ಉತ್ತಮ ಸಮಾಜಕ್ಕಾಗಿ

ಜೈನ ಪಿಯು ಸಾಂಸ್ಕøತಿಕ ಉತ್ಸವ ಯಶಸ್ವಿ

news belagavi

0

ಬೆಳಗಾವಿ,(news belgaum) ನಗರದ ಜೆಜಿಐ ಸಂಸ್ಥೆ ಶುಕ್ರವಾರ ಹಾಗೂ ಶನಿವಾರದಂದು ಎರಡು ದಿನಗಳ ಕಾಲ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಅಂತರ್ ಶಾಲಾ – ಕಾಲೇಜು ಸಾಂಸ್ಕøತಿಕ ಉತ್ಸವ ಯಶಸ್ವಿಯಾಗಿದ್ದು ಜಿಎಸ್‍ಎಸ್ ಪದವಿ ಪೂರ್ವ ಕಾಲೇಜು ಹಾಗೂ ಸೆಂಟ್ ಪಾಲ್ಸ್ ಹೈಸ್ಕೂಲ್ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮೆರೆದು ಜನರಲ್ ಚಾಂಪಿಯನ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.

ಕೆಎಲ್‍ಇ ಸಂಸ್ಥೆಯ ಇನ್‍ಡಿಪೆಂಡ್ ಪಿಯು ಕಾಲೇಜು ಹಾಗೂ ಹೈಸ್ಕೂಲ ವಿಭಾಗದಲ್ಲಿ ಜೈನ ಹೆರಿಟೆಜ್ ಸ್ಕೂಲ್ ವಿದ್ಯಾರ್ಥಿಗಳು ರನರ್ಸ್ ಪ್ರಶಸ್ತಿ ಪಡೆದುಕೊಂಡಿವು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸರಸ್ವತಿ ಕುಪ್ಪವಾಡಿ ದಂಪತಿ, ಜೆಜಿಐ ಸಂಸ್ಥೆಯ ಕುಲಸಚಿವ ಪ್ರೊ. ಕೆ.ಜಿ. ಮಳಲಿ, ಪ್ರಾಚಾರ್ಯೆ ರೋಹಿಣಿ ಕೆ.ಬಿ. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ ಪ್ರೊ. ಸರಸ್ವತಿ ಕುಪ್ಪವಾಡೆ ಅವರು, ಛಲವೊಂದಿದ್ದರೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಎಂತಹ ಸವಾಲನ್ನೂ ಎದುರಿಸಲು ಸಾಧ್ಯವಾಗುತ್ತದೆ. ಛಲದ ಮೂಲಕ ವಿದ್ಯಾರ್ಥಿಗಳು ಸಾಧನೆಗೆ ಧೈರ್ಯದಿಂದ ಮುನ್ನುಗ್ಗಬೇಕು ಎಂದು ಹೇಳಿದರು.

ಪ್ರೊ. ಕೆ.ಜಿ. ಮಳಲಿ ಅವರು ಮಾತನಾಡಿ, ಜೆಜಿಐ ಸಂಸ್ಥೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟದ ಜೊತೆಗೆ, ಸಮಾಜಿದಲ್ಲಿ ಧೈರ್ಯದಿಂದ ಬದುಕಲು ಪೂರಕವಾದ ಸಾಂಸ್ಕøತಿಕ ತಿಳುವಳಿಕೆ ಯಾವತ್ತೂ ನೀಡುತ್ತ ಬಂದಿದೆ ಎಂದು ಹೇಳಿದರು. ಪ್ರಾಚಾರ್ಯೆ ರೋಹಿಣಿ ಉತ್ಸವದ ಯಶಸ್ವಿಗೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.