ಉತ್ತಮ ಸಮಾಜಕ್ಕಾಗಿ

ಹದಿನೆಂಟರಿಂದ ಇಪ್ಪತ್ತೈದರ ನಡುವಿನ ತೂಕಭರಿತ ಪ್ರೀತಿ

0

ಹರೆಯ ಎಂಬುದು ಹದಿನಾರರ ವಯಸ್ಸನ್ನು ಮೀರಿ ಈಗ ಹದಿನೆಂಟಕ್ಕೆ ಏರಿದೆ. ಹಾಗೆಯೇ ಅದು ಇಪ್ಪತ್ತೈದರವರೆಗೂ ವಿಸ್ತರಿಸಿಕೊಂಡಿದೆ. ಇದೇ ಚೌಕಟ್ಟನ್ನಿಟ್ಟುಕೊಂಡು ‘18 ಟು 25’ ಎಂಬ ಸಿನಿಮಾ ಕೂಡ ಬರುತ್ತಿದೆ! ಇದಕ್ಕೆ ‘ತೂಕಭರಿತ ಪ್ರೀತಿ’ ಎಂಬ ಅಡಿಬರಹವೂ ಇದೆ. ಹೀಗೆ ಇಂದಿನ ಪೀಳಿಗೆಯ ಹರೆಯದ ಹುಡುಗ/ಹುಡುಗಿಯರ ತವಕ ತಲ್ಲಣಗಳನ್ನು ಸಿನಿಮಾ ಮಾಡಹೊರಟಿರುವುದು ‘ಬಳ್ಳಾರಿ ದರ್ಬಾರ್‌’ ಚಿತ್ರ ನಿರ್ದೇಶಿಸಿದ್ದ ಸ್ಮೈಲ್‌ ಶ್ರೀನು.

‘18ರಿಂದ 25 ಎಲ್ಲರ ಬದುಕಿನಲ್ಲಿಯೂ ಅನಿಶ್ಚಿತತೆಗಳು ಕಾಡುತ್ತವೆ. ಆಗ ಕಾಣಿಸಿಕೊಂಡ ಪ್ರೀತಿಯೂ ಪರಿಪಕ್ವವಾಗಿರುವುದಿಲ್ಲ. ಈ ಎಲ್ಲ ಗೊಂದಲಗಳಿಗೂ ಸ್ಪಷ್ಟವಾದ ಉತ್ತರ ಹೇಳುವ ಪ್ರಯತ್ನವನ್ನು ಮಾಡಿದ್ದೇವೆ’ ಎಂದರು ಶ್ರೀನು. ‘ಅದೇ ವಯಸ್ಸಿನವರಿಗೆ ಈ ಸಿನಿಮಾ ಒಂದು ಪಾಠವನ್ನು ಹೇಳಿದರೆ, ಹಿರಿಯರಿಗೆ ತಮ್ಮ ಹರೆಯದ ದಿನಗಳನ್ನು ನೆನಪಿಸಿ ಕಚಗುಳಿ ಇಡುತ್ತದೆ’ ಎಂಬುದು ಅವರ ನಂಬಿಕೆ.

ಬೆಂಗಳೂರು, ಹೈದರಾಬಾದ್‌, ಕೇರಳದಲ್ಲಿ 35ದಿನಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಶ್ರೀನು ಅವರ ನಟನಾ ತರಬೇತಿ ಶಾಲೆಯ ವಿದ್ಯಾರ್ಥಿಗಳೇ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ವಿಜಯವಾಡದ ಅಭಿರಾಮ್‌, ಬಳ್ಳಾರಿಯ ರಿಷಿತೇಜ್‌ ಅವರಿಗೆ ಇದು ಮೊದಲನೇ ಸಿನಿಮಾ.

ಇನ್ನೊಬ್ಬ ನಟ ಫಾರೂಕ್‌ಖಾನ್‌ ಅವರಿಗೆ ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ನಟಿಸಿದ ಅನುಭವ ಇದೆ. ಜಾಲಿ ಬದುಕಿನ ಬಿಂದಾಸ್‌ ಹುಡುಗಿಯ ಪಾತ್ರದಲ್ಲಿ ಅಖಿಲಾಪ್ರಕಾಶ್‌ ನಟಿಸುತ್ತಿದ್ದಾರೆ. ಅವರ ಜತೆಗೆ ಸಾಚಾ ಹುಡುಗಿಯಾಗಿ ವಿದ್ಯಾ ಕಾಣಿಸಿಕೊಳ್ಳಲಿದ್ದಾರೆ. ಶಿವ ಕೆ. ನಾಯ್ಡು ಛಾಯಾಗ್ರಹಣವಿದೆ.

ತುಮುಲಪಲ್ಲಿ ರಾಮಸತ್ಯನಾರಾಯಣ್‌ ಹೊಸ ಹುಡುಗರನ್ನು ಪರಿಚಯಿಸುವ ಈ ಪ್ರಯತ್ನಕ್ಕೆ ಹಣ ಹೂಡಲಿದ್ದಾರೆ. 90 ಲಕ್ಷ ರೂಪಾಯಿ ಒಳಗೆ ಸಿನಿಮಾ ಮುಗಿಸಿಕೊಡಲು ಅವರು ನಿರ್ದೇಶಕರಿಗೆ ಸೂಚನೆ ನೀಡಿದ್ದಾರಂತೆ.

Leave A Reply

 Click this button or press Ctrl+G to toggle between Kannada and English

Your email address will not be published.