ಉತ್ತಮ ಸಮಾಜಕ್ಕಾಗಿ

ತವರಿನ ತಾವರೆ ಅರಳಿತು ಕವನ ಸಂಕಲನ ಲೋಕಾರ್ಪಣೆ

The poetry compilation of the poem is a lot of work

0

ಮಹಿಳಾ ಸಾಹಿತ್ಯ ಸಶಕ್ತವಾಗುತ್ತಿರುವದು ಸಂತಸ:ಗುರುಸಿದ್ಧ ಶ್ರೀ
Auto Draft- Tarun kranti 35ಬೆಳಗಾವಿ:(news belgaum) ಪುರುಷ ಸಾಹಿತ್ಯಕ್ಕೆ ಸರಿಸಮನಾಗಿ ಇಂದು ಮಹಿಳಾ ಸಾಹಿತ್ಯ ಶ್ರೇಷ್ಠ ಮಟ್ಟದಲ್ಲಿ ಬೆಳೆದು ಬರುತ್ತಿರುವದು ಹೆಮ್ಮೆಯ ಸಂಗತಿ.ಸತತ ಪ್ರಯತ್ನ ಅಧ್ಯಯನ ಶೃದ್ಧೆಯಿಂದ ಬರೆದಲ್ಲಿ ಅದು ತಾನೇ ಶ್ರೇಷ್ಠ ಮಟ್ಟಕ್ಕೆರುತ್ತದೆ. ಶಾಂತಾ ಮಸೂತಿಯವರು ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 20 ರಂದು ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಶಾಂತಾ ಶ್ರೀಶೈಲ ಮಸೂತಿಯವರ “ತವರಿನ ತಾವರೆ ಅರಳಿತು” ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. News Belgaum-ತವರಿನ ತಾವರೆ ಅರಳಿತು ಕವನ ಸಂಕಲನ ಲೋಕಾರ್ಪಣೆ
ಈ ಸಂದರ್ಭದಲ್ಲಿ ಸಾಹಿತಿ ಸುನಂದಾ ಎಮ್ಮಿ ಅವರು ಮಾತನಾಡಿ ಚಿತ್ರದಲ್ಲಿ ಅರಿವು ಮೂಡಿಸುವ ಪುಸ್ತಕವು ಪುಷ್ಪ ಅರಳಿದಂತೆ. ಶಾಂತಾ ಮಸೂತಿಯವರು ಸಾಮಾಜಿಕವಾಗಿ ಹಾಗೂ ಸಾಂಸ್ಕøತಿಕ,ಸಾಹಿತ್ಯಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಪ್ರಾರಂಭದಲ್ಲಿ ಇಳಕಲದ ಲಿಂ.ಪೂಜ್ಯ ಡಾ.ಮಹಾಂತ ಶ್ರೀ,ಹಿರಿಯ ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ,ಮಹಾಲಿಂಗಪೂರದ ಸಾಹಿತಿ ಸಂಗಮೇಶ ಅವರನ್ನು ನೆನಪಿಸಿ ಕೋಟಿ ಶೃದ್ಧಾಂಜಲಿ ಸಲ್ಲಿಸಿದರು.
ಕಸಾಪ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರು ಮಾತನಾಡಿ ಅಧ್ಯಕ್ಷೀಯ ಭಾಷಣ ಅಂತರಂಗದಲ್ಲಿ ಗುಟ್ಟಾಗಿ ಮಾತನಾಡುವ ಕಾವ್ಯ ಕನ್ನಿಕೆ ವಿವಿಧ ರೂಪ ತೊಟ್ಟು ಹೊರಹೊಮ್ಮಿ ಬರುತ್ತಾಳೆ.ಶಾಂತಾ ಅವರು ಕವನಗಳು ಮುಗ್ಧತೆಯ ರೂಪ ಹೊತ್ತಿ ಹೊರಬಂದಿವೆ. ಕುಂಟುಂಬ,ಸಮಾಜ,ಪ್ರಕೃತಿ,ಭಕ್ತಿ ಇವೆಲ್ಲವೂ ಕಾವ್ಯದ ವಸ್ತುಗಳಾಗಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ,ಲೇಖಕಿಯರ ಸಂಘದ ಉಪಾಧ್ಯಕ್ಷೆ ಜ್ಯೋತಿ ಬದಾಮಿ ಸ್ವಾಗತಿಸಿದರು. ಎಂ.ವೈ.ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಪ್ರಭಾ ಬೆಲ್ಲದ,ಆಶಾ ಯಮಕನಮರಡಿ,ಜ್ಯೋತಿ ಭಾವಿಕಟ್ಟಿ,ಅಥಣಿಯ ರೋಹಿಣಿ ಯಾದವಾಡ, ಹೇಮಾ ಸೊನ್ನೊಳಿ,ಜಯಶ್ರೀ ನಿರಾಕಾರಿ,ಮೊಹನ ಪಾಟೀಲ,ಎಂ.ವೈ.ಮೆಣಸಿನಕಾಯಿ,ಬಸವರಾಜ ಸಸಾಲಟ್ಟಿ,ಸುಮಾ ಕಿತ್ತೂರ,ಶ್ರೀಶೈಲ ಮಸೂತಿ,ದೀಪಿಕಾ ಚಾಟೆ ಹಾಗೂ ಉಪಸ್ಥಿತರಿದ್ದರು. ಸರ್ವಮಂಗಳಾ ಅರಳಿಮಡ್ಡಿ ನಿರೂಪಿಸಿದರು.ಶೈಲಜಾ ಭಿಂಗೆ ವಂದಿಸಿದರು. The poetry compilation of the poem is a lot of work

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.