ಉತ್ತಮ ಸಮಾಜಕ್ಕಾಗಿ

ಮೂಡಲಗಿ ತಾಲೂಕು ರಚನೆ, ಸಿಎಂ ಸ್ಪಂದನೆ: ಬಾಲಚಂದ್ರ ಜಾರಕಿಹೊಳಿ

0

ಬೆಂಗಳೂರು/ ಬೆಳಗಾವಿ: ಮೂಡಲಗಿ ಹೊಸ ತಾಲೂಕಾ ರಚನೆ ಕಗ್ಗಂಟು ಭಾಗವಾಗಿ 16 ನೇ ದಿನಕ್ಕೆ ಕಾಲಿಟ್ಟ ಹೋರಾಟದ ತೀವೃತೆಗೆ ಇಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಯನ್ನು ಸಂಪರ್ಕಿಸಿದ್ದಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಬೇಡಿಕೆ ಪರಿಶೀಲಿಸಿ ಸಂಪುಟದ ಮುಂದೆ ಇಡುವಂತೆ ಸಿಎಂ ಸೂಚಿಸಿರುವುದರಿಂದ ಮುಂದಿನ 15 ದಿನದಲ್ಲಿ ಮೂಡಲಗಿ ತಾಲೂಕು ಘೋಷಣೆ ಆಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸದಿಂದ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ನಿವಾಸದಲ್ಲಿ ಇಂದು ಬೆಳಿಗ್ಗೆ ಭೇಟಿಯಾದ ಶಾಸಕ ಬಾಲಚಂದ್ರ ಅವರ ಮನವಿ ಪತ್ರಕ್ಕೆ ಸಿಎಂ ಷರಾ ಬರೆದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹೆಗಲಿಗೆ ಸೂಕ್ತ ಫೈಲ್ ಸಂಪುಟದಲ್ಲಿ ಮಂಡಿಸುವಂತೆ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.