವಡಿ ಗ್ರ್ರಾಮದ ಪ್ರಕಾಶ ಹುಂಬಿ ಸ್ವಾಗತಿಸಿದರು. ಬೆಳಗಾವಿ, ಕಸಾಪ ಜಿಲ್ಲಾ ಘಟಕ ನಿಕಟಪೂರ್ವ ಕಾರ್ಯದರ್ಶಿಗಳಾದ ಬಸವರಾಜ ಗಾರ್ಗಿಯವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಅ.ಬ.ಕೊರಬು ವ0ದನಾರ್ಪಣೆ ಮಾಡಿದರು. ಡಾ. ಬಸವರಾಜ ಜಗಜಂಪಿ, ಎಂ.ಎಸ್.ಇಂಚಲ, ಸ.ರಾ.ಸುಳಕೂಡೆ, ಬೆಳವಡಿ ಗ್ರಾಮಸ್ಥರು, ಕಸಾಪ ಗೌರವ ಕಾರ್ಯದರ್ಶಿ ಜ್ಯೋತಿ ಬದಾಮಿ, ಶೈಲಜಾ ಬಿಂಗೆ, ನಿರ್ಮಲಾ ಭಟ್ಟಲ, ಲೇಖಕಿಯರ ಸಂಘದ ಅಧ್ಯಕ್ಷೆ ದೀಪಿಕಾ ಚಾಟೆ,ಎಸ್.ಬಿ.ಮಲ್ಲಣ್ಣವರ, ವಿ.ಆರ್. ಬಾಗೋಜಿ ಮುಂತಾದವರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.