ಉತ್ತಮ ಸಮಾಜಕ್ಕಾಗಿ

ಬಾರ್ ಅಸೋಸಿಯೇಶನ್ ಇಂದು ಪ್ರತಿಭಟನೆ ನಡೆಸಿತು.

news belagavi

0

ಬೆಳಗಾವಿ:(news belgaum) ಬಳ್ಳಾರಿಗೆ ವಾಣಿಜ್ಯ ವ್ಯಾಜ್ಯ ನ್ಯಾಯಾಲಯ ಸ್ಥಳಾಂತರ ವಿರೋಧಿಸಿ ಸರಕಾರ ಹೊರಡಿಸುವ ಆದೇಶ ವಿರೋಧಿಸಿ ಬೆಳಗಾವಿ ಬಾರ್ ಅಸೋಸಿಯೇಶನ್ ಇಂದು ಪ್ರತಿಭಟನೆ ನಡೆಸಿತು. ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಒಳಗೊಂಡ ಕೋರ್ಟ್ ಈಗ ಬಳ್ಳಾರಿಯಲ್ಲಿ ಪೀಠ ಹೊಂದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಕಳೆದ ಜು. 31ರ ಸರಕಾರದ ಆದೇಶದಂತೆ ಬಾಗಲಕೋಟ, ಬೆಳಗಾವಿ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಗೆ ಈಗ ಬಳ್ಳಾರಿಗೆ ಬಂದಿದೆ. ಸರಕಾರ ಈ ನಿರ್ಧಾರ ತಳೆಯುವ ಮುನ್ನ ಎಲ್ಲ ಬಾರ್ ಅಸೋಸಿಯೇಷನ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಎಲ್ಲ ಸವಲತ್ತು ಹೊಂದಿರುವ ಬೆಳಗಾವಿಯಲ್ಲಿ ಈ ಕಮರ್ಷಿಯಲ್ ಕೋರ್ಟ್ ಸ್ಥಾಪಿಸಬೇಕು, ಸರಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧ್ಯಕ್ಷ ಎಸ್. ಎಸ್. ಕಿವಡಸಣ್ಣವರ, ಉಪಾಧ್ಯಕ್ಷ ಮುರಘೇಂದ್ರಗೌಡ ಪಾಟೀಲ, ಆರ್. ಪಿ. ಪಾಟೀಲ, ಹಣಮಂತ ಕೊಂಗಳಿ, ಪ್ರವೀಣ ಅಗಸಗಿ, ಶೇಖರ್ ಜನಮಟ್ಟಿ, ಬಸವರಾಜ ಮಾದಗೌಡ್ರ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.