ಉತ್ತಮ ಸಮಾಜಕ್ಕಾಗಿ

ಅಪಹರಣ: ಐವರು ಪೊಲೀಸ್ ವಶಕ್ಕೆ

0

ಬೆಳಗಾವಿ: ಹಣದ ವ್ಯವಹಾರ ಸಂಬಂಧ ವ್ಯಕ್ತಿಯನ್ನು ಅಪಹರಣ ಮಾಡಿದ್ದ ಐವರು ಆರೋಪಿತರನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಸೂಳೆಬಾವಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಬೆಳಗಾವಿಯವರಾದ ವಿನಾಯಕ ವಸಂತ ಪಾಟೀಲ (39),  ಪ್ರಮೋದ ಪ್ರಭಾಕರ ಯಾಳಗಿ (25), ಪ್ರಶಾಂತ ದೇವನ (37), ಗಜಾನನ ದೇವರಮನಿ (21) ಹಾಗೂ ಶ್ಯಾಮ ಪಾಟೀಲ (37) ಬಂಧಿತರು. ಹಣಕಾಸಿನ ವ್ಯವಹಾರ ಸಂಬಂಧ ಸುಳೆಭಾವಿ ಗ್ರಾಮದ  ನಾಗರಾಜ ಬಸವರಾಜ ಪರೀಟ ಎಂಬಾತನನ್ನು ಶನಿವಾರ ತಡರಾತ್ರಿ ಅಪರಣ ಮಾಡಿದ್ದರು. ಈ ಕುರಿತು ಕುಟುಂಬಸ್ಥರು ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಭಾನುವಾರ ಮತ್ತೆ ಸುಳೇಭಾವಿ ಗ್ರಾಮಕ್ಕೆ ಬಂದು ಹಣ ನೀಡುವಂತೆ ಒತ್ತಾಯಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಮಾರಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.