ಉತ್ತಮ ಸಮಾಜಕ್ಕಾಗಿ

ಒಂದು ದಿನದ ಹೆಂಡತಿ ಭಾಗ-3

0

ಒಂದು ದಿನದ ಹೆಂಡತಿ ಭಾಗ-3
ಮಾರನೆಯ ದಿನ ಬೇಗ ಬೇಗ ತಯಾರಾಗಿ ಕೆರೆಯಕಡೆ ಚಲಿಸಿದೆ. ಆಶ್ಚರ್ಯ! ಆ ಹುಡಗಿ ಆ ಬೆಂಚಿನ ಮೇಲೆ ಆಗ ಕುಳಿತಿದ್ದಳು. ಇವತ್ತು ಕೂಡಾ ಹಾಗೆ
ಕುಳಿತಿದ್ದಳು… ಒಂದೇ ನೇರ ದೃಷ್ಟಿ ಅವಳಲ್ಲಿ ಯಾವ ಬದಲಾವಣೆಯೇ ಇಲ್ಲ…! ಇಂದು ತಿಳಿ ಹಳದಿಯ ಸೀರೆ. ಚಿಕ್ಕ ಚಿಕ್ಕ ಹೂವುಗಳನ್ನು ಹೆಣೆದಿದ್ದ ಆ ಸೀರೆ ಅವಳಿಗೆ ಒಪ್ಪಿತು.
ನಾನು ಅವಳನ್ನು ಮಾತನಾಡಿಸುವ ತವಕದಲ್ಲಿದ್ದೆ. ಹೇಗೆ ಮಾತನಾಡಿಸುವುದು? ಯೋಚಿಸಿದ್ದೆ ಅವಳು ಬೆಂಚಿನ ಮೇಲಿಂದ ಎದ್ದಳು. ನನ್ನ ಕಡೆ ಬರತೊಡಗಿದಳು. ಯಾಕೆ ? ಎದೆ
ಹೊಡೆಯತೂಡಗಿತು. ನಿನ್ನೆಯಿಂದ ಒಂದೇ ಸಮನೇ ಆಕೆಯನ್ನು ನೋಡುತ್ತಿದ್ದೆ. ಅವಳು ನನ್ನನ್ನು ಪೋಲಿ ಅಂತ ತಿಳಿದಿರಬೇಕು. ಅವಳು ಹತ್ತಿರ ಹತ್ತಿರ ಬಂದಷ್ಟು ಎದೆಯ ಬಡಿತ
ಏರುತ್ತಿತ್ತು. ಏನು ಮಾಡುವಳೊ? ಯೋಚಿಸುತ್ತಿದ್ದೆ. ಹತ್ತಿರ ಬಂದ ಅವಳು,
“ಏಕ್ಸ್‍ಕ್ಯೂಸ್ ಮಿ!” ಸ್ವಲ್ಪ ಪೆನ್ನು ಕೊಡ್ತಿರಾ? ಕೇಳಿದಳು. ನಾನು ಪೆನ್ನು ಕೂಟ್ಟೆ ಮತ್ತೆ ಹಿಂದಕ್ಕೆ ಹೋಗಿ ಕುಳಿತು ಏನೇನೊ ಬರೆದಳು. ನಾನು ಅವಳನ್ನು ನೋಡ್ತಾ ಇದ್ದೆ. ಮತ್ತೆ
ಹತ್ತಿರ ಬರತೊಡಗಿದಳು. “ಪೆನ್ನು ತೊಗಳ್ಳಿ ಥ್ಯಾಂಕ್ಸ್ ಎಂದಳು.”
“ಇರಲಿಬಿಡಿ” ಎಂದೆ…..
ನಾನು ಸುಮ್ಮನೆ ಇರದೇ, “ನೀವು ಪ್ರತಿನಿತ್ಯ ಬರ್ತಿರಾ?” ಎಂದು ಕೇಳಿದೆ.
“ಹೌದು..!” ಎಂದಳು
“ನೀವು?” ತಿರುಗಿ ಕೇಳಿದಳು.
“ಇಲ್ಲ” ಎಂದೆ. ಹೀಗೆ ಯಾವಾಗಲಾದರೂ ಒಂದೊಂದು ಸಲ ಎಂದು ಉತ್ತರಿಸಿದೆ.
“ಬರ್ತಿನಿ” ಎಂದು ನನ್ನ ಉತ್ತರಕ್ಕೂ ಕಾಯದೇ ನಡೆದೇ ಬಿಟ್ಟಳು.
ಒಳ್ಳೆಯ ಹುಡುಗಿ ಏನೋ ನೋವಿದೆ. ಆದರೆ ಆಕೆಯಲ್ಲಿ ಸಹನೆ ಮನೆಮಾಡಿ ನೋವು ಮರೆಮಾಚಿದೆ. ಕಾರಣವೇನು ? ಮನಸ್ಸು ಪ್ರಶ್ನಿಸಿತು. ಮತ್ತೊಮ್ಮೆ ಅದೇ ಹಂಬಲ,
ಮತ್ತೆ ಸಿಗುವಳೆ? ಎಂಬ ಪ್ರಶ್ನೆ ಗಾಢವಾಗಿ ಮನದಲ್ಲಿ ನೆಲೆಯೂರಿತು. ಅವತ್ತಿನಿಂದ ನಾನು ಪ್ರತಿದಿನ ಅದೇ ಸಮಯಕ್ಕೆ ಕೆರೆ ಕಡೆ ಹೋಗಲು ಶುರುಮಾಡಿದೆ. ಆದರೆ ಅವಳನ್ನು
ಮಾತನಾಡಿಸಲಿಲ್ಲ. ಅವಳು ನನ್ನ ನೋಡಿ ನಾನು ಅವಳನ್ನು ನೋಡಿ ಮುಗುಳುನಗೆ ನಗುವುದು ಮಾತ್ರ ತಪ್ಪದೆ ನಡಿತಾ ಇತ್ತು. ಸ್ವಲ್ಪ ದಿನದ ನಂತರ ಅವಳು ಕೆರೆಯ ಕಡೆ ಕಾಣಲೆ
ಇಲ್ಲ. ನನ್ನ ಮನಸು ಕಾಣಲು ತವಕಿಸಿತು. ಅರ್ಥವಾಗಲಿಲ್ಲ ಯಾಕೆಂದು? ಅವಳು ಯಾರೋ ಏನೋ ಗೋತ್ತಿಲ್ಲ. ಈಗಷ್ಟೇ ಅವಳು ನನಗೆ ಗೊತ್ತು. ಗೊತ್ತು…! ಏನು ಗೊತ್ತು ? ಹೆಸರು
ಗೊತ್ತೆ? ಇಲ್ಲ… ಮನೆ, ಮನೆಯವರು ಯಾರೂ ಗೊತ್ತಿಲ್ಲ ಆದರೂ ಯಾಕೆ ಹೀಗೆ ಆಗ್ತಾ ಇದೆ ತಿಳಿಯಲಿಲ್ಲ. ಮತ್ತೊಮ್ಮೆ ಸಿಕ್ಕರೆ ಹೆಸರನ್ನಾದರೂ ಕೇಳೋಣ ಅನಿಸಿತು.

ಲೇಖಕಿ ಪ್ರೇಮಾ ನಡುವಿನಮನಿ

Leave A Reply

 Click this button or press Ctrl+G to toggle between Kannada and English

Your email address will not be published.