ಉತ್ತಮ ಸಮಾಜಕ್ಕಾಗಿ

ಜನಸಾಮಾನ್ಯರಿಗೆ ಮಠಗಳೆಂದರೆ ಲೈಟ್ ಕಂಬಗಳಿದ್ದ ಹಾಗೆ:ಡಾ. ಸರಜೂ ಕಾಟ್ಕರ್

news belagavi

0

ಬೆಳಗಾವಿ:(news belgaum)ಜನಸಾಮಾನ್ಯರಿಗೆ ಮಠಗಳೆಂದರೆ ಲೈಟ್ ಕಂಬಗಳಿದ್ದ ಹಾಗೆ. ಅವರನ್ನು ಸರಿಯಾದ ಮಾರ್ಗದರ್ಶನ ತೋರಿಸುವುದುದೆ ಮಠಗಳ ಕಾರ್ಯವಾಗಿದೆ ಸಾಹಿತಿ ಡಾ. ಸರಜೂ ಕಾಟ್ಕರ್ ಹೇಳಿದರು.

ಭಾನುವಾರ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ 10ನೇ ಮಾಸಿಕ ಸುವಿಚಾರ ಚಿಂತನ ಕಾರ್ಯಕ್ರಮದಲ್ಲಿ ಭಾರತೀಯ ಸಮಾಜದಲ್ಲಿ ಮಠಗಳ ಪಾತ್ರ ವಿಷಯವಾಗಿ ಉಪನ್ಯಾಸ ನೀಡಿದರು.

ವೀರಶೈವ, ಲಿಂಗಾಯತ ವಿಚಾರ ಧಾರೆಗಳ ಬಗ್ಗೆ ಅಧ್ಯಯನ ಮಾಡಿದಾಗ ಜಗತ್ತಿನ ಎಲ್ಲ ವಿಚಾರಧಾರೆಗಳ ವಿಚಾರ ಒಂದೇ ಇದೆ. ವಿಧಾನ ಬೇರೆ ಇದ್ದರೂ ಮಾರ್ಗಗಳು, ಶಬ್ದಗಳು ಒಂದೇ ಇವೆ ಎಂದು ತಿಳಿದು ಬಂತು ಎಂದರು.

ಎಲ್ಲ ಧರ್ಮಗಳ ವಿಚಾರಗಳು ಹಾಗೂ ಮಾರ್ಗಗಳು ಒಂದೆ ಇವೆ. ಒದನ್ನು ನಾವು ಅರ್ಥ ಮಾಡಿಕೊಂಡಾ ಜಗತ್ತು ಸುಂದರವಾಗುತ್ತದೆ. ಜಗತ್ತಿನ ಏಕ ರೂಪವಾದ ನಾಗರಿಕತೆ ಹುಟ್ಟಿಕೊಂಡಿತ್ತು. ಮಠದ ಮೊದಲಿನ ರೂಪ ಆಶ್ರಮಗಳು. ನಂತರ ಮಠಗಳಾದವು. ಭಾರತದಲ್ಲಿ ಒಳ್ಳೆಯ ಮಠಗಳು ಇವೆ. ಕುಖ್ಯಾತಿ ಮಠಗಳು ಇವೆ. ಕುಖ್ಯಾತಿ ಮಠಗಳನ್ನು ಬಿಟ್ಟು ಒಳ್ಳೆಯ ಮಠಗಳ ಬಗ್ಗೆ ಜನರು ಒಲವು ತೋರಬೇಕು ಎಂದರು.

ಮಠದ ಶ್ರೀಗಳು ಜನಸಾಮಾನ್ಯರ ಸಮಸ್ಯೆಗಳಿಂದ ಎಂದಿಗೂ ದೂರವಿಲ್ಲ. ನಾಡು, ನುಡಿ, ಭಾಷೆ ಬಂದಾಗ ವೀರಶೈವ ಲಿಂಗಾಯತ ಸ್ವಾಮೀಜಿಗಳು ಸಾಕಷ್ಟು ಸಲ ಹೋರಾಟ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಸಮಾಜಮುಖಿಯಾಗಿ ಸೇವೆ ಸಲ್ಲಿಸಿರುತ್ತಿರುವುದು ಜಿಲ್ಲೆಯ ಜನತೆಗೆ ಹೆಮ್ಮೆ ತಂದಿದೆ. ಇವರು ಕೇವಲ ಸ್ವಾಮೀಜಿಯಾಗದೆ ಜನರ ಕಷ್ಟಗಳಿಗೆ ಸ್ಪಂದನೆ ನೀಡುತ್ತಾರೆ. ಕವಿ, ಸಾಹಿತ್ಯದಿಂದ ಸಮಾಜಕ್ಕೆ ತಿಳವಳಿಕೆ ನೀಡುತ್ತ ಬಂದಿದ್ದಾರೆ ಅವರ ಮೇಲೆ ಅಪಾರ ಗೌರವವಿದೆ ಎಂದರು.

ಇದಕ್ಕೂ ಮುನ್ನ ಸಾವಿರಾರು ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಶ್ರೀಮಠದಲ್ಲಿ ಜರುಗಿತು.ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಯ.ರು.ಪಾಟೀಲ, ಪಾರ್ವತಿ ಬೆಲ್ಲದ, ಪ್ರಕಾಶ ಗಿರಮಲ್ಲನವರ, ಮುಕ್ತಾರ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.