ಉತ್ತಮ ಸಮಾಜಕ್ಕಾಗಿ

DSS ಕಪ್ಪುಬಾವುಟ ಪ್ರದರ್ಶನ:ಪೊಲೀಸ್ ವಶಕ್ಕೆ

0

ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಬೆಳಗಾವಿ ಡಿಎಸ್ ಎಸ್ ಸಂಘಟನೆಯ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಲು ಯತ್ನಿಸಿ ಬಂಧನಕ್ಕೊಳಗಾದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಗೆ ಕಾಯ್ದಿದ್ದ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಹಿಡಿದು ಕಾರಿಗೆ ಅಡ್ಡಾಗಲು ಬರುತ್ತಿದ್ದಂತೆ ಎಸಿಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಕಾರ್ಯಕರ್ತರನ್ನು ತಡೆಯಲಾಯಿತು.
ಆಕ್ರೋಶದಿಂದ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ್ದರಿಂದ ಒಟ್ಟಾದ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ, ನೂಕು ನುಗ್ಗಲು ವ್ಯಕ್ತವಾಯಿತು. ಚನ್ನಮ್ಮ ವೃತ್ತದಲ್ಲಿ ಎಲ್ಲ ದಲಿತಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಜೆ ಪಡೆದ ಪೊಲೀಸರು ಬಸ್ಸಿನಲ್ಲಿ ದೂರ ಕರೆದೊಯ್ದು ಬಿಡುಗಡೆಗೊಳಿಸಿದರು. ಸಚಿವರ ಕಾರ್ಯಕ್ರಮ ಸ್ಥಳವಾದ ಕನ್ನಡ ಸಾಹಿತ್ಯ ಭವನದಲ್ಲಿ ಭಾರಿ ಬಂದೊಬಸ್ತ್ ಹಾಕಲಾಗಿತ್ತು. ಡಿಸಿಪಿ ಸೀಮಾ ಲಾಟಕರ ಭದ್ರತಾ ಹೊಣೆ ಹೊತ್ತು ಪರಿಶೀಲಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.