ಉತ್ತಮ ಸಮಾಜಕ್ಕಾಗಿ

ಕಾಯ್ದೆ ಮುರಿದ್ರೆ, ಕಾಲು ಮುರಿತೀವಿ: ಕಮಿಷ್ನರ್ ಎಚ್ಚರಿಕೆ

0

ಬೆಳಗಾವಿ: ಅಧಿಕಾರ ವಹಿಸಿಕೊಂಡ ಎರಡನೆ ದಿನದಲ್ಲಿ ನೂತನ ಕಮಿಷ್ನರ್ ಡಿ. ಸಿ. ರಾಜಪ್ಪ ಇಂದು ಬೆಳಂಬೆಳಿಗ್ಗೆ ರೌಡಿ ಪರೇಡ್ ನಡೆಸಿದರು. ನಗರ ವ್ಯಾಪ್ತಿಯ ಎಲ್ಲ ಠಾಣೆಗಳ ಅಪರಾಧಿಗಳು ಹಾಗೂ ರೌಡಿಗಳ ಪರೇಡ್ ನಡೆಸಿ ಪ್ರತಿಯೊಬ್ಬನ ವಿಚಾರಣೆ ನಡೆಸಿ ಎಚ್ಚರಿಕೆ, ಬುದ್ದಿವಾದ ಹೇಳಿದರು.
ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಕನ್ನಡ ಹೋರಾಟಗಾರರ ಬಗ್ಗೆ ಕಮಿಷ್ನರ್ ತುಸು ಮೃದು ಧೋರಣೆ ತೋರಿಸಿ ಕ್ಷಮಿಸುವ ಭರವಸೆ ನೀಡಿದರು. ಸರ ಕದಿಯುವ ಆರೋಪಿಗಳನ್ನು ಪ್ರತ್ಯೇಕ ಕರೆದು ಕೂಲಂಕೂಷ ವಿಚಾರ ಮಾಡುವುದಾಗಿ ತಿಳಿಸಿದ ಕಮಿಷ್ನರ್ ಪ್ರತಿ ಸ್ಟೇಷನ್ ನಿಂದ ಲಿಸ್ಟ್ ಮಾಡಲು ಸೂಚಿಸಿದರು. ಕಾಯ್ದೆ ಮುರಿದರೆ, ಕಾಲು ಮುರಿತೀವಿ ಎಂದು ಎಚ್ಚರಿಸಿದರು. ಡಿಸಿಪಿ ಸೀಮಾ ಲಾಟಕರ ಉಪಸ್ಥಿತರಿದ್ದರು. ಮಾರ್ಕೇಟ್, ಖಡೇಬಜಾರ್, ಎಪಿಎಂಸಿ, ಶಹಾಪುರ, ಹಿರೇಬಾಗೇವಾಡಿ, ಟಿಳಕವಾಡಿ, ಮಾಳಮಾರುತಿ, ಮಾರಿಹಾಳ ಸೇರಿದಂತೆ ಎಲ್ಲ ಠಾಣೆಗಳ ರೌಡಿಗಳನ್ನು ಕಮಿಷ್ನರ್ ಎದುರು ಹಾಜರುಪಡಿಸಲಾಯಿತು.
ಮಾರ್ಕೇಟ್ ಎಸಿಪಿ ಶಂಕರ ಮಾರಿಹಾಳ, ಖಡೇಬಜಾರ್ ಎಸಿಪಿ ಗುಡಾಜ್, ಜಾವೇದ್ ಮುಶಾಪುರಿ, ಜೆ. ಎಂ. ಕಾಲಿಮಿರ್ಚಿ, ರಮೇಶ ಗೋಕಾಕ, ಪ್ರಶಾಂತ, ಕೇಶವ ಟಿಂಗರಿಕರ ಸೇರಿ ಎಲ್ಲ ಠಾಣೆಗಳ ಇನ್ಸಪೆಕ್ಟರಗಳು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: