ಉತ್ತಮ ಸಮಾಜಕ್ಕಾಗಿ

ಪ್ರಕಟಣೆಗಳು

0

ಅರಿವು ಶೈಕ್ಷಣಿಕ ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬೆಳಗಾವಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಬೆಳಗಾವಿ 2017-18ನೇ ಸಾಲಿನ ಕ್ರಿಯಾ ಯೋಜನೆಯನ್ವಯ ಅರಿವು ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಹ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಸಿ.ಇ.ಟಿ. ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಮಂಜೂರು ಮಾಡಲು ಅರ್ಜಿಗಳನ್ನು ‘ಆನ್‍ಲೈನ್‍ನಲ್ಲಿ ಸಲ್ಲಿಸಲು’ ನಗದಿಪಡಿಸಿದ ಕೊನೆಯ ಜೂನ್ 9ರವರೆಗೆ ವಿಸ್ತರಿಸಲಾಗಿರುತ್ತದೆ.
ಸಾಲ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ www.karnataka.gov.in/dbcdc ರಲ್ಲಿ ಲಾಗಿನ್ ಆಗಿ ವೆಬ್‍ಸೈಟ್‍ನಲ್ಲಿ ಲಭ್ಯವಿರುವ Username- infra/dbcdcarivu ಮತ್ತು Passward –DBನ್ನು ನಮೂದಿಸಿ ಅರ್ಜಿಯನ್ನು ಆನ್‍ಲೈನ್‍ಲ್ಲಿ ಜೂನ್ 9 ರವರೆಗೆ ಸಲ್ಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ 0831-2402163ನ್ನು ಸಂಪರ್ಕಿಸಬೇಕೆಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸವದತ್ತಿ ಯಲ್ಲಮ್ಮ ಪುರಸಭೆ; ವಿವಿಧ ಯೋಜನೆಗೆ ಅರ್ಜಿ ಆಹ್ವಾನ
ಬೆಳಗಾವಿ, ಸನ್ 2017-18 ನೇ ಸಾಲಿನ ರಾಜ್ಯ ಹಣಕಾಸು ಯೋಜನೆ ಮತ್ತು ಪುರಸಭೆ ನಿಧಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ವಿಕಲಚೇತನ ವರ್ಗದವರಿಗೆ ವೈಯಕ್ತಿಕ ಸೌಲಭ್ಯಗಳಿಗಾಗಿ ಪ್ರಸ್ತುತ ಈ ವರ್ಷದ ವಾರ್ಷಿಕ ಆದಾಯ 3,00000 ಲಕ್ಷ ಮೀರಬಾರದು ಅರ್ಜಿಗಳನು ಈ ಕುರಿತು ಸಾರ್ವಜನಿಕ ಕುಂದು ಕೊರತೆ ವಿಭಾಗದಲ್ಲಿ ಸಲ್ಲಿಸುವದು. ಅರ್ಜಿ ಸ್ವೀಕರಿಸಲು ಜೂನ್ 5 ರಂದು ಸಾಯಂಕಾಲ 5 ಘಂಟೆಗೆ ನಿಗದಿಪಡಿಸಿದ್ದು ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
2017-18 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 24.10% ರ (6.95% ರಲ್ಲಿ) ಅಡಿಯಲ್ಲಿ ಪರಿಶಿಷ್ಟ ಪಂಗಡದ ವಸತಿ ರಹಿತ ಕುಟುಂಬದವರಿಗೆ ನಿವೇಶನ ಖರೀದಿಗೆ ಆರ್ಥಿಕ ಸಹಾಯಧನ ನೀಡುವದು, 2017-18 ರ ಸಾಲಿನ ಎಸ್.ಎಫ್.ಸಿ/ಪುರಸಭೆ ನಿಧಿ ಅನುದಾನ ಶೇ 7.25% ಅಡಿಯಲ್ಲಿ ಇತರೆ ಹಿಂದುಳಿದ ವರ್ಗದ ಅಡಿಗೆ ಅನಿಲ ಸಂಪರ್ಕ ಸೆಟ್ ಖರೀದಿಸಲು ಆರ್ಥಿಕ ಸಹಾಯಧನ.
2017-18 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 7.25% ಅಡಿಯಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಎಸ್.ಬಿ.ಎಂ (ಸ್ವಚ್ಚ ಭಾರತ ಮಿಷನ್ ಯೋಜನೆಯಲ್ಲಿ) ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿದ ಅನುದಾನ ಪಡೆದ ಫಲಾನುಭವಿಗಳಿಗೆ ಸಹಾಯಧನ ನೀಡುವದು. ಸನ್ 2017-18 ರ ಸಾಲಿನ ಎಸ್.ಎಫ್.ಸಿ/ಪುರಸಭೆ ನಿಧಿ ಅನುದಾನ ಶೇ 3% ವಿಕಲಚೇತನ ವರ್ಗದವರಿಗೆ ಫೋಷಣಾ ಭತ್ಯೆ ನೀಡುವದು, 2017-18 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 3% ಅಡಿಯಲ್ಲಿ ಅಂಗವಿಲಕರನ್ನು ಜವಾಬ್ಬಾರಿಯಿಂದ ಫೋಷಿಸುವವರ ಕುಟುಂಬಳ ಮನೆಗಳಿಗೆ ಎಸ್.ಬಿ.ಎಂ (ಸ್ವಚ್ಚ ಭಾರತ ಮಿಷನ್ ಯೋಜನೆಯಲ್ಲಿ) ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿದ ಅನುದಾನ ಪಡೆದ ಫಲಾನುಭವಿಗಳಿಗೆ ಸಹಾಯಧನ ನೀಡುವದು. 2017-18 ರ ಸಾಲಿನ ಪುರಸಭೆ ನಿಧಿಯ ಅನುದಾನ ಶೇ 24.10% ರ ಅಡಿಯಲ್ಲಿ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ಔಷದೋಪಚಾರದ ವೆಚ್ಚದ ಬಿಲ್ಲು ಪಾವತಿಸುವದು.
ಈ ಮೇಲಿನ ವೈಯಕ್ತಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಫಲಾನಭವಿಗಳ ಅರ್ಜಿಗಳನ್ನು ಮಂಜೂರ ನಾ ಮಂಜೂರ ಮಾಡುವ ಅಧಿಕಾರವನ್ನು ಪುರಸಭೆ ಕಾಯ್ದಿರಿಸಿದೆ. ಯೋಜನೆಗೆ ಬಿಡುಗಡೆಯಾಗುವ ಅನುದಾನದ ಲಭ್ಯತೆಗೆ ಅನುಗುಣವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸರಕಾರಿ ರಜೆ ದಿನಗಳಲ್ಲಿ ಹೊರತುಪಡಿಸಿ ಸವದತ್ತಿ ಯಲ್ಲಮ್ಮಾ ಪುರಸಭೆ ಕಾರ್ಯಾಲಯದ ವೇಳೆಯಲ್ಲಿ ಶ್ರೀ ಎಸ್.ವೈ ಹಾದಿಮನಿ ಸಿ.ಎ.ಓ ಮತ್ತು ಶ್ರೀ ಎಂ.ಎ. ಪೆದನ್ನವರ ಸಮುದಾಯ ಸಂಘಟಕರು ಸಂಪರ್ಕಿಸಬಹುದು, ಹಾಗೂ ಈ ಕಾರ್ಯಾಲಯದ ವೆಬ್‍ಸೈಟ್ www.saundattitown.mrc.gov.in ನೇದ್ದರಲ್ಲಿ ಮಾಹಿತಿ ಪಡೆಯಬಹುದು ಎಂದು ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕೋಡಿ: ಮೇ 23, 24 ರಂದು ವಿದ್ಯುತ್ ನಿಲುಗಡೆ
ಬೆಳಗಾವಿ, ಚಿಕ್ಕೋಡಿ ಸಕಾಇಂ (ವಿ)/110 ಕೆವಿ. ವಿ.ವಿ ಕೇಂದ್ರಗಳ ನೋಡಲ್ ಅಧಿಕಾರಿಗಳು ಮೇ 23 ರಂದು ಬೋರಗಾಂವ ಹಾಗೂ 24 ರಂದು ಗಳತಗಾ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ತಾಂತ್ರಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿತರಣಾ ಕೇಂದ್ರದಿಂದ ಸರಬರಾಜು ಆಗುವ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಹಾಗೂ ಸಂಬಂಧಿಸಿದ ಪಟ್ಟಣ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಚಿಕ್ಕೋಡಿ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.