ಉತ್ತಮ ಸಮಾಜಕ್ಕಾಗಿ

ಗ್ಯಾಂಗ್ ವಾಡಿ ಇನ್ಮುಂದೆ ‘ಮರಗಾಯಿ

0

ಬೆಳಗಾವಿ: ಹಲವಾರು ವರ್ಷಗಳಿಂದ ‘ಗ್ಯಾಂಗ್ವಾಡಿ’ ಎಂದು ಕುಖ್ಯಾತಿಯ ಹೆಸರು ಪಡೆದಿದ್ದ ಪ್ರದೇಶವನ್ನು ‘ಮರಗಾಯಿ’ ನಗರ ಎಂದು ಮರುನಾಮಕರಣ ಮಾಡಲಾಗಿದೆ. ಬೆಳಗಾವಿ ಉತ್ತರ ಶಾಸಕ ಫಿರೋಜ್ ಸೇಠ್ ನೆತೃತ್ವದಲ್ಲಿ ಮರಗಾಯಿ ನಗರ ಹೆಸರು ಚಾಲ್ತಿಗೆ ತರಲಾಯಿತು.
ಬೆಳಗಾವಿ ನಗರದ ಅಶಾಂತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದ ಈ ಪ್ರದೇಶ ಚಿಕ್ಕ ವಾಸದ ಮನೆಗಳನ್ನು ಹೊಂದಿರುವ ಕಡುಬಡವರ ಜನವಸತಿ ಪ್ರದೇಶವಾಗಿದೆ. ಎಸ್ಪಿ ಕಚೇರಿ ಕೂಗಳತೆಯ ಈ ಪ್ರದೇಶ ಆಗಾಗ ಅಶಾಂತಿಯ ಘಟನೆಗಳಿಗೆ ಕಾರಣವಾಗಿಗ್ಯಾಂಗ್ ವಾಡಿಎಂದೆ ನಗರಿಗರಿಗೆ ಚಿರಪರಿಚಿತವಾಗಿತ್ತು.
ಹೆಸರು ನಾಮಕರಣದ ವೇಳೆ ಪ್ರದೇಶ ವಾಸಿಗಳು ಹರುಷಗೊಂಡಿದ್ದು, ಶಾಸಕ ಫಿರೋಜ್ ಸೇಠ್ ಅವರೊಂದಿಗೆ ಹಸ್ತಲಾಘವ ಮಾಡಿ ಸಂತಸ ವ್ಯಕ್ತಪಡಿಸಿದರು. ಶಾಂತಿ, ಸ್ವಚ್ಛತೆ ಮತ್ತು ಸೌಹಾರ್ಧಯುತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಫಿರೋಜ್ ಸೇಠ್ ತಮ್ಮ ಭೇಟಿ ವೇಳೆ ನಾಗರಿಕರಿಗೆ ಮನವರಿಕೆ ಮಾಡಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ರಾಜು ಸೇಠ್ ಹಾಗೂ ಫೈಜಾನ್ ಸೇಠ್ ಹಾಗೂ ಇತರ ಮುಖಂಡರು ನೂತನ ಮರಗಾಯಿ ನಗರಕ್ಕೆ ಭೇಟಿ ನೀಡಿ ಶುಭ ಕೋರಿದರು.

Leave A Reply

 Click this button or press Ctrl+G to toggle between Kannada and English

Your email address will not be published.