ಉತ್ತಮ ಸಮಾಜಕ್ಕಾಗಿ

ಸತ್ಯೆಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಆ ಉತ್ಸವಗಳು :ರವಿ ನಾಯ್ಕರ

news belagavi

0

ಬೆಳಗಾವಿ: (news belgaum)ಶೋಷಿತ ಸಮುದಾಯಗಳ ಜನರು ಹಬ್ಬಗಳು ಮತ್ತು ಉತ್ಸವಗಳನ್ನು ಆಚರಿಸುವ ಮುನ್ನ ಆ ಹಬ್ಬ ಮತ್ತು ಉತ್ಸವಗಳ ನಿಂದೆ ಹಣೆಯಲ್ಪಟ್ಟಿರುವ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಆಚರಿಸಬೇಕು. ಹಿಂದಿರುವ ಸತ್ಯೆಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಆ ಉತ್ಸವಗಳನ್ನು ವೈಚಾರಿಕ ಚಿಂತನೆಗಳ ನೆಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಬಹುದು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವಿ ನಾಯ್ಕರ ಹೇಳಿದ್ದಾರೆ.
ಪ್ರಗತಿ ಪರ ಮತ್ತು ವೈಚಾರಿಕ ಚಿಂತಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ, ನರೇಂದ್ರ ದಾಬೋಲ್ಕರ ಹಾಗೂ ಗೋವಿಂದ ಪನ್ಸಾರೆ ಅವರುಗಳ ಹತ್ಯೆಯನ್ನು ಖಂಡಿಸಿ, ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ದಿನವಾದ ಆಗಷ್ಟ 30 ರಂದು ಮಾನವ ಬಂಧುತ್ವ ವೇದಿಕೆ ಮತ್ತು ಬಸವ ಭೀಮ ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸತ್ಯ ಶೋಧಕರಿಗೆ ಸಾವಿಲ್ಲ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವೈಚಾರಿಕ ಕಿಂತಕರ ಹತ್ಯೆ, ಸಂವಿಧಾನದ ಪ್ರತಿಗಳನ್ನು ಸುಡುವ, ಮನುಸ್ಮøತಿ ಜಾರಿಗೆ ತರಬೇಕು ಎನ್ನುವ ಘೋಷಣೆಗಳು, ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಹಿಂದೆ ಬಹುದೊಡ್ಡ ತಂತ್ರ ಅಡಗಿದೆ. ಶೋಷಿತ ಸಮುದಾಯಗಳನ್ನು ಮೀಸಲಾತಿಯಿಂದ ವಂಚಿತಗೊಳಿಸುವ ಉದ್ದೇಶ ಸ್ಪಷ್ಟವಾಗಿದೆ. ಈ ತಂತ್ರಗಾರಿಕೆಗಳನ್ನು ಶೋಷಿತ ಸಮುದಾಯಗಳ ಯುವಕರು ಅರ್ಥ ಮಾಡಿಕೊಳ್ಳಬೇಕು. ವೈಚಾರಿಕ ಚಿಂತಕರ ಇತಿಹಾಸ ಮತ್ತು ಜನಪರ ಹೋರಾಟಗಾರರ ಹೋರಾಟಗಳ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಪ್ರೋ. ಎಚ್.ಬಿ.ಕೋಲ್ಕಾರ ಮಾತನಾಡಿ, ಡಾ.ಎಂ.ಎಂ.ಕಲಬುರ್ಗಿ ಅವರು ಬಹುದೊಡ್ಡ ಸಂಶೋಧಕರಾಗಿದ್ದರು. ಅವರು ಇತ್ತೀಚೆಗೆ ನಡೆಸಿದ್ದ ಬಸವಾದಿ ಶರಣರ ವಚನಗಳ ಅಧ್ಯಯನವು ಬಹುದೊಡ್ಡ ಸಂಪತ್ತಾಗಿದೆ. ಎಂ.ಎಂ.ಕಲಬುರ್ಗಿ ಅವರು ಅನೇಕ ಕನಸುಗಳನ್ನು ಕಂಡಿದ್ದರು. ಆ ಕನಸುಗಳು ನನಸಾಗುವ ಕಾಲದಲ್ಲಿಯೇ ಹಂತಕರು ಅವರನ್ನು ಗುಂಡಿಟ್ಟು ಕೊಂದಿರುವದು ಬಹುದೊಡ್ಡ ಆಘಾತ ತಂದಿದೆ ಎಂದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಸತ್ಯ ಶೋಧಕರಿಗೆ ಎಂದಿಗೂ ಸಾವಿಲ್ಲ. ಸತ್ಯ ಶೋಧಕರು ಸಮಾಜದ ದೇವರುಗಳು. ನಮ್ಮ ಮುಂದೆ ತಂದು ಕೂಡಿಸಲಾಗಿರುವ ದೇವ ದೇವತೆಗಳ ಜಾಗದಲ್ಲಿ ಸಮಾಜ ದೇವರುಗಳನ್ನು ಪ್ರತಿಷ್ಠಾಪಿಸುವ ಮೂಲಕ ಅವರ ಋಣ ತೀರಿಸಬೇಕಾಗಿದೆ. ಸರಸ್ವತಿಯ ಜಾಗದಲ್ಲಿ ಸಾವಿತ್ರಿಯ ಪ್ರತಿಷ್ಠಾಪನೆಯಾಗಬೇಕಿದೆ ಎಂದರು.
ಬಸವ ಸಮಾಜವು ದೇವ ದೇವತೆಗಳ ಭಯದಿಂದ ಹೊರಗೆ ಬರಬೇಕು. ಗುಡಿಗಳ ದೇವತೆಗಳ ಬದಲು ಬಡವನ ಹೊಟ್ಟೆಯ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಕಲ್ಲು ದೇವತೆಗಳನ್ನು ಕಂಡು ಭಯ ಪಟ್ಟು ಕೈ ಮುಗಿಯುವ ಬದಲು ಭಿಕ್ಷುಕರನ್ನು ಕಂಡರೆ ಭಯ ಪಡಬೇಕು. ಇಂದಿಗೂ ಈ ದೇಶದಲ್ಲಿ ಬಡತನ ಯಾಕೆ ಇದೆ ಎಂಬುದರ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೆ ಸಂಧರ್ಭದಲ್ಲಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಸತ್ಯ ಶೋಧಕ ಎಂಬ ನಾಟಕದ ನಿರ್ದೇಶಕ ಬಾಬಾಸಾಬ ಕಾಂಬಳೆ ಅವರನ್ನು ಸತ್ಕರಿಸಲಾಯಿತು.
ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.