ಉತ್ತಮ ಸಮಾಜಕ್ಕಾಗಿ

ಒಂದು ದಿನದ ಹೆಂಡತಿ

0

ಒಂದು ದಿನದ ಹೆಂಡತಿ  ಭಾಗ 1

ಹಂಚಿನ ಮೇಲೆ ಟಪ್…ಟಪ್ ಶಬ್ಧ ಹೊರಗೆ ಇಣುಕಿದೆ. ಸುಳಿವು ಕೊಡದೆ ಮಳೆರಾಯ ಬಂದಿದ್ದ! ತನ್ನ ಜೊತೆ ತಣ್ಣನೆ ಗಾಳಿಯ ತಂದಿದ್ದ.
ತಲೆಯ ಮೇಲೆ ಪಟ್.. ಪಟ್.. ಆಣೆಕಲ್ಲುಗಳು ಒಂದೊಂದೆ ಬೀಳುತ್ತಿದ್ದವು. ಹಿಂದೆ ನಮ್ಮಜ್ಜ ಆಣೆಕಲ್ಲು ಎತ್ತಿ ಬಾಟಲಿಯಲ್ಲಿ ಇಡುತ್ತಿದ್ದದ್ದು ನೆನಪಾಯಿತು.
ಎತ್ತಿ ಬಾಯಲ್ಲಿಟ್ಟೆ ಕರಗಿ ನೀರಾಯಿತು. ಬಾಗಿಲು ಮುಚ್ಚಿ ಒಳಗೆ ಬಂದೆ ಕಾಟ್ ಮೇಲೆ ಒರಗಿ ಕಣ್ಣು ಮುಚ್ಚಿದೆ. ಅವಳು ನೆನಪಾದಳು. ಹಿಂದೆ ಅವಳು ಇಂತಹುದೆ ಒಂದು ದಿನ ಭಾರಿ ಮಳೆಯಲ್ಲಿ ನನ್ನ
ಜೊತೆ ಕಣ್ಣೊಳಗೆ ಕಣ್ಣಿಟ್ಟು ಆ ಮುಗ್ಧ ಹುಡುಗಿ ನೆನಪಾದಳು. ಆ ಕಣ್ಣುಗಳಲ್ಲಿ ಎಷ್ಟೊಂದು ಆಸೆಗಳಿದ್ದವು. ಕನಸುಗಳಿದ್ದವು…! ಅವಳು ಕಣ್ಣೆದುರಿಗೆ ಕುಳಿತು ನನ್ನನೆ ದಿಟ್ಟಿಸಿ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಳು.
ನಾನೊಂದಕ್ಕೂ ಉತ್ತರಿಸಲಿಲ್ಲ ಮುಗಿಲಿನಿಂದ ಆನೆಕಲ್ಲು ಕೆಳಗುರಳಿ ಕರಗಿ ಹೋಗುವಂತೆ ಬದಕಲ್ಲಿ ಧುಮುಕಿ ಮರೆಯಾದಳು. ಈ ಮೂರು ವರುಷಗಳಲ್ಲಿ ಎಲ್ಲಿಯೂ ಅವಳು ಸಿಗಲಿಲ್ಲ .
ಹುಡುಕಾಡಿದೆ ಹೌದು….. ಅವಳನ್ನು ನನ್ನಿಂದ ಮರೆಯಾಗುವಂತೆ ಮಾಡಿದ ನಾನು ಮತ್ತೊಮ್ಮೆ ಅವಳಿಗಾಗಿ ಹುಡುಕಾಡಿದೆ. ಅವಳು ಸಿಗಲಿಲ್ಲ…! ಮರೆಯಾದ ಆ ಮುಗ್ಧ ಹುಡುಗಿ ಸಿಗಲಿಲ್ಲ.

ಲೇಖಕಿ ಪ್ರೇಮಾ ನಡುವಿನಮನಿ ಧಾರವಾಡ.

Leave A Reply

 Click this button or press Ctrl+G to toggle between Kannada and English

Your email address will not be published.