ಉತ್ತಮ ಸಮಾಜಕ್ಕಾಗಿ

ಸನದಿ ಅವರ ಕೃತಿ ಬಿಡುಗಡೆ

0

ಬೆಳಗಾವಿ :ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ನಿನ್ನೆ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಎ.ಎ.ಸನದಿ ಅವರು ಬರೆದ`ಶ್ರವಣಬೆಳಗೊಳದ ಗೊಮ್ಮಟೇಶ್ವರ ಕೃತಿಯನ್ನು ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯದ ನಿವೃತ್ತ ಕುಲಸಚಿವರಾದ ಶಾಂತಿನಾಥ ದಿಬ್ಬದ ಅವರು ಬಿಡುಗಡೆ ಮಾಡಿದರು.
ಮುಂದಿನ ತಿಂಗಳಲ್ಲಿ ನಡೆಯುವ ಗೊಮ್ಮಟೇಶ್ವರ ಮಹಾಮಸ್ತಾಕಾಭಿಷೇಕದ ಹಿನ್ನೆಲೆಯಲ್ಲಿ ಈ ಪುಸ್ತಕ ರಚಿಸಲಾಗಿದೆ.ಈ ಸಂದರ್ಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುಷ್ಪದಂತ ದೊಡ್ಡಣ್ಣವರ, ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ,ಕೋಶಾಧ್ಯಕ್ಷ ಶ್ರೀಪಾಲ ಖೇಮಲಾಪುರೆ ಹಾಗೂ ನೂರಾರು ಗಣ್ಯರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.