ಉತ್ತಮ ಸಮಾಜಕ್ಕಾಗಿ

ಸಾಲಭಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ

The farmer who surrendered himself to suicide due to loan

0

ಬೆಳಗಾವಿ: (news belagaviಖಾನಾಪುರ ತಾಲೂಕಿನ ಇಟಗಿ ಗ್ರಾಮದ ರೈತ ಮಲ್ಲಿಕಾರ್ಜುನ ಸುಭಾಷ್ ಶಿಲಿ(33) ಎಂಬಾತ ಸಾಲಭಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇತನು ಮೂಲತಃ ಇಟಗಿ ಗ್ರಾಮದವನಾಗಿದ್ದೂ ಇದ್ದ ೪ ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ವರ್ಷ ರೈತನು ೪ಬೊರವೆಲ್ ಕೊರೆಯಿಸಿದ್ದ ನೀರು ಬಿಳದೆ ಇರುವುದರಿಂದ ಹಾಗೂ ೩-೪ ವರ್ಷಗಳಿಂದ ಮಳೆ ಬೆಳೆ ಸರಿಯಾಗಿ ಬಾರದೆ ಇರುವುದರಿಂದ‌ ಪಡೆದ ಸಾಲ ತೀರಿಸಲು ಆಗದೇ ಹೀಗಾದರೇ ಮುಂದಿನ ನನ್ನ ಕುಟುಂಬದ ಗತಿಯೇನು ಎಂದು ಬುಧವಾರ ಮನನೊಂದು ಸಾಯಬೇಕೆಂದು ವಿಷ ಕುಡಿದಿದ್ದ. ವಿಷ‌‌ ಕುಡಿದಿದ್ದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಇಂದು ಶನಿವಾರ ಬೆಳಿಗ್ಗೆ ಜಾವ ೫ಗಂಟೆಗೆ ಸಾವನ್ನಪ್ಪಿದ್ದಾನೆಂದು ಮಾಹಿತಿ ತಿಳಿದು ಬಂದಿದೆ.

ಮೃತ ರೈತನಿಗೆ ಎರಡು ಮಕ್ಕಳಿದ್ದು ಒಂದು ಗಂಡು(೩ತಿಂಗಳ ಕೂಸು) ಮಗು ಮತ್ತು ಒಂದು ಹೆಣ್ಣು (ಎರಡು ವರ್ಷ) ಮಗು ಇದೆ.

ಜೋತೆಗೆ ಇತನಿಗಿರುವ ಸಾಲದ ವಿವರ
ಸಿಂಡಿಕೇಟ್ ಬ್ಯಾಂಕ್ ಸಾಲ- 1ಲಕ್ಷ
ಕೈಗಡ ಸಾಲ- 3ಲಕ್ಷ
ಪಿಕೆಪಿಎಸ್- 20 ಸಾವಿರ ಮತ್ತು
ಬಂಗಾರದ ಸಾಲ- 50ಸಾವಿರ
ಒಟ್ಟಾರೆಯಾಗಿ 4ಲಕ್ಷ 70ಸಾವಿರ ಸಾಲವನ್ನು ಮಾಡಿಕೊಂಡಿದ್ದ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: