ಉತ್ತಮ ಸಮಾಜಕ್ಕಾಗಿ

ಒಂದು ದಿನದ ಹೆಂಡತಿ ಭಾಗ-4

0

ಒಂದು ದಿನದ ಹೆಂಡತಿ ಭಾಗ-4
ಒಂದು ವಾರ ಕಳೆದಿರಬೇಕು ಅಣ್ಣನಿಗೆ ಫೋನ ಮಾಡಲು ಎಸ್.ಟಿ.ಡಿ ಭೂತ್ಗೆ ಹೋಗಿದ್ದೆ ಅವಳು ನಿಂತಿದ್ದಳು. ನಾನು ನೋಡಿದ ಕೂಡಲೇ ನಕ್ಕೆ.
ಸುಮ್ಮನಾದಳು. ಆದರೆ ನಾನು ಸುಮ್ಮನಿರಲಿಲ್ಲ.
“ಚೆನ್ನಾಗಿದ್ದಿರಾ ಮೆಡಮ್” ಎಂದೆ.
“ನೀವು ಕೆರೆ ಕಡೆ ಕಾಣಲೆ ಇಲ್ಲ” ಸುಮ್ಮನಿರದೆ ಪೀಠಿಕೆ ಹಾಕಿದೆ.
“ಹೌದು ಬರಲಿಲ್ಲ” ಅವಳ ಉತ್ತರ.
“ಬರ್ತಿನಿ” ಎಂದವಳೆ ಹೊರಟು ನಿಂತಳು.
ಅವಳು ಸಿಕ್ಕ ಸಂಭ್ರಮದಲ್ಲಿ ಅಣ್ಣನಿಗೆ ಫೋನ ಮಾಡುವುದನ್ನು ಮರೆತೇಬಿಟ್ಟೆ.
“ಬನ್ನಿ” ಎಂದು ಮುನ್ನಡೆದಳು.
“ಸ್ವಲ್ಪ ಟೀ ಕುಡಿಯೋಣ ಬನ್ನಿ” ಎಂದೆ.
“ಬೇಡ ನೀವು ತೊಗೊಳ್ಳಿ” ಚುಟುಕಾಗಿ ಉತ್ತರ ನೀಡಿ ಹೊರಟು ನಿಂತಳು.
“ಪರವಾಗಿಲ್ಲ ಬನ್ನಿ” ಎಂದು ಒತ್ತಾಯಿಸಿದೆ. ಸುಮ್ಮನಾದಳು.
ಚಿಕ್ಕ ಕ್ಯಾಂಟಿನಗೆ ಕಾಲಿಟ್ಟೆವು. ಟೀ ತರಲು ಹೇಳಿದೆ. ಟೀ ಬರುವಷ್ಟರಲ್ಲಿ ಸುಮ್ಮನಿರದ ನಾನು ” ನೀವು ನಿಮ್ಮ ಹೆಸರು ಹೇಳಲೇ ಇಲ್ಲ” ಎಂದೆ.
“ಕುಸುಮಾ”.
“ಪ್ರದೀಪ” ಅವಳು ಕೇಳದೆ ಇದ್ದರೂ ನಾನು ನನ್ನ ಹೆಸರು ಹೇಳಿಯೇ ಬಿಟ್ಟೆ.
“ಎಲ್ಲಿರ್ತಿರಾ?” ಅವಳ ನೇರ ಪ್ರಶ್ನೆಗೆ
“ಓಂನಗರ” ಎಂದು ಹೇಳಿದೆ.
, ಅವಳು ತಾನೂ ಸಹ ಓಂ ನಗರದಲ್ಲಿ ಇರುವುದಾಗಿ ತಿಳಿಸಿದಳು. ಅವಳು ಬ್ಯಾಂಕನಲ್ಲಿ ಕೆಲಸ ಮಾಡುತ್ತಿದ್ದು ಎರಡು ತಿಂಗಳ ಹಿಂದೆಯಷ್ಟೆ ಇಲ್ಲಿ
ಬಂದಿರುವುದಾಗಿ ತಿಳಿಸಿದಳು. ಮಾತಿನ ನಡುವೆಯೇ ಅವಳು ತನಗೊಬ್ಬ “ಪುಷ್ಪಾ” ಎಂಬ ಮಗುವಿದ್ದು, ಅದು ಕೆಲ ದಿನದ ಹಿಂದೆಯಷ್ಟೆ ಮೆದುಳು ಜ್ವರ ಬಂದು
ವಿಧಿವಶವಾದ ಘಟನೆ ಹೇಳಿ ಕಣ್ಣೀರಿಟ್ಟಳು.
ಕಣ್ಣೀರ ಹನಿಗಳ ಆಕ್ರಂದನ. ಜಗತ್ತು ಕೇಳದೆ ಒರಟುತನ ತೋರಿದೆ. ಮಗುವಿನ ನಲಿವೇ ತಾಯಿಗೆ ಸುಖ. ಜಗದಲ್ಲಿ ಉಂಟೆ? ಬೇರೆ ಸ್ನೇಹ ಗೆಳೆತನ….
ಅವಳು ಹೆಳಿದ ಮಾತುಗಳೆಲ್ಲವು ರಫ್…. ರಫ್…. ಎಂದು ಎದೆಗೆ ಬಡಿಯುತ್ತಿದ್ದವು. ಕೆಲಕ್ಷಣ ಮೌನ ಪರಿಸರ ನಂತರ ವಾಸ್ತವಕ್ಕೆ ಸರಿದ ನಾನು ನನ್ನ
ಪರಿಚಯ ಮಾಡಿಕೊಟ್ಟೆ. ಕಂಪ್ಯೂಟರ ಇಂಜನೀಯರ ಆಗಿ ಕೆಲಸ ಮಾಡುತ್ತಿದದ್ದು ಸಂಗಿತವೆಂದರೆ ಇಷ್ಟವೆಂದು ತಿಳಿಸಿದೆ.
“ಲೆಖನ ಪ್ರೆಮಾ ನಡವಿನಮನಿ”

Leave A Reply

 Click this button or press Ctrl+G to toggle between Kannada and English

Your email address will not be published.