ಉತ್ತಮ ಸಮಾಜಕ್ಕಾಗಿ

ಕ್ವೇಸ್ಟ ಗ್ಲೋಬಲ್ ಕಂಪನಿಯ ಯೋಜನೆಯಿಂದ ಅನುದಾನಿತ ಶಾಲೆಗೂ ಉಚಿತ ಸಮವಸ್ತ್ರದ ಭಾಗ್ಯ

The free uniform is gift for the subsidized school by the Quest Global Company Plan

0

ಬೆಳಗಾವಿ :(news belagavi)  ನಗರದ  ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯ ಅನುದಾನಿತ ಶಾಲೆಯಾಗಿದ್ದು.ಈ ಶಾಲೆಯ 8, 9, ಹಾಗೂ 10 ನೇಯ ತರಗತಿಯ ಕನ್ನಡ ಹಾಗೂ ಮರಾಠಿ ಮಾಧ್ಯಮದ ಎಲ್ಲ ವಿದ್ಯಾರ್ಥಿನಿಯರಿಗೆ ಕ್ವೇಸ್ಟ ಗ್ಲೋಬಲ್ ಕಂಪನಿಯ ವತಿಯಿಂದ ಪ್ರತಿಯೊಬ್ಬರಿಗೂ ಎರಡು ಜೊತೆ ಸಮವಸ್ತ್ರ, ಶೂಸ್, ಸಾಕ್ಸ ಹಾಗೂ ಶಾಲಾ ಬ್ಯಾಗುಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ. ಸುಮಾರು ರೂ. 6,40,000 ಕ್ಕಿಂತ ಹೆಚ್ಚು ವೆಚ್ಚದ ಶಾಲಾ ಸಾಮಗ್ರಿಗಳನ್ನು ವಿದ್ಯಾರ್ಥಿನಿಯರಿಗೆ ಉಚಿತವಾಗಿ

ವಿತರಿಸಿದ್ದಾರೆ. ಇಂದು ಶಾಲಾ ಸಭಾಗೃಹದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೆಳಗಾವಿ ಶಾಖೆಯ ಕ್ವೇಸ್ಟ ಗ್ಲೋಬಲ್ ಕಂಪನಿಯ ಜನರಲ್ ಮ್ಯಾನೆಜರಾದ ಸಂದೇಶ ಶಿರೋಡಕರ ಇವರು ವಿದ್ಯಾರ್ಥಿನಿಯರಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಿದರು. ಬೆಳಗಾವಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀನಿವಾಸ ಶಿವಣಗಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಚೇರ್‍ಮನರಾದ
ಕೃಷ್ಣಕುಮಾರ ಪೈ ಇವರ ವಿಶೇಷ ಉಪಸ್ಥಿತಿ ದೊರಕಿತು.

ವಿದ್ಯಾರ್ಥಿನಿಯರ ಪ್ರಾರ್ಥನೆ ಹಾಗೂ ಸ್ವಾಗತ ಗೀತೆಯಿಂದ ಕಾರ್ಯಕ್ರಮವು ಆರಂಭಗೊಡಿಂತು. ಶಾಲೆಯ ಮುಖ್ಯೋಪಾದ್ಯಾಯರಾದ ಎಮ್. ಕೆ. ಮಾದಾರ್ ಇವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕ್ವೇಸ್ಟ ಗ್ಲೋಬಲ್ ಕಂಪನಿಯ ಸಿ. ಎಸ್. ಆರ್. ತಂಡದ ಪದಾಧಿಕಾರಿಗಳಾದ ಜಗನ್‍ಮೋಹನ ರೆಡ್ಡಿ, ಡೆನಿಸ್ ದೇವರಾಜ್, ಸುಜಿತ ತಿಳವೆ, ವೀರಭದ್ರ ಕಾಮದೊಳ್ಳಿ, ಜಗದೀಶ್ ಎಮ್. ಪ್ರಾಣೇಶ ಹೊನವಾಡ, ಶ್ರೀರಾಮ, ಮೋನಲ ಎಸ್ ಹಾಗೂ ಇತರರು ಉಪಸ್ಥಿತರಿದ್ದರು.

“ವಿದ್ಯಾರ್ಥಿನಿಯರಿಗೆ ಆಸಕ್ತಿಯಿಂದ ಶಿಕ್ಷಣ ಪಡೆಯಲು ಮತ್ತು ಪ್ರೇರಣೆ ನೀಡಲು ಕಂಪನಿಯ ಸಿ. ಎಸ್. ಆರ್. ಯೋಜನೆಯಡಿಯಲ್ಲಿ ಸಹಾಯ ಮಾಡುತ್ತಿದ್ದೇವೆ. ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದು. ಅಭ್ಯಾಸದ ಜೊತೆಗೆ ಕ್ರೀಡಾ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಮಿಂಚುವ ಸಾಧನೆ ಮಾಡಬೇಕೆಂದು” ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕ್ವೇಸ್ಟ ಗ್ಲೋಬಲ್ ಕಂಪನಿಯ ಬೆಳಗಾವಿ ಶಾಖೆಯ ಜನರಲ್ ಮ್ಯಾನೆಜರಾದ ಸಂದೇಶ ಶಿರೋಡಕರ ಇವರು ಹೇಳಿದರು. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಸುಧೀರ ಕುಲಕರ್ಣಿ ಇವರು ವಂದಿಸಿದರು. ಶ್ರೀದೇವಿ ಇಟಗೀಕರ ಇವಳು ನಿರೂಪಿಸಿದಳು. ಕಾರ್ಯಕ್ರಮಕ್ಕೆ ನೀತಿನ ಪೊರವಾಲ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.