ಉತ್ತಮ ಸಮಾಜಕ್ಕಾಗಿ

ಈಗಷ್ಟೇ ಸರ್ಕಾರ ನೂರು ದಿನ ಕಂಡಿದೆ. ಬೆಳಗಾವಿಯಲ್ಲಿ ಕಿತ್ತಾಟ ನಡೆಸಿರುವುದು ಎಷ್ಟು ಸರಿ. :ಡಿಸಿಎಂ ಡಾ.ಜಿ ಪರಮೇಶ್ವರ್

news belagavi

0

ಬೆಂಗಳೂರು: (news belagavi)ಡಿಸಿಎಂ ಡಾ.ಜಿ ಪರಮೇಶ್ವರ್​ ಇಂದು ತಮ್ಮ ಸದಾಶಿವನಗರದ ನಿವಾಸದಲ್ಲಿ ಕಾಂಗ್ರೆಸ್​ ಸಚಿವರಿಗೆ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಸಿಟ್ಟು ಪ್ರದರ್ಶಿಸಿದ್ದಾರೆ. ಡಿಸಿಎಂ ಬೆಳಗಾವಿ ಭಿನ್ನಮತ ವಿಷಯವನ್ನು ಪ್ರಸ್ತಾಪಿಸಿ
ಈಗಷ್ಟೇ ಸರ್ಕಾರ ನೂರು ದಿನ ಕಂಡಿದೆ. ಬೆಳಗಾವಿಯಲ್ಲಿ ಕಿತ್ತಾಟ ನಡೆಸಿರುವುದು ಎಷ್ಟು ಸರಿ. ಲಕ್ಷ್ಮಿ ಹೆಬ್ಬಾಳ್ಕರ್ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರಲ್ಲ. ಸಣ್ಣಪುಟ್ಟ ವಿಷಯವನ್ನು ತಮ್ಮ ಪ್ರತಿಷ್ಠೆಯ ಕಾರಣಕ್ಕೆ ದೊಡ್ಡದು ಮಾಡಿಕೊಂಡಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ. ಹೈಕಮಾಂಡ್​ವರೆಗೂ ಸಹ ಈ ವಿಷಯ ತಲುಪಿದೆ. ಚಿಕ್ಕ ವಿಷಯವನ್ನು ಇಷ್ಟು ದೊಡ್ಡದು ಮಾಡಿಕೊಂಡಿರುವುದು ತರವಲ್ಲ ಎಂದಿದ್ದಾರೆ.
ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ ಮಾಧ್ಯಮಗಳ ಎದುರು ರಮೇಶ್ ಜಾರಕಿಹೊಳಿ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ನಾನು ಲಕ್ಷ್ಮಿ ಹೆಬ್ಬಾಳಕರ ಬೆನ್ನಿಗೆ ನಿಂತಿದ್ದೇನೆ ಎಂಬುದು ಅವರ ಭಾವನೆ. ನಾನು ಯಾರ ಪರವಾಗಿಯೂ ನಿಂತಿಲ್ಲ. ಪಕ್ಷದ ಪರವಾಗಿಯಷ್ಟೇ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಹೆಸರು ಪ್ರಸ್ತಾಪಿಸಿದ್ದು ನೋವು ತಂದಿದೆ ಎಂದು ಸ್ಪಷ್ಟನೆ ಇದೇ ವೇಳೆ ಇಂಗಿತ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.