ಉತ್ತಮ ಸಮಾಜಕ್ಕಾಗಿ

ಒಂದು ದಿನದ ಹೆಂಡತಿ ಭಾಗ-5

0

ಒಂದು ದಿನದ ಹೆಂಡತಿ ಭಾಗ-5
ಹೀಗೆ ಪರಿಚಯ ಸ್ನೇಹಕ್ಕೆ ತಿರುಗಿತು. ಮುಂದೆ ಕೆರೆ ಕಡೆ ಬಂದಾಗಲೆಲ್ಲ ಮಾತಾಡಿ ಕೂಡಿ ನಲಿಯುತ್ತಿದ್ದೆವು. ಕೆರೆಯ ನೀರಿನಲ್ಲಿ ಏಳುವ
ಅಲೆಗಳಂತೆ ಅವಳ ಹೃದಯ ಕದಡುವ ವಿಷಯ ಗಮನಕ್ಕೆ ಬರಲಿಲ್ಲ. ನಾನು ನನ್ನದೊಂದು ಹೊಸ ಕಂಪ್ಯೂಟರ ಶಾಪ್ ಓಪನ್ ಮಾಡಿದೆ. ಅವಳಿಗೆ ಪ್ರೀತಿಯ ಅಹ್ವಾನವಿತ್ತೆ.
ಬಂದಳು. ಅವಳಿಗೂ ಅದರಲ್ಲಿ ಆಸಕ್ತಿ ಇರುವುದಾಗಿ ತಿಳಿಸಿದಳು. ಇಬ್ಬರೂ ಸೇರಿ ಎಷ್ಟೊ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಒಮ್ಮೆಯೂ ಮಾತುಗಳ ನಡುವೆ ತನ್ನ
ಗಂಡನ ವಿಷಯ ಪ್ರಸ್ತಾಪಿಸಲಿಲ್ಲ. ಈ ವಿಷಯ ಬಂದಾಗಲೆಲ್ಲ ಅವಳು ಮೌನಿಯಾಗುತ್ತಿದ್ದಳು. ಒಂದೊಂದು ಸಲ ಬೇರೆ ವಿಷಯ ಮಾತಾಡು ಎನ್ನುತ್ತಿದ್ದಳು ನಾನು
ಕೂಡಾ ಮರೆತುಬಿಟ್ಟೆ.
ದಿನಗಳು ಉರುಳಿದಂತೆ ಅವಳು ನನಗೆ ಪ್ರೀಯವೆನಿಸತೊಡಗಿದಳು. ಅವಳ ಮಾತು, ಅವಳ ನಗು, ಅವಳ ಸಾಮಿಪ್ಯ ಎಲ್ಲವೂ ಹಿತವೆನಿಸತೊಡಗಿತು. ದಿನ ದಿನದಿಂದ ಅವಳಲ್ಲಿ ಆಕರ್ಷಿತನಾಗ ತೊಡಗಿದೆ. ಅವಳು ಸಂತೋಷದಿಂದ ಇರುವಂತೆ ಕಾಳಜಿ ವಹಿಸತೊಡಗಿತು. ಅವಳು ಮಾತ್ರ ತನ್ನ ಪಾಡಿಗೆ ತಾನು ಇರುತ್ತಿದ್ದಳು.
ನನ್ನಿಂದ ದೂರ ದೂರ ಸರಿಯತೊಡಗಿದಳು.
ವಯಸ್ಸಿನಲ್ಲಿ ನನಗಿಂತ ಹಿರಿಯಳಾಗಿದ್ದರೂ ಮಗುವಿನ ತಾಯಿಯಾಗಿದ್ದರೂ ಸಹ ಅವಳಲ್ಲಿ ಸೌಂದರ್ಯ ಮನೆಮಾಡಿತ್ತು. ಅವಳ ಮುಗ್ಧತೆ ಅವಳನ್ನು ಇನ್ನಷ್ಟು
ಆಕರ್ಷಿಣೀಯವಾಗಿಸಿತ್ತು. ಎಲ್ಲ ದೃಷ್ಟಿಯಿಂದಲೂ ಅವಳು ನನಗೆ ಇಷ್ಟವಾಗಿದ್ದಳು. ಅವಳ ನನ್ನ ಸ್ನೇಹ ಬೆಳೆದು ಸುಮಾರು ವರ್ಷ ಕಳೆದು ಹೋಗಿತ್ತು. ನನ್ನ ಪ್ರತಿಯೊಂದು
ಮಾತಿಗೂ ಸ್ಪಂದಿಸುತ್ತಿದ್ದಳು. ನಾನೂ ಕೂಡಾ ಯಾವುದೇ ಮಾತಾದರೂ ಸರಿ ಅವಳು ಗೌರವಿಸುತ್ತಿದ್ದಳು. ನಿಯಮಿತವಾಗಿ ನಾನು ತಪ್ಪದೆ ಬ್ಯಾಂಕಿಗೆ ಹೋಗಿ ಬಿಟ್ಟು ಬರುತ್ತಿದ್ದೆ.
ಅವಳು ನನ್ನ ಹೃದಯ ಮಹಲು ಏರಿ ಕುಳಿತು ನನ್ನಲ್ಲಿ ನಲಿಯತೊಡಗಿದ್ದಳು. ನನ್ನ ಪರಿಚಯವಾದಾಗಿನಿಂದ ಅವಳಲ್ಲಿ ನಗು ಇನ್ನಷ್ಟು ಇಮ್ಮಡಿಯಾಗಿ ಸದಾ ಉತ್ಸಾಹದ
ಚಿಲುಮೆಯಂತಿರುತ್ತಿದ್ದಳು. ಕೆಲವೊಂದು ಸಮಯದಲ್ಲಿ ಅವಳ ಮುಖದಲ್ಲಿ ಚಿಂತಾರೇಖೆಗಳು ಕಂಡು ಬಂದರೂ ಅವುಗಳಿಗೆ ಮಾತ್ರ ಅಲ್ಲಿ ಹೆಚ್ಚು ಸ್ಥಾನವಿರಲಿಲ್ಲ. ಸೆಳೆವ ಅವಳ
ಆ ನಗು ನನ್ನ ಮನ:ಪಟಲವನ್ನೆ ಅಲುಗಾಡಿಸಿತ್ತು. ಅವಳ ಆ ವ್ಯರ್ಥ ಪ್ರಯತ್ನವೇನೊ ಆದರೂ ಅವಳು ನೋವನ್ನು ಗೆಲ್ಲಲು ಪ್ರಯತ್ನಿಸುವ ಹಠಮಾರಿಯಂತೆ ಕಂಡಳು ಎಂದೂ ತನ್ನ ಆ ನೋವಲ್ಲಿ ನನಗೆ ಭಾಗಿಯಾಗಲು ಬಿಡ

. ಲೇಖಕಿ ಪ್ರೇಮಾ ನಡುವಿನಮನಿ ಲಿಲ್ಲ.

Leave A Reply

 Click this button or press Ctrl+G to toggle between Kannada and English

Your email address will not be published.