ಉತ್ತಮ ಸಮಾಜಕ್ಕಾಗಿ

ಬಿ. ಬಿ. ಪಾಟೀಲ ಇಂದು ಚಾರ್ಜ್ RC ಮೇಘನ್ನವರ, IG ಅಲೋಕಕುಮಾರ,

0

ಬೆಳಗಾವಿ: ಉತ್ತರವಲಯ ಬೆಳಗಾವಿಯ IGPಯಾಗಿ ಅಲೋಕಕುಮಾರ ಇಂದು ಅಧಿಕಾರ ವಹಿಸಿಕೊಂಡರು.
ಕಲಬುರ್ಗಿ ಐಜಿಪಿಯಾಗಿದ್ದ ಅಲೋಕಕುಮಾರ ಅವರನ್ನು ಬೆಳಗಾವಿ ಐಜಿ ಆಗಿ ಸರಕಾರ ಆದೇಶ ಹೊರಡಿಸಿತ್ತು.
1996ರ ಐಪಿಎಸ್ ತಂಡದ ಅಲೋಕಕುಮಾರ ನವ್ಹೆಂಬರ್ 27, 1997 ರಲ್ಲಿ ಬೈಲಹೊಂಗಲ ಎಎಸ್ಪಿಯಾಗಿ ಕೆಲಸ ಪ್ರಾರಂಭಿಸಿ ಅತಿ ಕಟ್ಟುನಿಟ್ಟಿನ ಅಧಿಕಾರಿಯೆಂದು ಹೆಸರು ಗಳಿಸಿದ್ದ ಅವರು ಸುದೀರ್ಘ 19 ವರ್ಷಗಳ ನಂತರ ಮತ್ತೆ ವಲಯ ಮುಖ್ಯಸ್ಥರಾಗಿ ಇಂದು ಹಿಂದಿರುಗಿದರು. ಜುಲೈ 1998 ಎಸ್ಪಿ ಮತ್ತು SSP ಹುದ್ದೆಗೆ ಬೆಳಗಾವಿ ಜಿಲ್ಲೆಯಲ್ಲೇ ಬಡ್ತಿ ಪಡೆದು ನಂತರ ಕರಾವಳಿ ಕಾವಲು ಪಡೆ ಎಸ್ಪಿಯಾಗಿ ತೆರಳಿದ್ದರು. 2000ರಲ್ಲಿ ಚಿತ್ರದುರ್ಗ ಎಸ್ಪಿ ನಂತರ ದಾವಣಗೆರೆ ಎಸ್ಪಿಯಾಗಿ, ಬೆಂಗಳೂರು ನಗರ ದಕ್ಷಿಣ ವಿಭಾಗದ ಡಿಸಿಪಿ, ಸಿಐಡಿ ಎಸ್ಪಿಯಾಗಿ ನಂತರ 2003-04ರಲ್ಲಿ ಯುರೋಪ್ ಖಂಡದ ಕೊಸೊವೊ ದೇಶದಲ್ಲಿ Peace Keeping Force ನಲ್ಲಿ ಕೆಲಸ ನಿರ್ವಹಿಸಿದ್ದಾರೆ. 2009ರಲ್ಲಿ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ, ಹೆಚ್ಚುವರಿ ಆಯುಕ್ತ ಪಶ್ಚಿಮ ಮತ್ತು ಹೆಚ್ಚುವರಿ ಆಯುಕ್ತ (L&O), ನಕ್ಸಲ್ ನಿಗ್ರಹ ಪಡೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದ ಅಲೋಕಕುಮಾರ ಈ ಮುಂಚೆ ಕಲಬುರ್ಗಿ ವಲಯ ಐಜಿ ಆಗಿದ್ದರು. ಬೆಳಗಾವಿ ವಲಯ ಶಾಂತ ವಲಯ, ಸಣ್ಣ ಪುಟ್ಟ ಘಟನೆಗಳನ್ನು ತಹಬದಿಗೆ ತರಬೇಕಾಗಿದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕು ಮತ್ತಿತರ ಪ್ರದೇಶಗಳು, ಬೆಳಗಾವಿ ಜಿಲ್ಲೆಯ ಗೋಕಾಕ- ಬೈಲಹೊಂಗಲ ಸೇರಿ ಸೂಕ್ಷ್ಮ ಎನ್ನಿಸಿಕೊಂಡ ಪ್ರದೇಶಗಳನ್ನು ಸರಿ ದಾರಿಗೆ ತರಲಾಗುವುದು ಎಂದು ಮನದಿಂಗಿತ ಅಲೋಕಕುಮಾರ ಹಂಚಿಕೊಂಡಿದ್ದಾರೆ.
ಗಾರ್ಡ್ ಆಫ್ ಆನರ್ ಸ್ವೀಕರಿಸಿದ ನಂತರ ಅಲೋಕಕುಮಾರ ವಲಯದ ಎಸ್ಪಿಗಳು, ಅಡಿಷನಲ್ ಎಸ್ಪಿ ಮತ್ತು ಡಿಎಸ್ಪಿಗಳ ಸಭೆ ನಡೆಸಿದರು.
RC ಚಾರ್ಜ್:ಬೆಳಗಾವಿ ಪ್ರಾದೇಶಿಕ ಅಯುಕ್ತರಾಗಿ ಪಿ. ಎ. ಮೇಘನ್ನವರ ಇಂದು ಅಧಿಕಾರ ವಹಿಸಿಕೊಂಡರು. ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಮೇಘನ್ನವರ ಬಾಗಲಕೋಟ ಜಿಲ್ಲಾಧಿಕಾರಿಯಾಗಿ ತೆರಳಿದ್ದರು. ನಂತರ ಮೈಸೂರು ಆರ್ ಸಿ ಆಗಿ ವರ್ಗಾವಣೆ ಆಗಿದ್ದ ಅವರ ವರ್ಗಾವಣೆ ಮಾರ್ಪಡಿಸಿ ಸರಕಾರ ಬೆಳಗಾವಿ RC ಯಾಗಿ ನೇಮಿಸಿದೆ.
ಅಡ್ಮಿನಿಸ್ಟ್ರೇಟರ್:ಘಟಪ್ರಭಾ & ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (CADA) ಆಡಳಿತಾಧಿಕಾರಿಯಾಗಿ ಐಎಫ್ಎಸ್ ಅಧಿಕಾರಿ ಬಿ. ವಿ. ಪಾಟೀಲ ಸಹ ಇಂದೇ ಅಧಿಕಾರ ವಹಿಸಿಕೊಂಡರು. ಈ ಮುಂಚೆ ಬೆಳಗಾವಿ ಡಿಸಿಎಫ್ ಆಗಿದ್ದ ಪಾಟೀಲ ಅವರನ್ನು ಅಡ್ಮನಿಸ್ಟ್ರೇಟರ್ ಆಗಿ ಸರಕಾರ ಬೆಳಗಾವಿಯಲ್ಲೆ ನೇಮಿಸಿದೆ. ಜತೆಗೆ ಡಿಸಿಪಿಯಾಗಿ ಮಹಾನಂದ ನಂದಗಾವಿ, ಎಸಿಬಿ ಎಸ್ಪಿಯಾಗಿ ಅಮರನಾಥರೆಡ್ಡಿ ಅಧಿಕಾರ ವಹಿಸಿಕೊಳ್ಳುವರು.

Leave A Reply

 Click this button or press Ctrl+G to toggle between Kannada and English

Your email address will not be published.