ಉತ್ತಮ ಸಮಾಜಕ್ಕಾಗಿ

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಬೆಳಗಾವಿಯಿಂದ ಸಂಕೇಶ್ವರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು (ಎಬಿವಿಪಿ) ತೀವ್ರವಾಗಿ ಖಂಡಿಸಿತು.

The government has strongly condemned the government's first-class women's college from Belgaum to Sankeshwar (ABVP).

0

ಬೆಳಗಾವಿ:(news belgaum)ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಬೆಳಗಾವಿಯಿಂದ ಸಂಕೇಶ್ವರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ ಖಂಡಿಸಿತು.
ನಗರದ ಚೆನ್ನಮ್ಮ ವೃತ್ತದಲ್ಲಿ ಎಬಿವಿಪಿ ವತಿಯಿಂದ ಈ ಕುರಿತಂತೆ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯವರು ತಮ್ಮ ತಮ್ನ ಪುಸ್ತಕಗಳನ್ನು ಪ್ರದರ್ಶಿಸುವ ಮೂಲಕ ವಿನೂತನ ಹೋರಾಟ ಮಾಡಿ, ಕರ್ನಾಟಕ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರ, ವಿದ್ಯಾರ್ಥಿ ವಿರೋಧಿ ಧೋರಣೆಯ ವಿರುದ್ಧ ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗಿದರು.
News Belgaum-ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಬೆಳಗಾವಿಯಿಂದ ಸಂಕೇಶ್ವರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ ಖಂಡಿಸಿತು. News Belgaum-ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಬೆಳಗಾವಿಯಿಂದ ಸಂಕೇಶ್ವರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ ಖಂಡಿಸಿತು. 1 News Belgaum-ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಬೆಳಗಾವಿಯಿಂದ ಸಂಕೇಶ್ವರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ ಖಂಡಿಸಿತು. 2ಈ ಸಂಧರ್ಭದಲ್ಲಿ ಮಾತನಾಡಿದ, ಎಬಿವಿಪಿ ರಾಜ್ಯ ವೃತ್ತಿ ಶಿಕ್ಷಣ ಪ್ರಮುಖ ಗಿರೀಶ್ ಬಡಿಗೇರ ಜಿಲ್ಲೆಯಲ್ಲಿರುವ ಈ ಏಕೈಕ ಸರ್ಕಾರಿ ಮಹಿಳಾ ಕಾಲೇಜನ್ನು ಸಂಕೇಶ್ವರಕ್ಕೆ ಸ್ಥಳಾಂತರಿಸುವ ಹುನ್ನಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು, ಅವಶ್ಯಕತೆ ಇದ್ದರೇ ಸಂಕೇಶ್ವರದಲ್ಲಿ ನೂತನ ಕಾಲೇಜು ಪ್ರಾರಂಭಿಸಿ ಮತ್ತು ಶೀಘ್ರದಲ್ಲಿ ಈ ಕಾಲೇಜಿಗೆ ಸ್ವಂತ ನಿವೇಶನ, ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ವಿದ್ಯಾರ್ಥಿಪರ ಕಾಳಜಿಯನ್ನು ಪ್ರದರ್ಶಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಬಿವಿಪಿ ಉಗ್ರ ಹೋರಾಟಕ್ಕೆ ಕರೆ ನೀಡುತ್ತದೆ ಎಂದು ಹೇಳಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲು ಜಿಲ್ಲಾಧಿಕಾರಿ ಕಛೇರಿಗೆ ಹೋಗುತ್ತಿದ್ದಂತೆ ಜಿಲ್ಲಾಧಿಕಾರಿ ಜಿಯಾವುಲ್ಲಾ ವಿದ್ಯಾರ್ಥಿಗಳನ್ನು ನೋಡಿಯೂ ನೋಡಿದಂತೆ ತೆರಳಿದರು, ತಮ್ಮ ಅಳಲನ್ನು ತೋರ್ಪಡಿಸಿಕೊಳ್ಳಲು ಬಂದಾಗ, ಸಂಭವಿಸಿದ ಈ ಘಟನೆ ವಿದ್ಯಾರ್ಥಿಗಳನ್ನು ಕೆರಳಿಸಿತು.
ಹಾಗೆಯೇ, ಸುಮಾರು 3 ಗಂಟೆಗಳ ಕಾಲ ಎಲ್ಲಾ ಪ್ರತಿಭಟನಾ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಛೇರಿಯಿಂದ ಕದಲದೇ ಅಲ್ಲಿಯೇ ತಮ್ಮ ಪ್ರತಿಭಟನೆ ಮುಂದುವರಿಸಿ, ಜಿಲ್ಲಾಧಿಕಾರಿ ವಿರುದ್ಧವೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತದನಂತರ ಆಗಮಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ವಿದ್ಯಾರ್ಥಿನಿಯರ ಬಳಿ ಬಂದು ಅವರ ಮನವಿಯನ್ನು ಸ್ವೀಕರಿಸಿ, ಈ ಕಾಲೇಜನ್ನು ಇಲ್ಲಿಂದ ಬೇರೆಯಡೆಗೆ ಸ್ಥಳಾಂತರ ಮಾಡದಂತೆ ನೋಡಿಕೊಳ್ಳುತ್ತೇನೆ ಮತ್ತು ಸರ್ಕಾರಕ್ಕೆ ಶಿಫಾರಸು ಪತ್ರ ಬರೆಯುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಪ್ರತಿಭಟನೆಯಲ್ಲಿ ವಿಭಾಗ ಸಂಚಾಲಕ ಶಿವಾನಂದ ಸೈದಾಪೂರ, ಮಹಾನಗರ ಕಾರ್ಯದರ್ಶಿ ರೋಹಿತ್ ಉಮಾನಾಬಾದಿಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಚೀನ್ ಹಿರೇಮಠ, ಶ್ರೀಶೈಲ ವಾಲಿ, ನಾಗರಾಜ ಗಸ್ತಿ, ಪ್ರಮೋದ್, ಸಮ್ಮೇದ್, ಶಿವಾನಂದ ಉಪರಿ, ಸಂತೋಷ ಪಾಟೀಲ, ಅಶ್ವಿನಿ, ರಶ್ಮಿ, ಸಂಗೀತಾ ಸೇರಿದಂತೆ ಕಾಲೇಜಿನ ನೂರಾರು ಜನ ವಿದ್ಯಾರ್ಥಿನಿಯರು ಭಾಗವಹಿಸದ್ದರು.The government has strongly condemned the government’s first-class women’s college from Belgaum to Sankeshwar (ABVP).

Leave A Reply

 Click this button or press Ctrl+G to toggle between Kannada and English

Your email address will not be published.