ಉತ್ತಮ ಸಮಾಜಕ್ಕಾಗಿ

ಅಕ್ರಮ ಸಾಗಾಣಿಕೆ-ವಧೆ ತಡೆಗಟ್ಟಲು ತಂಡ ರಚನೆ

news

0

ಅಕ್ರಮ ಸಾಗಾಣಿಕೆ-ವಧೆ ತಡೆಗಟ್ಟಲು ತಂಡ ರಚನೆ-ಜಿಲ್ಲಾಧಿಕಾರಿ
ಬಕ್ರೀದ್: ಒಂಟೆ-ಗೋವು ವಧೆ ನಿಷೇಧ
ಬೆಳಗಾವಿ: (news belgaum)“ಒಂಟೆ ಹಾಗೂ ಗೋವುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಒಂಟೆ ಹಾಗೂ ಗೋವುಗಳ ಅನಧಿಕೃತ ಸಾಗಾಣಿಕೆ ಮತ್ತು ವಧೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ (ಶುಕ್ರವಾರ ಆ.10) ನಡೆದ ಒಂಟೆ ಹಾಗೂ ಗೋವುಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಸಂಬಂಧ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬದ ಸಂದರ್ಭದಲ್ಲಿ ಒಂಟೆ ಹಾಗೂ ಗೋವುಗಳ ವಧೆ ನಡೆಯುವ ಬಗ್ಗೆ ದೂರುಗಳು ಬರುವುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು.
ಪ್ರಾಣಿಗಳ ಹಿಂಸಾಚಾರ ತಡೆ ನಿಯಮ-1960 ಹಾಗೂ ಅನಧಿಕೃತ ವಧೆ ತಡೆ ಕಾಯ್ದೆ- 1960 ಅನ್ವಯ ಅನಧಿಕೃತ ವಧೆಯಿಂದ ಕಾನೂನಿನ ಉಲ್ಲಂಘನೆಯಾಗುತ್ತದೆ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಂಡ ರಚನೆ:
ಬಕ್ರೀದ್ ಸಂದರ್ಭದಲ್ಲಿ ಪ್ರಾಣಿ ವಧೆ ತಡೆಗಟ್ಟಲು ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪಶುಪಾಲನೆ ಮತ್ತು ಪಶು ವೈದ್ಯಕೀಯ, ಸಾರಿಗೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ತಿಳಿಸಿದರು.
ತನಿಖಾ ತಂಡಗಳನ್ನು ರಚಿಸಿಕೂಂಡು ಬಕ್ರಿದ್ ಹಾಗೂ ಹಿಂದಿನ ದಿನಗಳಲ್ಲಿ ಎಲ್ಲಾ ಕಡೆಗೆ ಸಂಚರಿಸಿ ಒಂಟೆ ಮತ್ತು ಗೋವುಗಳ ಅಕ್ರಮ ಸಾಗಾಣಿಕೆ /ವಧೆ ನಿಯಂತ್ರಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ರೀತಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೂಡ ತಮ್ಮ ವ್ಯಾಪ್ತಿಯಲ್ಲಿ ನಿಗಾ ವಹಿಸಬೇಕು. ತಂಡಗಳಿಗೆ ಅಗತ್ಯಬಿದ್ದರೆ ಪೊಲೀಸ್ ರಕ್ಷಣೆ ಕೂಡ ನೀಡಲಾಗುವುದು ಎಂದು ಹೇಳಿದರು.
ಪ್ರಾಣಿಗಳ ಅಕ್ರಮ ಸಾಗಾಣಿಕೆ ಅಥವಾ ವಧೆ ಕಂಡುಬಂದರೆ ನಿಯಮಾನುಸಾರ ಕಠಿಣ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು.
ಅಕ್ರಮ ಸಾಗಾಣಿಕೆ ಮತ್ತು ವಧೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣಿ ದಯಾ ಸಂಘದ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಡಿ.ಎಸ್.ಹವಾಲ್ದಾರ ಅವರು, ಜಿಲ್ಲೆಯಲ್ಲಿ ಯಾವುದೇ ಅಧಿಕೃತ ಕಸಾಯಿಖಾನೆ ಅಥವಾ ವಧಾಗಾರ ಇಲ್ಲದಿರುವುದರಿಂದ ಬಕ್ರಿದ್ ಮತ್ತಿತರ ಹಬ್ಬಗಳ ಸಂದರ್ಭಗಳಲ್ಲಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಮತ್ತು ವಧೆಯನ್ನು ತಡೆಗಟ್ಟುವುದು ಕಷ್ಟವಾಗುತ್ತಿದೆ ಎಂದು ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಮತ್ತು ಪ್ರಾಣಿ ದಯಾ ಸಂಘದ ಸದಸ್ಯರಾದ ರಾಜೆಂದ್ರ ಜೈನ ಹಾಗೂ ಸುನಿಲ್ ಪಾಟೀಲ ಇವರು ಹಾಜರಿದ್ದು ಸಲಹೆಗಳನ್ನು ನೀಡಿದರಲ್ಲದೇ ಅನದಿಕೃತ ಸಾಗಾಣಿಕೆ/ವಧೆ ತಡೆಗೆ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ನಗಾರಾಭಿವೃದ್ದಿ ಕೋಶದ ಯೋಜನಾ ನಿರ್ದೆಶಕರಾದ ಡಾ.ಪ್ರವೀಣ ಬಾಗೆವಾಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್, ಮಹಾನಗರ ಪಾಲಿಕೆಯ ಮತ್ತು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಎಲ್ಲ ತಾಲೂಕಿನ ಸಹಾಯಕ ನಿರ್ದೆಶಕರು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.