ಉತ್ತಮ ಸಮಾಜಕ್ಕಾಗಿ

ಬಾಳೆಕೋಡಲ ಡ್ಯಾಂ (ಕೆರೆ)ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯತ್ ಸದಸ್ಯರಿಂದ ಒತ್ತಾಯ

The Gram Panchayat members Urges to clean up Baalekodal Dam (Lake)

0

ಬೆಳಗಾವಿ: (news belagaviಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿರುವ ಬಾಳೆಕೊಡಲ ಡ್ಯಾಂ(ಕೆರೆ) ಸುಮಾರು 150 ಎಕರೆಯಷ್ಟಿದ್ದು, ಈ ವರ್ಷ ಉತ್ತಮ ವರ್ಷಧಾರೆಯಿಂದ ಇಲ್ಲಿ ನೀರು ಸೇಕರನೆಗೊಂಡಿರುವುದು ಕಂಡುಬರುತ್ತದೆ. ಆದರೆ ಈ ಕೆರೆಗೆ ೬-೮ ಗೇಟಗಳಿದ್ದು ಅದರಲ್ಲಿ ೧ಗೇಟ ಸಂಪೂರ್ಣ ಹಾಳಾಗಿದೆ. ಆದ್ದರಿಂದ ಈ ಕೆರೆಯಲ್ಲಿ ಶೇಖರಣೆಗೊಂಡ ನೀರು ಭಾರಿ ಪ್ರಮಾಣದಲ್ಲಿ ಬೇರೆಡೆ ಹರಿದು ಪೋಲಾಗುತ್ತಿದೆ. ಕೆರೆಯ ಸುತ್ತಮುತ್ತಲಿನ ಸಾವಿರಾರು ರೈತರು ಈ ಕೆರೆಯನ್ನೇ ಅವಲಂಬಿತರಾಗಿದ್ದಾರೆ. ಈ ಕೆರೆಯ ನೀರನ್ನು ಉಪಯೋಗಿಸಿಕೊಂಡು ರೈತರು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ಬಾಳೆಕೋಡಲ ಡ್ಯಾಂ (ಕೆರೆ)ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯತ್ ಸದಸ್ಯರಿಂದ ಒತ್ತಾಯ- Tarun kranti
ಕಳೆದ ನಾಲ್ಕು ವರ್ಷಗಳಿಂದ ಬೀಕರ‌ ಬರಗಾಲ ಆವರಿಸಿದ್ದರಿಂದ ಈ ಕೆರೆಯಲ್ಲಿ ನೀರೇ ಇಲ್ಲದೆ ದನ ಕರುಗಳಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು. ಆದರೆ ಈ ವರ್ಷ ಉತ್ತಮವಾಗಿ ಮಳೆ ಆಗುತ್ತಿದ್ದು, ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೆರೆಯ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳದಿದ್ದರೆ, ಈಗಾಗಲೇ ಕೆರೆಯಲ್ಲಿ ಶೇಖರಣೆಗೊಂಡಂತಹ ನೀರು ಪೋಲಾಗುವ ಸಂಭವ ಇದೆ.

ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ದುರಸ್ತಿ ಕಾರ್ಯವನ್ನು ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ‌ ಸಂಧರ್ಭದಲ್ಲಿ ಬೀಡಿ ಗ್ರಾಮ ಪಂಚಾಯತ್ ಸದಸ್ಯರಾದ ಪುಂಡಲೀಕ ಕಾತಗಾರ. ಫಕ್ಕೀರಪ್ಪ ಪಾಟೀಲ್. ಚಂದ್ರಪ್ಪ ಚಲವಾದಿ ಹಾಗು ಗ್ರಾಮಸ್ಥರಾದ ರಾಜು ಪಾಟೀಲ. ಸಂತೋಷ್ ಹಡಪದ ಆಗ್ರಹಿಸಿದ್ದಾರೆ .

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.