ಉತ್ತಮ ಸಮಾಜಕ್ಕಾಗಿ

ಮಾಜಿ ಪ್ರಧಾನಿಯಿಂದ ಅತಿವೃಷ್ಟಿ ಅತಿವೃಷ್ಟಿ ಸಂತ್ರಸ್ಯರ ಅಹವಾಲು ಸ್ವೀಕಾರ

news belagavi

0

ಹಾಸನ 🙁news belgaum) ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಇಂದು ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಅತಿವೃಷ್ಠಿ ಸಂತ್ರಸ್ತರ ಅಹವಾಲನ್ನು ಆಲಿಸಿದರು. ಸ್ಥಳೀಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ 80 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ ಮಾಜಿ ಪ್ರಧಾನಿ ತಾಳ್ಮೆಯಿಂದ ಎಲ್ಲರ ಅಳಲನ್ನು ಕೇಳದರು.

ನೂರಾರು ಮಂದಿ ಹಾಜರಿದ್ದ ಸಕಲೇಶಪುರ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಆಗಿರುವ ಭೂಮಿ ಹಾಗೂ ಬೆಳೆ ಹಾನಿಯಿಂದ ಎದುರಾಗಿರುವ ಆರ್ಥಿಕ ಸಂಕಷ್ಟ ಹಾಗೂ ಭವಿಷ್ಯದ ಸಮಸ್ಯೆಗಳನ್ನು ಬೆಳೆಗಾರರು ಮಾಜಿ ಪ್ರಧಾನಿಯವರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಜಿಲ್ಲೆಯ ಮಲೆನಾಡುಭಾಗದಲ್ಲಿ ಅತಿವೃಷ್ಟಿಯಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಕೃಷಿ ಭೂಮಿ, ಬೆಳೆ ಹಾಗೂ ರಸ್ತೆಗಳು ಹಾನಿ ಗೀಡಾಗಿರುವುದನ್ನು ತಾವು ಪರಿಶೀಲಿಸಿರುವುದಾಗಿ ಹೇಳಿದರು.

ಸಕಲೇಶಪುರ ತಾಲ್ಲೂಕಿನ ಪ್ರಮುಖ ರಸ್ತೆಗಳು ತೀವ್ರವಾಗಿ ಹಾನಿಗೊಳಗಾಗಿವೆ .ಅದೆಲ್ಲವೂ ಶೀಘ್ರ ದುರಸ್ತಿಯಾಗಬೇಕಿವೆ ಏಂದರು.

News Belgaum-ಮಾಜಿ ಪ್ರಧಾನಿಯಿಂದ ಅತಿವೃಷ್ಟಿ ಅತಿವೃಷ್ಟಿ ಸಂತ್ರಸ್ಯರ ಅಹವಾಲು ಸ್ವೀಕಾರಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆಯೂ ನಾಶವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಜನರ ಮನೆ ಮನೆಗೆ ಹೋಗಿ ಅಹವಾಲು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೋಬಳಿ ಮಟ್ಟದಲ್ಲಿ ಸಭೆ ನೆಡೆಸಿ ಅಹವಾಲು ಆಲಿಸುತ್ತಿರುವುದಾಗಿ ತಿಳಿಸಿದರು .

ಜಿಲ್ಲಾಧಿಕಾರಿಯವರಿಗೆ ಅತಿವೃಷ್ಟಿ ಹಾನಿ ಪರಿಹಾರದ ಬಗ್ಗೆ ತಿಳಿಸಲಾಗಿದೆ. ಅವರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಈಗಾಗಲೆ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದಿಂದಲೂ ಪರಿಹಾರ ನಿರೀಕ್ಷಿಸಲಾಗುತ್ತಿದೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿದೆ ಎಂದು ದೇವೇಗೌಡರು ತಿಳಿಸಿದರು.

ಕೊಡಗಿನಲ್ಲಿ ಆದ ಅನಾಹುತದ ಕಡೆ ಎಲ್ಲರು ಗಮನ ಹರಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನಲ್ಲೂ ಗಂಭೀರ ಸ್ವರೂಪದ ತೊಂದರೆಗಳಿದ್ದು, ಇದನ್ನು ನಿಭಾಯಿಸಬೇಕಿದೆ ಎಂದು ಮಾಜಿ ಪ್ರಧಾನಿ ಅಭಿಪ್ರಾಯ ಪಟ್ಟರು.

ಮನೆ ಕಳೆದುಕೊಂಡವರಿಗೆ ನಿವೇಶನ ನೀಡುವುದು ನಮ್ಮ ಜವಾಬ್ದಾರಿ ಇದರ ಬಗ್ಗೆ ಗಮನ ಹರಿಸುವುದಾಗಿ ಅವರು ಹೇಳಿದರು. ರಸ್ತೆ ಸಂಪರ್ಕ ಸಂಪೂರ್ಣ ಹಾಳಾಗಿದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು. ವಿಶೇಷ ಪ್ಯಾಕೇಜ್‍ಗಾಗಿ ಪ್ರಧಾನಿಯವರನ್ನು ಭೇಟಿ ಮಾಡುವುದಾಗಿ ದೇವೇಗೌಡರು ತಿಳಿಸಿದರು.

ಭೂಮಿ ಕಳೆದುಕೊಂಡವರಿಗೆ ಪ್ರತ್ಯೇಕ ಜಾಗ ಒದಗಿಸಲಾಗುವುದು ಯಾರು ದೃತಿಗೆಡಬಾರದೆಂದು ಅವರು ಮನವಿ ಮಾಡಿದುರ.

ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಯವರು ಮಾತನಾಡಿ ಸಕಲೇಶಪುರ ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಕೃಷಿ ತೋಟಗಾರಿಕಾ ಬೆಳೆಗಳು ಹಾಗೂ ರಸ್ತೆಗಳು ಮತ್ತು ಸರ್ಕಾರಿ ಕಟ್ಟಡಗಳು ಹಾನಿಗೀಡಾಗಿವೆ. ರೈತರಿಗೆ ಪರಿಹಾರ ನೀಡುವುದರ ಜೊತೆಗೆ ರಸ್ತೆಗಳ ದುರಸ್ತಿ ಕಾರ್ಯವು ಬೇಗ ನಡೆಯಬೇಕೆಂದು ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಲಾಗಿದೆ ಎಂದರು.

ಉಪ ವಿಭಾಗಾಧಿಕಾರಿಗಳು ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಉಜ್ಮóರಿóಜ್ವಿ ಸುದರ್ಶನ್ ಮತ್ತು ಸುಪ್ರದೀಪ್ ಯಜಮಾನ್ ಮತ್ತಿತರು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.