ಉತ್ತಮ ಸಮಾಜಕ್ಕಾಗಿ

ರಾಷ್ಟ್ರಪತಿ ಆಗಮನದಿಂದ ನಾವು ರಸ್ತೆ ಕಂಡೇವು: ರಾಷ್ಟ್ರಪತಿಗೆ ಪತ್ರ

news belagavi

0

ಬೆಳಗಾವಿ: (news belgaum)ಬೆಳಗಾವಿ ಆಡಳಿತ ವೈಖರಿಯ ಬಗ್ಗೆ ಬೆಳಗಾವಿ ನಾಗರಿಕರು ಘನತೆವೆತ್ತ ರಾಷ್ಟ್ರಪತಿ ಅವರಿಗೆ ಪತ್ರ ಬರೆದು ಅವರಿಗೆ ‘ಥ್ಯಾಂಕ್ಸ್’ ಹೇಳಿದ್ದಾರೆ. ಮಾನ್ಯರೇ ತಾವು ಬೆಳಗಾವಿಗೆ ಬರುತ್ತಿರುವುದು ಸಂತೋಷ, ತಮ್ಮನ್ನು ಭೇಟಿ ಆಗಲು ನಮಗೆ ಸಾಧ್ಯವಾಗಲಿಕ್ಕಿಲ್ಲ. ತಾವು ಶನಿವಾರ ಬೆಳಗಾವಿಗೆ ಬರುತ್ತಿರುವುದರಿಂದ ನಗರದ ಮುಖ್ಯ ರಸ್ತೆ ರಿಪೇರಿ ಮಾಡಲಾಗಿದೆ ಎಂಬುವುದನ್ನು ರಾಷ್ಟ್ರಪತಿಗೆ ತಿಳಿಸಿ ಧನ್ಯವಾದ ಸಲ್ಲಿಸಲಾಗಿದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದುರ್ಲಕ್ಷ್ಯ ಆಡಳಿತದಿಂದ ನಗರ ನಾಗರಿಕರ ಜೀವನ ಹದಗೆಟ್ಟಿದೆ. ಖಾಸಗಿ ಶಿಕ್ಷಣ ಸಂಸ್ಥೆ ತಮ್ಮನ್ನು ಬೆಳಗಾವಿಗೆ ಕರೆಯಿಸಿದ್ದರಿಂದ, ತಾವು ಸಂಚರಿಸುವ ನಗರದ ಒಂದು ರಸ್ತೆಯಾದರೂ ಚಲನಯೋಗ್ಯವಾಗಿದೆ! ಎಂದು ಪತ್ರದಲ್ಲಿ ಬರೆಯಲಾಗಿದೆ. ತಾವು ಬೆಳಗಾವಿಗೆ ಬಾರದೇ ಇದ್ದಿದ್ದರೆ ಅದೇ ತಗ್ಗುರಸ್ತೆಗಳು ಇರುತ್ತಿದ್ದವು. ಬೆಳಗಾವಿ ವಿಮಾನ ನಿಲ್ದಾಣದಿಂದ ರಸ್ತೆ ರಿಪೇರಿ ಮತ್ತು ದೂಳು ಹಿಡಿದಿದ್ದ ವಿಭಾಜಕಗಳು ರಾತ್ರೋರಾತ್ರಿ ಬಣ್ಣ ಬಳಿದುಕೊಂಡಿವೆ ಎಂಬುವುದನ್ನು ತಿಳಿಸಿ ದೇಶದ ಮಹಾಮುಖ್ಯಸ್ಥನಿಗೆ ಬೆಳಗಾವಿ ನಾಗರಿಕರು ಮಾಹಿತಿ ನೀಡಿದ್ದಾರೆ.
ಬೆಳಗಾವಿ ರಸ್ತೆಗಳ ಸುಧಾರಣೆ ಮಾಡುವಂತೆ ಆಡಳಿತದ ಬೆನ್ನುಬಿದ್ದಿದ್ದ ಯುವ ನ್ಯಾಯವಾದಿ ಹಾಗೂ ಹೋರಾಟಗಾರ ಹರ್ಷವರ್ಧನ ಪಾಟೀಲ ಸಹ ರಾಷ್ಟ್ರಪತಿಗಳ ಗಮನ ಪತ್ರದ ಮೂಲಕ ಆಗಲೇ ಸೆಳೆದಿದ್ದಾರೆ. ಜಿಲ್ಲಾಡಳಿತ ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಕರೆದೊಯ್ಯುವ ಪ್ರಯತ್ನ ಧಿಕ್ಕರಿಸಿ ತಾವು ನಗರದಲ್ಲಿ ರಸ್ತೆ ಮೂಲಕವೇ ಸಂಚರಿಸಿ ಕಾರ್ಯಕ್ರಮ ಸ್ಥಳ ತಲುಪಬೇಕು ಎಂದು ದೇಶದ ಮುಖ್ಯಸ್ಥನಿಗೆ ಕೋರಿಕೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.