ಉತ್ತಮ ಸಮಾಜಕ್ಕಾಗಿ

tarun kranti:/news belgaum:ಬೆಳಗಾವಿ ನಗರದ ಟಾಪ್ ಇನ್ ಟೌನ್ ಹೊಟೇಲ್‍ನಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ ಮತ್ತು ವೇಶ್ಯಾವಾಟಿಕೆಯ ಮೇಲೆ ದಾಳಿ

The attack on illegal Sarai sales and prostitution at Belgaum's Top In Town Hotel

0

ಬೆಳಗಾವಿ:(news belgaum)(tarun kranti)ಬೆಳಗಾವಿ ನಗರದ ಟಾಪ್ ಇನ್ ಟೌನ್ ಹೊಟೇಲ್‍ನಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ ಮತ್ತು ವೇಶ್ಯಾವಾಟಿಕೆಯ ಮೇಲೆ ದಾಳಿ ; ರೂ.1,48,847/- ಮೌಲ್ಯದ ಸರಾಯಿ & ರೂ.1000/- ನಗದು ವಶ. 1) ಮಾನ್ಯ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರಿಗೆ ನಗರದ ಕಿರ್ಲೋಸ್ಕರ ರಸ್ತೆಯಲ್ಲಿರುವ ಟಾಪ್ ಇನ್ ಟೌನ್ ಹೊಟೇಲ್‍ನಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ ಮತ್ತು ವೇಶ್ಯಾವಾಟಿಕೆಯ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಬೆಳಗಾವಿ ನಗರದ ಕಿರ್ಲೊಸ್ಕರ ರಸ್ತೆಯಲ್ಲಿರುವ ಟಾಪ್ ಇನ್ ಟೌನ್ ಹೋಟೇಲ್ ವೆಸ್ಟರ್ನ ಟವರದಲ್ಲಿ ಆರೋಪಿ 1) ಲಕ್ಷ್ಮಣ ಗೋವಿಂದಸ್ವಾಮಿ ವೆಮುಲಕರ (ಹೋಟೇಲ್ ಮಾಲೀಕ) 2) ವಿಜಯ ಮುದ್ದಣ್ಣ ಶೆಟ್ಟಿ 3) ರಾಹುಲ ಶಹಾಪೂರಕರ (ಮ್ಯಾನೇಜರಗಳು) 4) ಕಿಶೋರ ಗೋಪಾಲ ವಾಡೇಕರ 5)ಶಿವಾನಂದ ಸುರೇಣ ಮಾನಗಾಂವಿ, 6) ಫ್ರಾನ್ಸಿಸ್ ಫರ್ನಾಂಡಿಸ್ ಪೌಲ್ 7) ದೇವೇಂದ್ರ ತಿಪ್ಪೇಸ್ವಾಮಿ ಸಾಲಿ ಸಾ|| ಗುಡಿಕೋಟೆಹಳ್ಳಿ, ತಾ|| ಸಂಡೂರ, ಬಳ್ಳಾರಿ, 8) ಈರಣ್ಣ ಶಿವಲಿಂಗಪ್ಪ ಕುಂಬಾರ ಸಾ|| ಭಾವಿಹಾಳ, ತಾ|| ಬೈಲಹೊಂಗಲ ಇವರೆಲ್ಲ ಸೇರಿ ಕಾನೂನು ಬಾಹಿರ್‍ವಾಗಿ ಅಬಕಾರಿ ಇಲಾಖೆಯ ಲೈಸೆನ್ಸ ಇಲ್ಲದೇ ನಿಯಮ ಉಳ್ಳಂಘಿಸಿ ಕಟ್ಟಡದ ಟೆರೆಸ್ ಮೇಲೆ ಮಾರಾಟ ಮಾಡುತ್ತಿದ್ದಾಗ ಶ್ರೀ ಜಿ ವಾಯ್ ಗುಡಾಜಿ ಎಸಿಪಿ ಖಡೇಬಜಾರ ಉಪವಿಭಾಗ ಹಾಗೂ ಅವರ ಸಿಬ್ಬಂದಿಯವರು ದಾಳಿ ಮಾಡಿ ಹೋಟೆಲ್ ಮಾಲೀಕ, ಮ್ಯಾನೇಜರ ಮತ್ತು ಕೆಲಸಗಾರರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು ರೂ.1,48,847/- ಮೌಲ್ಯದ ಅಕ್ರಮ ಸರಾಯಿ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
2) ಅದೇ ಹೊಟೇಲನಲ್ಲಿ ಅದರ ಮಾಲೀಕ 1)ಲಕ್ಷ್ಮಣ ಗೋವಿಂದಸ್ವಾಮಿ ವೆಮುಲಕರ 2)ಮೋಹನ ರಾಘವನ ಮತ್ತು 3)ವಿಜಯ ಶೆಟ್ಟಿ ಮ್ಯಾನೇಜರ ರವರು ತಮ್ಮ ಲಾಡ್ಜದಲ್ಲಿ ವೇಶ್ಯಾವಾಟಿಕೆ ನಡೆಸುವ ಸಲುವಾಗಿ ಅಸಹಾಯಕ ನೊಂದ ಮಹಿಳೆಯನ್ನಿಟ್ಟುಕೊಂಡು ಆರೋಪಿ ರಮೇಶ ಕಲ್ಲಪ್ಪ ಐನಾಪೂರ ಸಾ|| ಪಾಟೀಲ ಗಲ್ಲಿ ಬೆಳಗಾವಿ ಇವನೊಂದಿಗೆ ವೇಶ್ಯಾವಾಟಿಕೆ ನಡೆಸಲು ಅವಕಾಶ ಮಾಡಿಕೊಡುತ್ತಿದ್ದ ಹೋಟೇಲ್ ಮೇಲೆ ಶ್ರೀ ಜಿ ವಾಯ್ ಗುಡಾಜಿ ಎಸಿಪಿ ಖಡೇಬಜಾರ ಉಪವಿಭಾಗ ಹಾಗೂ ಅವರ ಸಿಬ್ಬಂದಿಯವರು ದಾಳಿ ಮಾಡಿ ಹೋಟೆಲ್ ಮತ್ತು ಲಾಡ್ಜ ಮಾಲೀಕರು ಮತ್ತು ವೇಶ್ಯಾವಾಟಿಕೆಯ ಆರೋಪಿತನನ್ನು ವಶಕ್ಕೆ ಪಡೆದುಕೊಂಡಿದ್ದು ಅವನ ಬಳಿ ಇದ್ದ ರೂ.1000/-ಹಣವನ್ನು ಜಪ್ತ ಮಾಡಲಾಗಿರುತ್ತದೆ.
ಈ ಮೇಲಿನಂತೆ ಖಡೇಬಜಾರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. Attack on Sarai Sale and Prostitution The attack on illegal Sarai sales and prostitution at Belgaum’s Top In Town Hotel

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.