ಉತ್ತಮ ಸಮಾಜಕ್ಕಾಗಿ

ಒಂದು ದಿನದ ಹೆಂಡತಿ ಭಾಗ-2

0

ಒಂದು ದಿನದ ಹೆಂಡತಿ ಭಾಗ-2
ಸುಮಾರು ಆರು ವರುಷಗಳ ಹಿಂದೆ ಒಂದು ದಿನ ನಾನು ಕೆಲಗೇರಿಯ ಕೆರೆಯ ದಡದಲ್ಲಿದ್ದ ಆಸನದಲ್ಲಿ ಪ್ರವೀಣನ ಜೊತೆ ಕುಳಿತುಕೊಂಡಿದ್ದೆ. ಆ ಹುಡುಗಿ
ಕೈಯೊಲ್ಲೊಂದು ಪೇಪರ ಸುರಳಿ ಹಿಡಿದು ನಮ್ಮ ಪಕ್ಕದ ಆಸನದಲ್ಲಿ ಆಸೀನಳಾದಳು. ಇಪ್ಪತ್ತೆಂಟರ ಹರೆಯದ ಹುಡುಗಿ…! ಗುಂಡನೆಯ ಮುಖ ಹಣೆಯ ನಡುವೆ
ಒಂದೇ ಚಿಕ್ಕಿ ಬಿಂದಿ, ತೆಳು ನೀಲಿಯ ಸೀರೆ, ಅದೇ ಬಣ್ಣದ ರವಿಕೆ ಮುಖದಲ್ಲಿ ಚಿಂತಾರೇಖೆಗಳು….! ಗಲ್ಲಕ್ಕೆ ಕೈ ಹಚ್ಚಿ ಕುಳಿತ ಅವಳು ಎದುರಿಗೆ ಇರುವ ಕೆರೆಯ
ನೀರನ್ನೇ ದಿಟ್ಟಿಸುತ್ತಿದ್ದಳು, ಕೆದರಿದ ಕೂದಲು,ವಿಹಾರಕ್ಕೆ ಬರುವ ಹುಡುಗಿಯರು ತುಂಬಾ ಮೇಕಪ್ ಮಾಡಿರುತ್ತಿದ್ದ ಈ ಕಾಲದಲ್ಲಿ ಅವಳಿಗೆ ಅದೆಲ್ಲ
ಬೇಕಾಗಿರಲಿಲ್ಲವೇನೋ..! ನನ್ನ ದೃಷ್ಟಿ ಅವಳ ಮುಂಗುರುಳ ಮೇಲೆ ಹೋಯಿತು. ಗುಂಗುರು ಗುಂಗುರು ಆಗಿದ್ದ ಆ ಕೂದಲುಗಳು ಅವಳ ಗಲ್ಲದ ಮೇಲೆ
ಕುಣಿಯುತ್ತಿದ್ದವು. ಆ ಕಣ್ಣುಗಳತ್ತ ನೋಡಿದೆ ಅವು ತುಂಬಿದ್ದವು. ಆದರೆ ಅವಳು ಇಷ್ಟಪಡುತ್ತಿರಲಿಲ್ಲವೇನೋ ಅದಕ್ಕೆ ಅವು ಕೆನ್ನೆ ಮೇಲೆ ಇಳಿದಿರಲೇ ಇಲ್ಲ. ಅದು
ಅವಳ ಗಮನಕ್ಕೂ ಬಂದಿರಬೇಕು. ಯಾರಾದರೂ ತನ್ನನ್ನು ನೋಡಿಯಾರು ಎಂದು ಅವಳು ಮುಖವನ್ನು ಆಕಡೆ ಈಕಡೆ ತಿರುಗಿಸುತ್ತಿದ್ದಳು.
ನನಗೆ ಅವಳು ಕೂತುಹಲಕಾರಿಯಾದಳು.
“ಮನೆಗೆ ಹೋಗೋಣವೇ”? ಪ್ರವೀಣ ಕೇಳಿದ.
“ನಿಲ್ಲು” ಎನ್ನುತ್ತಾ ಅವಳನ್ನೇ ದಿಟ್ಟಿಸುತ್ತಾ ಕುಳಿತೆ, ಸ್ವಲ್ಪ ಹೊತ್ತು ಕುಳಿತ ಆ ಹುಡುಗಿ ಎದ್ದು ನಿಂತಳು. ಅತ್ತ ಇತ್ತ ಹೊರಳಿ ನೋಡಿದಳು. ಮತ್ತೆ ಬಿರಬಿರನೇ
ಹೊರಟು ಹೋದಳು. ನಾನು ಮನೆಗೆ ಬಂದರು ಮಲಗಿದರೂ ಅವಳು ಕಾಣುತ್ತಿದ್ದಳು. ನೀವು ನಾನು ಅವಳಿಗೆ ಆಕರ್ಷಿತನಾದೆ ಎಂದು ತಿಳಿಯಬೇಡಿ, ಅವಳು
ನನಗೆ ಒಂದು ರೀತಿ ಕೂತುಹಲವಾಗಿ ಕಂಡಳು. ಅಷ್ಟೆ. ಅವಳ ಕಣ್ಣಲ್ಲಿಯ ನೀರು ಏನೋ ಹೇಳುತ್ತಿದ್ದವು. ಆದರೆ ಅವಳು ಬರಬಹುದೆ? ನನಗೆ ಭೇಟಿಯಾಗಬಹುದೆ? ಮಾತನಾಡಿಸಲೇ ಮನದಲ್ಲಿ ಪ್ರಶ್ನೆಗಳು ಎದ್ದು ಅವಳನ್ನು ಕಾಣಲು ಚಡಪಡಿಸತೊಡಗಿತು. ಹಾಗೆ ನಿದ್ದೆ ಹೋಗಿದ್ದೆ.

ಲೇಖಕಿ ಪ್ರೇಮಾ ನಡುವಿನಮನಿ

Leave A Reply

 Click this button or press Ctrl+G to toggle between Kannada and English

Your email address will not be published.