ಉತ್ತಮ ಸಮಾಜಕ್ಕಾಗಿ

ಶತಮಾನದ ಅಪರೂಪದ ದೀರ್ಘಾವಧಿ ಚಂದ್ರಗ್ರಹಣ

The longest lunar eclipse of the century

0

ಜಿ. ಪುರುಶೋಥಮ್

ಬೆಳಗಾವಿ: (news belagavi ) ಶತಮಾನದ ಅಪರೂಪದ ದೀರ್ಘಾವಧಿ ಚಂದ್ರಗ್ರಹಣವೆಂದೇ ತಿಳಿಯಲಾದ ಚಂದ್ರಕಾಂತಿ ವೀಕ್ಷಿಸಲು ಮೊದಲಾರ್ಧದಲ್ಲಿ ಮೋಡ ಮರೆಯಾಗಿ ಬೆಳಗಾವಿಯಲ್ಲಿ ನಿರಾಸೆ ಮೂಡಿಸಿತು. ಸವಿನಿದ್ದೆಗೆಟ್ಟು ಕೆಂಬೂತಿ ಚಂದ್ರದರ್ಶನಕ್ಕೆ ತಡರಾತ್ರಿ 11:50ರ ಸುಮಾರಿಗೆ ತಮ್ಮ ತಾರಸಿ ಏರಿದ್ದ… ಮೈದಾನಕ್ಕಿಳಿದಿದ್ದ… ಕುತೂಹಲಿಗಳಿಗೆ ಕಂಡಿದ್ದು ಮೋಡ ಮುಸುಕಿದ ಆಕಾಶ & ತುಂತುರು ಮಳೆ ಮಾತ್ರ. ಖಗ್ರಾಸ ಚಂದ್ರಗೃಹಣ ಅನೇಕ ಭೌಗೋಳಿಕ ವಿಪ್ಲವ ಸೃಷ್ಟಿಸುತ್ತದೆ, ಮಾನವ ಜನಾಂಗಗಳಲ್ಲಿ ಸಂಕಷ್ಟ ತರುತ್ತದೆ ಎಂಬ ಇಲ್ಲದ ಭಯ ಸೃಷ್ಟಿಸಿದ್ದ ಜ್ಯೋತಿಷಿಗಳು ಮಾತ್ರ ಬೆಳಿಗ್ಗೆ ಎಲ್ಲರಿಗಿಂತ ತಡವಾಗಿಯೇ ಎದ್ದಿದ್ದಾರೆ. ವೈಜ್ಞಾನಿಕ ತಳಹದಿಯಲ್ಲಿ ಎರಡೂ ತೇಲುವ ಕಾಯಗಳ ನಡುವಿನ ಗುರುತ್ವಾಕರ್ಷಣೆಯಿಂದ ಒತ್ತಡ ಸೃಷ್ಟಿಯಾಗಬಹುದೇ ಹೊರತು ವಿಪರೀತ ಭಯ ಪಡುವ ಅಗತ್ಯವಿಲ್ಲ ಎಂಬುವುದು ಖಗೋಳ ವಿಜ್ಞಾನ ಬಲ್ಲವರ ಅಂಬೋಣ. ….ಇಂಥ ಚಂದ್ರಗೃಹಣ ಮತ್ತೊಮ್ಮೆ ನೋಡಾಕ ನಾವೆಲ್ಲಿ ಅಲ್ಲಿತನಕ ಬದಕಿರ್ತೇವೆ…. ಎಂದು ತಡರಾತ್ರಿ ಶತಮಾನದ ರಕ್ತಗೆಂಪು ಖಗ್ರಾಸ್ ಚಂದ್ರಗ್ರಹಣ ನೋಡಲೆದ್ದಿದ್ದವರು ಇನ್ನೊಂಚೂರು ಜಾಗರಣೆ ಮಾಡಿದ್ದರೆ ನೋಡಬಹುದಿತ್ತು.

ಶತಮಾನದ ಅಪರೂಪದ ದೀರ್ಘಾವಧಿ ಚಂದ್ರಗ್ರಹಣ- Tarun kranti 1

ಶತಮಾನದ ಅಪರೂಪದ ದೀರ್ಘಾವಧಿ ಚಂದ್ರಗ್ರಹಣ- Tarun kranti

 

ಹೌದು ಚಂದ್ರಗ್ರಹಣ ಬೆಳಗಾವಿಯಲ್ಲಿ ತಡರಾತ್ರಿ(ಬೆಳಗಿನ ಜಾವ) 1:30ರ ನಂತರ ಮುಸುಕು ಮರೆಯಾಗಿ ಗೋಚರಿಸಿತು. ಚಂದ್ರದರ್ಶನಕ್ಕೆ ತಾಳ್ಮೆಯಿಂದ ಕಾಯ್ದವರಿಗೆ ‘ಚಂದ್ರಸೌಮ್ಯಕಾಂತಿ’ ಗೋಚರಿಸಿ ಸಂತಸ ಉಂಟು ಮಾಡಿದೆ. ಭಾರತೀಯ ಕ್ಯಾಲೆಂಡರ್ ಮಾಸಗಳ ಪ್ರಕಾರ ಆಷಾಢ ಮಾಸ, ಶುಕ್ಲಪಕ್ಷದ ಹುಣ್ಣಿಮೆಯ ದಿನವಾದ ಶುಕ್ರವಾರ ಭಾರತದಲ್ಲಿ ಉತ್ತರಾಷಾಢದಲ್ಲಿ ದೀರ್ಘಾವಧಿ ಚಂದ್ರಗೃಹಣ ಸಂಭವಿಸಿತು. ಧಾರ್ಮಿಕ ನಂಬಿಕೆಗಳು, ಪಂಚಾಂಗದ ಮೇಲೆ ನಂಬಿಕೆ ಇರುವ ಶೃದ್ಧಾಳುಗಳು ಶನಿವಾರ ಬೆಳಿಗ್ಗೆ ಪೂಜೆ-ಪುನಸ್ಕಾರ, ಹೋಮ-ಹವನ, ದಾನ-ಧರ್ಮ ಜತೆಗೆ ಜಗದೊಡೆಯನ(Almighty) ದರ್ಶನಕ್ಕೆ ದೇವಸ್ಥಾನಕ್ಕೆ ತೆರಳಿದರು.

ನಿಂಬೆ ವಾಸನೆಯಲ್ಲಿ ಆರೋಗ್ಯ!:ಈ ಮಧ್ಯೆ ಶಾಸಕ ಸತೀಶ ಜಾರಕಿಹೊಳಿ ಶುಕ್ರವಾರ ಸಂಜೆ ಸದಾಶಿವನಗರ ಸ್ಮಶಾನದಲ್ಲಿ ಮೌಢ್ಯವಿರೋಧಿ ಆಚರಣೆ ಮಾಡಿ ಅನ್ನಾಹಾರ ಸೇವಿಸಿ ಜನಮನ ಗಮನ ಸೆಳೆದರು. ₹10ರ ಪಂಚಾಂಗ ಪುಸ್ತಕ ಇಡೀ ದೇಶ ಆಳುತ್ತಿದ್ದು, ಮಾನಸಿಕ ಗುಲಾಮಗಿರಿಗೆ ತಳ್ಳಿದೆ ಎಂದರು. ತಾವು ನಿಂಬೆ ಹಣ್ಣು ಇಟ್ಟುಕೊಂಡು ತಿರುಗಾಡುವುದರ ಹಿಂದೆ ಮೌಢ್ಯತೆ ಇಲ್ಲವೇ ಇಲ್ಲ. ನಿಂಬೆ ಪರಿಮಳ ಸೇವನೆ ಆರೋಗ್ಯಕ್ಕೆ ಉಪಕಾರಿ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.