ಉತ್ತಮ ಸಮಾಜಕ್ಕಾಗಿ

ನೆಲೋಗಿ ಗ್ರಾಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಅಂತ್ಯ ಸಂಸ್ಕಾರ ಪುತ್ರ ವಿಜಯ್ ಸಿಂಗ್ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

0

ಸಕಲ ಸರ್ಕಾರಿ ಗೌರವಗಳೊಂದಿಗೆ ನೆಲೋಗಿ ಗ್ರಾಮದ ಜಮೀನಿನಲ್ಲಿ ಹಿಂದೂ ರಜಪೂತ ಸಂಪ್ರದಾಯದಂತೆ ಎನ್. ಧರ್ಮಸಿಂಗ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ನೆಲೋಗಿ ಗ್ರಾಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಅಂತ್ಯ ಸಂಸ್ಕಾರ ನಡೆದಿದೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ನೆಲೋಗಿ ಗ್ರಾಮದ ಜಮೀನಿನಲ್ಲಿ ಹಿಂದೂ ರಜಪೂತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಧರ್ಮ ಸಿಂಗ್ ಅವರ ಹಿರಿಯ ಪುತ್ರ ವಿಜಯ್ ಸಿಂಗ್ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಧರ್ಮಸಿಂಗ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ಗಂಟೆ ವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಧರ್ಮಸಿಂಗ್ ಒಡನಾಡಿಗಳು, ಬಂಧುಗಳು, ಸಚಿವರಾದ ಯು.ಟಿ.ಖಾದರ್, ಡಾ. ಶರಣಪ್ರಕಾಶ ಪಾಟೀಲ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ರೇವೂನಾಯಕ ಬೆಳಮಗಿ, ಶಾಸಕರಾದ ಬಾಬುರಾವ್ ಚಿಂಚನಸೂರ, ಖಮರುಲ್ ಇಸ್ಲಾಂ, ಮಾಲೀಕಯ್ಯ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ಇಕ್ಬಾಲ್ ಅಹಮ್ಮದ್ ಸರಡಗಿ, ಮಾಜಿ ಶಾಸಕರಾದ ಶಶೀಲ್ ಜಿ.ನಮೋಶಿ, ವಿವಿಧ ಪಕ್ಷಗಳ ಮುಖಂಡರು, ಮೇಯರ್, ಪಾಲಿಕೆ ಸದಸ್ಯರು ಅಂತಿಮ ನಮನ ಸಲ್ಲಿಸಿದರು. ಕಾಂಗ್ರೆಸ್ ಸೇವಾ ದಳದ ಸದಸ್ಯರು ಗೌರವ ವಂದನೆ ಸಲ್ಲಿಸಿದರು.

‘ಜೇವರ್ಗಿಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

Leave A Reply

 Click this button or press Ctrl+G to toggle between Kannada and English

Your email address will not be published.