ಉತ್ತಮ ಸಮಾಜಕ್ಕಾಗಿ

ನಗಿಸುವುದೊಂದೆ ಉದ್ದೇಶವಾಗಬಾರದು: ಗುಂಡೇನಟ್ಟಿ ಮಧುಕರ

0

ಹಾರುಗೇರಿಯಲ್ಲಿ ನಡೆದ 12 ನೇ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಸ್ಯಲಾಸ್ಯ ಕಾರ್ಯಕ್ರಮ
ಭಾಷಣಕಾರನಿಗೆ ನಗಿಸುವುದೊಂದೆ ಉದ್ದೇಶವಾಗಬಾರದು: ಗುಂಡೇನಟ್ಟಿ ಮಧುಕರ
ಬೆಳಗಾವಿ – ಹಾಸ್ಯ ಭಾಷಣವೇ ಆಗಲಿ, ಬರವಣಿಗೆಯೇ ಆಗಲಿ ನಗಿಸುವುದೊಂದೆ ಉದ್ದೇಶವಶಾಗಿರಬಾರದು. ನಗುವಿನೊಮದಿಗೆ ಸಮಾಜವನ್ನು ತಿದ್ದುವ ಕಾರ್ಯವೂ ಅದರೊಂದಿಗಿರಬೇಕು. ಅಂಥ ಮಾತು, ಬರವಣಿಗೆ ಮಾತ್ರ ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯ ಎಂದು ನಗೆಬರಹಗಾರ, ಹಾಸ್ಯ ಸಂಚಾಲಕ ಗುಂಡೇನಟ್ಟಿ ಮಧುಕರ ಇಂದಿಲ್ಲಿ ಹೇಳಿದರು.
ಹಾರುಗೇರಿಯಲ್ಲಿ ನಡೆದ 12 ನೇ ಬೆಳಗಾವಿಜಿಲ್ಲಾ ಸಾಹಿತ್ಯ ಸಮ್ಮೇಳನ ‘ಹಾಸ್ಯಲಾಸ್ಯ’ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಗುಂಡೇನಟ್ಟಿ ಮೇಲಿನಂತೆ ಅಭಿಪ್ರಾಯ ಪಟ್ಟರು.
ಬೀಚಿ, ಕೈಲಾಸಂ, ಎನ್ಕೆ, ಕಲ್ಲೋಳ, ಟಿ ಸುನಂದಮ್ಮ ಮುಂತಾದವರ ಕೃತಿಗಳು ಇಂದಿಗು ಜೀವಂತವಿರಲು ಮುಖ್ಯ ಕಾರಣವೆಂದರೆ ಅವರ ಕೃತಿಗಳಲ್ಲಿರುವ ಸಾಮಾಜಿಕ ಕಳಕಳಿ ಎಂದು ಅವರು ಹೇಳಿದರು.
ಕೊಟೇಶನ್ ಕಿಂಗ್ ಎಂದೇ ಹೆಸರಾದ ಬೈಲಹೊಂಗಲದ ಎಂ.ಬಿ. ಹೊಸಳ್ಳಿ ಕನ್ನಡ ನಾಡು ನುಡಿಯ ಕುರಿತು ಕಳಕಳಿಯನ್ನು ಹೊಂದಿರಬೇಕು. ಹಿರಿಯರನ್ನು ಗೌರವಿಸಬೇಕು ಎಂಬ ಸಂದೇಶದೊಂದಿಗೆ ಹಲವಾರು ನಗೆ ಪ್ರಸಂಗ ಹಾಗೂ ನಾಮಾಂಕಿತರ ಉಕ್ತಿಗಳ ಉದಾಹರಣೆಗಳೊಂದಿಗೆ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಮಕ್ಕಳೆದುರಿನಲ್ಲಿ ಪಾಲಕರು ಜಗಳ ಕಾಯುವುದರಿಂದ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪರಿಣಾಮ ಕುರಿತು ಲಘುವಾದ ಶೈಲಿಯಲ್ಲಿ ಹೇಳುತ್ತ ಜನರನ್ನು ನಗಿಸುವಲ್ಲಿ ಯಶಸ್ವಿಯಾದರು.
ವಿಶ್ವನಾಥ ಕುಂಬಾರ ತಮ್ಮ ಮಿಮಿಕ್ರಿ ಮುಖಾಂತರ ಗ್ರಾಮೀಣ ಭಾಗದಲ್ಲಿ ನಡೆಯುವ ಅವಾಂತರಗಳನ್ನು ಹೇಳಿದರು.
ರಾಜಕಾರಣಿ ಹಾಗೂ ಚಲನಚಿತ್ರ ನಟರ ಮಿಮಿಕ್ರಿಯನ್ನು ಮಾಡಿ ಜಿ. ಎಸ್. ಸೋನಾರ ಚಪ್ಪಾಳೆ ಗಿಟ್ಟಿಸಿಕೊಂಡರು.
ಎಂ. ವಾಯ್ ಮೆಣಸಿನಕಾಯಿ ನಿರೂಪಸಿದರು. ಮಹಾಂತೇಶ ಉಕ್ಕಲಿ ಸ್ವಾಗತಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.