ಉತ್ತಮ ಸಮಾಜಕ್ಕಾಗಿ

ದಿ. ಇಂದಿರಾ ಗಾಂಧಿ ಪೊಲೀಸರ ಬಗ್ಗೆ ಅಪಾರ ಗೌರವಾದರ ಹೊಂದಿದ್ದರು: ಡಾ. ಡಿವಿಜಿ

The. Indira Gandhi had great respect for the police: Dr. DVG

0

ಬೆಳಗಾವಿ: ( tarun kranti )ಪೊಲೀಸರ ಬಗ್ಗೆ ಅಪಾರ ಗೌರವ, ಆದರ ಹೊಂದಿದ್ದ ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೊನೆಗೆ Uniform Service ಸಿಬ್ಬಂಧಿಯಿಂದಲೇ ಹತ್ಯೆಯಾದದ್ದು ಇತಿಹಾಸದ ದುರಂತ ಎಂದು ನಿವೃತ್ತ DGP ಡಾ. ಡಿ. ವಿ. ಗುರುಪ್ರಸಾದ ಖೇದ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಭವನದಲ್ಲಿ ಇಂದು ನಡೆದ‘ಕೈಗೆ ಬಂದ ತುತ್ತು’ತಮ್ಮ ಆತ್ಮಚರಿತ್ರೆಯ ಪುಸ್ತಕದ ಚರ್ಚೆ & ವಿಮರ್ಷೆ ಸಂದರ್ಭ ಮಾತನಾಡಿ ತಮ್ಮ ಸುದೀರ್ಘ 36 ವರ್ಷಗಳ IPS ಸೇವೆಯ ಅನುಭವಗಳನ್ನು ಹಂಚಿಕೊಂಡರು.
1976 ರಲ್ಲಿ ಐಪಿಎಸ್ ನೌಕರಿಗೆ ಸೇರಿದ್ದೆ, ಆವಾಗ ಪ್ರಧಾನಿ ಇಂದಿರಾ ಅಧಿಕಾರ ಕಳೆದುಕೊಂಡಿದ್ದರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಕಂಚಿ ಕಾಮಕೋಟಿ ಸ್ವಾಮೀಜಿ ನೋಡಲು ಇಂದಿರಾ ಅಂದು ಬಂದಿದ್ದರು. ಅಂದಿನ ಎಂಎಲ್ ಸಿ ನಾರಾಯಣಸ್ವಾಮಿ ಅವರ ಮನೆಯಲ್ಲಿ ಊಟಕ್ಕೆ ಕುಳಿತಿದ್ದ ಇಂದಿರಾ ಗಾಂಧಿ ತಮ್ಮೆದುರು ನಿಂತಿದ್ದ ಪೊಲೀಸ್ ಅಧಿಕಾರಿಗಳ ಊಟದ ವ್ಯವಸ್ಥೆ ಬಗ್ಗೆ ಸಹ ವಿಚಾರಿಸಿದರು. ನಾವು (Police) ಅಲ್ಲಿ ಊಟಕ್ಕೆ ಆಹ್ವಾನಿತರಾಗಿರಲಿಲ್ಲ. ಕೆ. ಆರ್. ಶ್ರೀನಿವಾಸನ್ ಅವರು ಬಳ್ಳಾರಿ ಎಸ್ಪಿಯಾಗಿದ್ದರು; ನಾನು ಅವರ ಕೆಳಗೆ ಕಿರಿಯ ಅಧಿಕಾರಿಯಾಗಿದ್ದೆ. ನಮ್ಮ ಎಸ್ಪಿ ಶ್ರೀನಿವಾಸ ಅವರನ್ನು ಪಕ್ಕಕ್ಕೆ ಕರೆದು ಇಂದಿರಾ ಗಾಂಧಿ ಊಟ ಮಾಡಿಸಿದರು. ಇಂದಿರಾ ಪಕ್ಕ ಕುಳಿತು ನಮ್ಮ ಎಸ್ಪಿ ಊಟ ಮಾಡಿದ ಸಂದರ್ಭ ನೋಡಲು ನನಗೆ ಅಪಾರ ಗೌರವಾಭಿಮಾನ ಉಕ್ಕಿತು ಎಂದು ಡಾ. ಗುರುಪ್ರಸಾದ ಅನುಭವ ಹಂಚಿಕೊಂಡರು.ದಿ. ಇಂದಿರಾ ಗಾಂಧಿ ಪೊಲೀಸರ ಬಗ್ಗೆ ಅಪಾರ ಗೌರವಾದರ ಹೊಂದಿದ್ದರು: ಡಾ. ಡಿವಿಜಿ- Tarun kranti ದಿ. ಇಂದಿರಾ ಗಾಂಧಿ ಪೊಲೀಸರ ಬಗ್ಗೆ ಅಪಾರ ಗೌರವಾದರ ಹೊಂದಿದ್ದರು: ಡಾ. ಡಿವಿಜಿ- Tarun kranti 1

ಆ ಸಂದರ್ಭ ದೇವರಾಜ ಅರಸು ಅವರ ಸರಕಾರ ರಾಜ್ಯದಲ್ಲಿ ಇತ್ತು. ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರನ್ನು ಆಹ್ವಾನಿಸಲು ಬರಲಿಲ್ಲ. ಕಾಂಗ್ರೆಸ್ ಇದೇ ಸಂದರ್ಭ ಇಬ್ಭಾಗ ಆಯ್ತು ಸಹ. ನಂತರ ಗುಂಡೂರಾಯರ ರಾಜ್ಯ ಸರಕಾರ ಅಧಿಕಾರಕ್ಕೆ ಬಂತು. ದಿಲ್ಲಿ ಸಾಮ್ರಾಟ್ ಹೊಟೇಲ್ ನಲ್ಲಿ ಪ್ರಧಾನಿ ಇಂದಿರಾಗಾಂಧಿ ಪೊಲೀಸರಿಗಾಗಿಯೇ ವಿಶೇಷ ಔತನ-ಊಟ ಏರ್ಪಡಿಸಿದ್ದರು. ಅದರಲ್ಲಿ ನಾನೂ ಭಾಗವಹಿಸಿದ್ದೆ ಎಂದು ಸ್ಮರಿಸಿಕೊಂಡರು.

ಬೆಳಗಾವಿಗೆ ಬಂದಾಗ ಇಂದಿರಾ ಅತ್ಯಾಪ್ತ ಪ್ರಭಾವಿ ರಾಜಕಾರಣಿ ಶಂಕರಾನಂದ ಅವರನ್ನು ನಾನು ತಳ್ಳಿದ್ದೆ, ಇಂದಿರಾ ಹೊರಟಿದ್ದ ವಾಹನವೊಂದರಲ್ಲಿ ಏರಲು ಶಂಕರಾನಂದ ಪ್ರಯತ್ನಿಸುತ್ತಿದ್ದಾಗ ಯುವ ಅಧಿಕಾರಿಯಾಗಿದ್ದ ನಾನು ಅವರನ್ನು ತಡೆದು ತಳ್ಳಿದ್ದೆ. ನನ್ನ ಹಿರಿಯ ಅಧಿಕಾರಿಗಳು ನೋಡಿ ಕಕ್ಕಾಬಿಕ್ಕಿಯಾಗಿದ್ದರು. ನಾನು ಶಂಕರಾನಂದ ಬಗ್ಗೆಯಾಗಲಿ; ಅವರು ಇಂದಿರಾ ಗಾಂಧಿ ಆಪ್ತರು ಎಂಬ ಬಗ್ಗೆ ತಿಳಿದಿರಲಿಲ್ಲ ಎಂದು ಗುರುಪ್ರಸಾದ ತಿಳಿಸಿದರು.

ಸ್ವಾರಸ್ಯ:ಅಂದಿನ ಉಪಪ್ರಧಾನಿ ದೇವಿಲಾಲ್ ಅವರು ರಾಜ್ಯಕ್ಕೆ ರೈಲಿನಲ್ಲಿ ಭೇಟಿ ನೀಡಿದ್ದಾಗ ತಮ್ಮೊಂದಿಗೆ ಎಮ್ಮೆಯೊಂದನ್ನು ತಂದಿದ್ದರು. ಶುದ್ಧ ಹಾಲು ಸೇವಿಸಲು ಎಮ್ಮೆ ತರುವುದು ಆಗಿನ ಅಭ್ಯಾಸವಾಗಿತ್ತು. ಉಪಪ್ರಧಾನಿ ಅವರ ಭದ್ರತೆ ಜತೆಗೆ ಎಮ್ಮೆ ಎಸ್ಕಾರ್ಟ್ ಮಾಡಿದ ನನ್ನ ಅನುಭವ ರೋಚಕವಾಗಿತ್ತು.

ಮಜುಗುರ ಸನ್ನಿವೇಶ:ಹೈದರಾಬಾದ ಕರ್ನಾಟಕದ ಬಿಸಿಲು ಜಿಲ್ಲೆಗಳಲ್ಲಿ ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳಿಸಿದ್ದಾಗ, ತಮ್ಮ ಗೆಳೆಯನಿಗೆ ಬಿಸಿಲು ಡಾವರ ತಡೆಯಲಾರದೇ ಬೇಕೆನಿಸಿದ Chilled ಬೀಯರ್ ಪಡೆಯಲು ಕಾರಿನಿಂದಿಳಿದ ಸ್ವತಃ ಎಡಿಜಿಪಿ ಅವರಿಗೆ ತಾವೇ ನೇಮಕಾತಿ ಮಾಡಿದ್ದ ಪೊಲೀಸ್ ಅಧಿಕಾರಿ ಎದುರುಗೊಳ್ಳಬೇಕೆ! ಡಾ. ಗುರುಪ್ರಸಾದ ಅವಧಿಯಲ್ಲಿ ಪಿಎಸ್ ಐ ಆಗಿ ಹೊಸದಾಗಿ ನೇಮಕವಾಗಿದ್ದ ಯುವ ಅಧಿಕಾರಿಯೊಬ್ಬ ಸಾರಾಯಿ ಅಂಗಡಿ ಬಳಿಯಲ್ಲಿ ತಮ್ಮ ದೊಡ್ಡ ಸಾಹೇಬರನ್ನು ನೋಡಿ ಸೆಲ್ಯೂಟ್ ಹೊಡೆದ, ಕಸಿವಿಸಿಗೊಂಡ ಗುರುಪ್ರಸಾದ ಸಾಹೇಬರು ತಮ್ಮ ಪುಟ್ಟ ಅಧಿಕಾರಿ ಎದುರು ಸಿಗಬಾರದ ಜಾಗದಲ್ಲಿ ಗೋಚರಿಸಿ ಮಜುಗುರಪಟ್ಟರು. ‘ಹೇ ಸಾಹೇಬರಿಗೆ ಏನೇನು ಬೇಕು ಕೊಡು’ ಎಂದು ಹೇಳಿ ತಾನೇ ಹಣ ತೆರಲು ಆ ಯುವ ಅಧಿಕಾರಿ ಬಂದಾಗ ನನಗೆ ಆದ ಮಜುಗುರ-ಸಂಕಟ ಅಷ್ಟಿಷ್ಟಲ್ಲ ಎಂದರು. ಡಾ. ಗುರುಪ್ರಸಾದ. ಅಜಯಕುಮಾರ ಸಿಂಗ್ ಹಾಕಿಕೊಟ್ಟ ಹಾದಿಯಲ್ಲಿ ಸುಧಾರಣೆ ಮಾಡಿ ನೂರಾರು ಪಿಎಸ್ಐ ಮತ್ತು ಕಾನ್ಸಟೇಬಲ್ ಗಳನ್ನು ನೇಮಕ ಮಾಡಿದೆ. ದೇಶದಲ್ಲಿಯೇ ನಮ್ಮ ರಾಜ್ಯದ ಪೊಲೀಸ್ ನೇಮಕಾತಿ ಪ್ರಕ್ರಿಯೆ ಹೆಸರಾಯಿತು. UP ಮುಖ್ಯಮಂತ್ರಿ ಮಾಯಾವತಿ ಸಹ ನನ್ನನ್ನು ಕರೆದು ನೇಮಕಾತಿ ಮಾಹಿತಿ ಪಡೆದುಕೊಂಡರು.

ಜಾತ್ಯಾತೀತರಾಗಿ:ಜಾತಿ ಪಂಥ ಮತಬೇದ ಯಾವ ಸರಕಾರಿ ನೌಕರನೂ, ಅದರಲ್ಲೂ ಪೊಲೀಸ್ ಅಧಿಕಾರಿ ಮಾಡತಕ್ಕದ್ದಲ್ಲ. ಪೊಲೀಸನಿಗೆ ತನ್ನ ವರದಿಯೊಂದೇ ಜಾತಿ. ನಾನು ನನ್ನ ಸರ್ವೀಸನಲ್ಲಿ ಯಾರ ಜಾತಿ ಕೇಳಲಿಲ್ಲ. ಆದರೆ ಗುಪ್ತಚರದಲ್ಲಿ ಕೆಲಸ ಮಾಡುವಾಗ ಜಾತಿಗೀತಿ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆ ಬಂತು ಎಂದರು.

ರಾಜೀನಾಮೆ ಫಜೀತಿ:ಅಧಿಕಾರ ಚಲಾಯಿಸಲು ಕಾನೂನು ಜ್ಞಾನ ಅಪಾರ ಇರಬೇಕು. ಭುಜಪರಾಕ್ರಮಗಳಾದ ರ್ಯಾಂಕಗಳಿಗೆ ಯಾರೂ ಬೆಲೆ ಕೊಡುವುದಿಲ್ಲ. ರ್ಯಾಂಕ್ ಜತೆಗೆ ಅಷ್ಟೇ ಜ್ಞಾನ-ತಿಳುವಳಿಕೆ ಬೇಕು ಎಂದು ಸಲಹೆ ನೀಡಿದ ಅವರು ಪ್ರಸಂಗವೊಂದನ್ನು ಬಿಡಿಸಿದರು. ತಾವು ಎಸ್ಪಿಯಾಗಿದ್ದ ಜಿಲ್ಲೆಯೊಂದರಲ್ಲಿ Constable Writer ಮತ್ತು ಆ ಠಾಣೆಯ ಪಿಎಸ್ ಐ ನಡುವೆ ಭಿನ್ನಾಭಿಪ್ರಾಯ ತೋರಿತ್ತು. Constable Writer ನಷ್ಟು ಕಾನೂನು ಜ್ಞಾನ PSIಗೆ ಇರಲಿಲ್ಲ ಬಿಡಿ. Writer ಗೆ ಪಿಎಸ್ ಐ ತುರ್ತು ಕೆಲಸಕ್ಕೆ ರಜೆ ಕೊಟ್ಟಿರಲಿಲ್ಲ. ಇದರಿಂದ ಇಬ್ಬರ ನಡುವೆ ವೈಮನಸ್ಸು ಹುಟ್ಟಿತ್ತು. Writer ಗೆ ಸುಖಾಸುಮ್ಮನೇ ಗದರುತ್ತಿದ್ದ ಪಿಎಸ್ ಐಗೆ writer ಸರಿಯಾಗೇ ಬುದ್ದಿ ಕಲಿಸಿದ್ದ..! ‘ನನಗೆ ನೌಕರಿ ಬೇಡ; ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಪಿಎಸ್ ಐ writer ಪತ್ರ ಬರೆದುಕೊಟ್ಟಿದ್ದ ಅದಕ್ಕೆ ಸಹಿ ಮಾಡಿದ್ದ ಪಿಎಸ್ ಐ ಪತ್ರ ಎಸ್ಪಿ ಟೇಬಲ್ ಗೆ ಬಂತು. ನಾನು ಪಿಎಸ್ಐ ಗೆ ತುರ್ತು ಕರೆದು ರಾಜೀನಾಮೆ ಯಾಕೆ ಕೊಡುತ್ತಿದ್ದೀರಿ ಅಂದೆ. ಹೌಹಾರಿದ ಪಿಎಸ್ ಐ ಇಲ್ಲ ಸರ್ ನಾನು ರಾಜೀನಾಮೆ ಕೊಟ್ಟಿಲ್ಲ ಎಂದು ಚಂಗನೆ ಹಾರಿ, ಮುಗುಟಿ ಹೇಳಿದ ಎಂದು ಡಾ. ಗುರುಪ್ರಸಾದ ವೃತ್ತಿ ರಂಜನೆಯನ್ನು ವಿವರಿಸಿದರು.
ಅಂತರ ಕಾಯ್ದುಕೊಳ್ಳಿ:ಮಾಧ್ಯಮ ಮತ್ತು ಪೊಲೀಸ್ ಸಂಬಂಧ ಅನ್ಯೋನ್ಯವಾಗಿರಬೇಕೆ ಹೊರತು ತೀರಾ Close ಇರಬಾರದು. ಇಬ್ಬರ ಸಂಬಂಧ ಬೆಂಕಿ-ಬೆಣ್ಣೆ ಇದ್ದ ಹಾಗೆ. ಮಾಧ್ಯಮಗಳಿಗು ಸಾಕಷ್ಟು News Source ಇರುತ್ತವೆ. ಆದರೆ ಯಾವುದೇ ಸುದ್ದಿಗೆ ಪೊಲೀಸ್ Unit Headಗಳೇ ಮಾಹಿತಿ ಒದಗಿಸಬೇಕೆ ಹೊರತು. ಯಾವುದೇ ಕೆಳಹಂತದ ಸಿಬ್ಬಂಧಿ ಮಾಹಿತಿ ನೀಡಬಾರದು. ಮಾಧ್ಯಮಗಳು ಎಲ್ಲವನ್ನೂ ತೆರೆದಿಡಲು ಪ್ರಯತ್ನಿಸುವುದರಿಂದ ಇಲಾಖೆಯ ಗೌಪ್ಯತೆ, ಸಾಮಾಜಿಕ ಹೊಣೆಗಾರಿಕೆಗೆ ಪೆಟ್ಟು ಬೀಳುತ್ತದೆ. ಆದರೆ ಮಾಧ್ಯಮ ಮತ್ತು ಪೊಲೀಸ್ ಪರಸ್ಪರರು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದು ಡಾ. ಪ್ರಸಾದ ಪ್ರತಿಪಾದಿಸಿದರು. ಮುಂಬಯಿ ತಾಜ್ ಹೊಟೇಲ್ ದಾಳಿ ವೇಳೆಯ ನೇರ ಪ್ರಸಾರ ಪೊಲೀಸರಿಗೆ, ಸೈನಿಕರಿಗೆ ಅನಾನುಕೂಲವಾಯಿತು ಎಂದರು. ಸರಕಾರದ ಮೆಡಲ್ ಗೌರವ, ಭುಜದ ಮೇಲಿನ ರ್ಯಾಂಕ್ ಬಲ ಹೊರತಾಗಿ ಜನರಿಗೆ ಹತ್ತಿರವಾಗಿರುವ ಕಾನೂನು ಪರಿಣಿತ ನೌಕರನೇ ಯಶಸ್ವಿ ಅಧಿಕಾರಿಯಾಗಲು ಸಾಧ್ಯ ಎಂದರು. ಜ‌ನರಿಂದ ಗೌರವ ಪಡೆಯುವುದು ಮುಖ್ಯ ಎಂದು ತಿಳಿ ಹೇಳಿದರು.

ಸಿನೆಮಾ ರಂಗ, ವರನಟ ಡಾ. ರಾಜುಕುಮಾರ ಅವರೊಂದಿಗಿನ ಒಡನಾಟ, ಪೊಲೀಸ್ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಕಾರ್ಯಾಭಾರ, ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳೊಂದಿಗಿನ ಒಡನಾಟ, ಮೊದಲಿದ್ದ COD ಅನ್ನು CID ಆಗಿ ತಾವೇ ಹೆಸರು ಬದಲಾವಣೆ ಮಾಡಿದ್ದು, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸ್ಥಾಪನೆ ಸೇರಿದಂತೆ ಇತರ ರೋಚಕ ಶ್ರೀಮಂತ ಅನುಭವಗಳನ್ನು ಡಾ. ಗುರುಪ್ರಸಾದ ಹಂಚಿಕೊಂಡರು.

ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಸಹ ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಿಸಿಪಿ ಸೀಮಾ ಲಾಟಕರ, ಅಶೋಕ ಕುರೇರ, ಎಸ್. ಎಂ. ಮುಚ್ಚಂಡಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.