ಉತ್ತಮ ಸಮಾಜಕ್ಕಾಗಿ

ಎಸ್‍ಟಿಪಿ ಘಟಕ ನಿರ್ಮಾಣ ಸ್ಥಳ ಪರಿಶೀಲಿಸಿದ ನಗರಾಭಿವೃದ್ಧಿ ಸಚಿವರು.

0

ಬೆಳಗಾವಿ: ಬೆಳಗಾವಿ ನಗರದ ಹಲಗಾ ಕ್ರಾಸ್ ಹತ್ತಿರ ನಿರ್ಮಾಣಗೊಳ್ಳಲಿರುವ ತ್ಯಾಜ ಸಂಸ್ಕರಣಾ ಘಟಕ ನಿರ್ಮಾಣದ ಸ್ಥಳವನ್ನು ರಾಜ್ಯ ನಗರಾಭಿವೃದ್ಧಿ ಹಾಗೂ ಹಜ್ ಸಚಿವರಾದ ಶ್ರೀ ಆರ್ ರೋಶನ್ ಬೇಗ್ ಅವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಎಸ್‍ಟಿಪಿ ನಿರ್ಮಾಣ ಸ್ಥಳದ ಖುದ್ದು ಪರಿಶೀಲನೆಗಾಗಿ ನಾನು ಬಂದಿದ್ದು, ಈ ವಿಷಯ ನ್ಯಾಯಾಲದಲ್ಲಿ ಇರುವುದರಿಂದ ಈಗ ಸದ್ಯಕ್ಕೆ ಯಾವುದೇ ತೀರ್ಮಾಣ ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವರೊಂದಿಗೆ ಶಾಸಕರಾದ ಶ್ರೀ ಸಂಜೆಯ ಪಾಟೀಲ್, ಪಾಲಿಕೆ ಆಯುಕ್ತ ಶ್ರೀ ಶಶಿಧರ ಕುರೇರ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.