ಉತ್ತಮ ಸಮಾಜಕ್ಕಾಗಿ

ಗೋವಾ ರಾಜ್ಯ ಸ್ಥಾಪನೆ ಅಸಂವಿಧಾನಿಕ

0

ಬೆಳಗಾವಿ: (tarunkranti) ಗೋವಾ ರಾಜ್ಯ ಸ್ಥಾಪನೆ ಅಸಂವಿಧಾನಿಕ ಮಹಾದಾಯಿ ಜಲ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 900 ದಿನಗಳಿಂದ ನಿರಂತರವಾಗಿ ಅನ್ನದಾತರಿಂದ ಹೋರಾಟ ನಡೆದು ಬಂದಿದೆ. ಸಮಸ್ತ ಕರ್ನಾಟಕ ಮಹಾದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ದಳ್ಳುರಿಯಲ್ಲಿದೆ. ಆದರು ಕೂಡ ಈ ಪ್ರಶ್ನೆಯನ್ನು ಇಲ್ಲಿಯವರೆಗೆ ಉತ್ತರವನ್ನು ಕಂಡುಕೊಂಡು ನಿರ್ಣಯಿಸಲಾಗಿಲ್ಲ. ಕರ್ನಾಟಕ – ಮಹಾರಾಷ್ಟ್ರ ಗಡಿ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಹಳ ಮಹತ್ವಪೂರ್ಣವಾದ ದಾಖಲೆಗಳನ್ನು ಕರ್ನಾಟಕ ಸರ್ಕಾರಕ್ಕೆ ನೀಡಿ ಮಹಾರಾಷ್ಟ್ರ ಸರ್ಕಾರಕ್ಕೆ ನಡುಕ ತರುವ ರೀತಿಯಲ್ಲಿ ಈಗಾಗಲೆ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತು ಮಾಡಿದೆ. ಇದೇ ರೀತಿಯಲ್ಲಿ ಗೋವಾ ರಾಜ್ಯದ ಅಸ್ತಿತ್ವದ ಬಗ್ಗೆ ಬಹಳ ಪ್ರಮುಖವಾದ ವಿಷಯಗಳನ್ನು ರಾಜ್ಯ ವಕೀಲರ ಸಾಹಿತ್ಯ ಪರಿಷತ್ತು ಇಲ್ಲಿ ಪ್ರಸ್ತಾಪಿಸುತ್ತಿದೆ. ಪರಿಷತ್ತಿನ ವಾದದ ಪ್ರಕಾರ ಗೋವಾ ರಾಜ್ಯ ಸ್ಥಾಪನೆಯಾಗಿರುವುದು ಭಾರತೀಯ ಸಂವಿಧಾನದ ವಿರೋದದಲ್ಲಿದೆ.

ಭಾರತೀಯ ಸಂವಿಧಾನದ ವಿಧಿ 170 ರ ಪ್ರಕಾರ ಯಾವುದೇ ರಾಜ್ಯದ ಜನಪ್ರತಿನಿಧಿ ಅಂದರೆ ವಿಧಾನ ಮಂಡಳದ ಸದಸ್ಯರ ಸಂಖ್ಯೆ ಕನಿಷ್ಠ 60 ಅಂಕಿಯಲ್ಲಿ ಹಾಗೂ ಗರಿಷ್ಠ 500 ಅಂಕಿಯಲ್ಲಿ ಇರಬೇಕಾಗುತ್ತದೆ. ಆದರೆ ಗೋವಾ ರಾಜ್ಯದ ಒಟ್ಟು ಶಾಸಕರ ಸಂಖ್ಯೆ 40 ಇದೆ. ಸಂವಿಧಾನದ ವಿಧಿಯ ಪ್ರಕಾರ ಕನಿಷ್ಠ 60 ಸಂಖ್ಯೆಯಲ್ಲಿ ಶಾಸಕರ ಸಂಖ್ಯೆ ಇಲ್ಲದೆ ಇರುವಂತಹ ಹಾಗೂ ಕನಿಷ್ಠಮಟ್ಟಕ್ಕಿಂತ ಕನಿಷ್ಠ ಸಂಖ್ಯೆಯಲ್ಲಿರುವ ವಿಧಾನ ಮಂಡಳ ಸದಸ್ಯರ ಸಂಖ್ಯೆಯಿಂದಾಗಿ ಗೋವಾ ರಾಜ್ಯ ರಚನೆ ಕಾನೂನು ಬಾಹಿರ ಹಾಗೂ ಅಸಂವಿಧಾನಿಕವಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಕೆಲ ಕಾಯ್ದೆಗಳ ಬಗ್ಗೆ ಚರ್ಚೆಯಾಗುವದು ಅತಿ ಅವಶ್ಯಕವಾಗಿದೆ.

ಗೋವಾ ರಾಜ್ಯ ಸ್ಥಾಪನೆ ಅಸಂವಿಧಾನಿಕ- Tarun krantiಮಹಾದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಸಂವಿಧಾನ ವಿಧಿ 170 ರ ಪ್ರಕಾರ ಪ್ರತಿ ವಿಧಾನ ಸಭೆ ಮತದಾರರ ಸಂಖ್ಯೆ ಕನಿಷ್ಠ 2 ಲಕ್ಷಗಳ ವರೆಗೆ ಹಾಗೂ ಗರಿಷ್ಠ ಮಟ್ಟ 5 ಲಕ್ಷಗಳ ವರೆಗೆ ಇರಬೇಕಾಗುತ್ತದೆ. ಆದರೆ ಗೋವಾ ರಾಜ್ಯದಲ್ಲಿ ಪ್ರತಿ ವಿಧಾನ ಸಭೆ ಕ್ಷೇತ್ರದ ಮತದಾರರ ಸಂಖ್ಯೆ ಗರಿಷ್ಠ 30,000 ಇರುವದು ವಿಪರ್ಯಾಸ. ಪ್ರತಿಯಾಗಿ ಕರ್ನಾಟಕದಲ್ಲಿ ಪ್ರತಿ ವಿಧಾನ ಸಭೆ ಮತರಾರರ ಸಂಖ್ಯೆ ಕನಿಷ್ಠ 2 ಲಕ್ಷದ ವರೆಗೆ ಇದೆ. ಹಾಗೆಯೇ ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ, ತಮಿಳ ನಾಡುಗಳಲ್ಲಿ ಗರಿಷ್ಠ ಮಟ್ಟ 5 ಲಕ್ಷ ಮತದಾರರ ಸಂಖ್ಯೆ ಇದೆ. ಇಂತಹ ಗಂಭೀರ ವಿಷಯಗಳನ್ನು ಕೂಡಾ ಆಧರಿಸಿ ಕರ್ನಾಟಕ ರಾಜ್ಯ ಮಾತ್ರವಲ್ಲ್ಲ, ಇಡೀ ಭಾರತದ ಎಲ್ಲ ರಾಜ್ಯಗಳ ಮತದಾರರ ಮೇಲೆಯೂ ಕೂಡ ಅನ್ಯಾಯವಾಗುತ್ತಿದೆ. ಈ 2 ಪ್ರಮುಖ ಅಂಶಗಳನ್ನು ನೋಡಿದರೆ ಗೋವಾ ರಾಜ್ಯ ಸ್ಥಾಪನೆ ಸಂವಿಧಾನದ ವಿರೋಧದಲ್ಲಿ ನಿರ್ಮಾಣವಾಗಿದೆ. ಆದ್ದರಿಂದ ಗೋವಾ ರಾಜ್ಯಕ್ಕೆ ಕಾನೂನು ದೃಷ್ಟಿಯಲ್ಲಿ ಯಾವುದೇ ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲು ಬರಲಾರದು. ಹಾಗೆಯೇ ಗೋವಾ ರಾಜ್ಯಕ್ಕೆ ಮಹಾದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಹೋರಾಟ ಮಾಡುವ ಅಧಿಕಾರ ವಿರುವುದಿಲ್ಲ. ಈ ಪ್ರಮುಖವಾದ ಅಂಶಗಳನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಕರ್ನಾಟಕದ ಪರ ಕರ್ನಾಟಕದ ಕಾನೂನು ತಜ್ಞರು ಪ್ರಶ್ನೆಯನ್ನು ಏತ್ತಬೇಕು. ಇಂತಹ ಅವಶ್ಯಕವಿರುವ ಪ್ರಮುಖವಾದ ಪ್ರಶ್ನೆಗಳನ್ನು ನ್ಯಾಯಾಧಿಕರಣದಲ್ಲಾಗಲಿ ಅಥವಾ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಾಗಲಿ ಏತ್ತಬೇಕಿದೆ, ಈ ಸಂಬಂಧಿ ಕರ್ನಾಟಕದಲ್ಲಿರುವ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕದ ನಿವೃತ್ತ ನ್ಯಾಯಾಧೀಶರು ಸ್ವಇಚ್ಛೆಯಿಂದ ಮುಂದೆ ಬಂದು ಈ ವಿಷಯಕ್ಕೆ ಇಂಬು ನೀಡಬೇಕು. ರಾಜ್ಯದ ರೈತರು ಹಾಗೂ ಕನ್ನಡ ಸಂಘಟನೆಗಳ ಹೋರಾಟ ಈ ವಿಷಯಗಳನ್ನು ಆಧರಿಸಿ ಇರಬೇಕಾಗಿದೆ. ಮೇಲೆ ಹೇಳಿದ ನಿವೃತ್ತ ನ್ಯಾಯಮೂರ್ತಿಗಳು (ಧರಣಿ ನಡೆಸುವುದನ್ನು ಬಿಟ್ಟು) ವಿನಂತಿ ಪೂರ್ವಕವಾಗಿ ಸತ್ಯದ ಆಗ್ರಹದ ಮೂಲಕ ಕಾನೂನು ಹೋರಾಟ ಮಾಡಬೇಕು. ಕಾನೂನು ಪ್ರಕಾರ ರಾಜ್ಯ ನಿರ್ರ್ಮಾಮಾಡುವದು ಭಾರತೀಯ ಸಂವಿಧಾನದ ಮೂಲ ಪ್ರೇರಣೆಯಾಗಿದೆ ಎಂಬುದನ್ನು ಇಡೀ ರಾಷ್ಟ್ರಕ್ಕೆ ತೋರಿಸಿಕೊಡಬೇಕಾಗಿದೆ ಎಂದು ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವೀಂದ್ರ ತೋಟಿಗೇರ, ಉಪಾಧ್ಯಕ್ಷರಾದ ಸುಧೀರ ನಿರ್ವಾಣಿ, ಕುಮರಾ ಸರವದೆ, ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಈರಣಗೌಡ್ರ, ಮತ್ತು ಸಹಕಾರ್ಯದರ್ಶಿಗಳಾದ ಪ್ರಕಾಶ ಚನ್ನಾಳ ಆಗ್ರಹಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.