ಉತ್ತಮ ಸಮಾಜಕ್ಕಾಗಿ

ನೆಲ ಮುಗಿಲನ್ನು  ಬೆಸೆಯುವ ಶಕ್ತಿ ಸಾಹಿತಿಗಿದೆ: ರಂಗರಾಜ ವನದುರ್ಗ

The power of the ground is the power of writing: Rangaraja Vanadurga

0

ನಾಗೇಶ ನಾಯಕ ಅವರ ಮೂರು ಕೃತಿಗಳ ಬಿಡುಗಡೆ

ಬೆಳಗಾವಿ :  (news belgaum)ಎಲ್ಲರನ್ನೂ ಮೀರಿ ನಿಂತವ  ಸಾಹಿತಿ. ರಾಜಕಾರಣಿ, ವಿಜ್ಞಾನಿ, ಶಿಕ್ಷಕ, ನ್ಯಾಯವಾದಿ ಹೀಗೆ ಎಲ್ಲರನ್ನೂ ಮೀರಿನಿಂತವ ಸಾಹಿತಿ. ಇವನಿಗೆ ಏನೆಲ್ಲ ಮಾಡುವ ಶಕ್ತಿಯಿದೆ. ಮಳೆ ತರೆಯಿಸುವ, ಹೂವು ಮೂಡಿಸುವ, ನೆಲ ಮುಗಿಲನ್ನು ಬೆಸೆಯುವ ಶಕ್ತಿ ಸಾಹತಿಗಿದೆ ಎಂದು ರಾ.ಚ. ವಿ.ವಿ. ಕುಲಸಚಿವರಾದ ಡಾ. ರಂಗರಾಜ ವನದುರ್ಗ ಇಂದಿಲ್ಲಿ ಹೇಳಿದರು.

ನಗರದ ಸಾಹಿತ್ಯ ಭವನ ಸಭಾಭವನದಲ್ಲಿ  ಇಂದು ಬೆಳಿಗ್ಗೆ ನಡೆದ ನಾಗೇಶ ಜೀ. ನಾಯಕ ಅವರ ‘ಒಲವಿನೋಲೆಗಳು’  ‘ಮನದ ಮಾತು’ ಹಾಗೂ ‘ಕಗ್ಗ ಕಾಲಂ’ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಕ.ಸಾ.ಪ. ಬೆಳಗಾವಿ ಘಟಕ ಹಾಗೂ ಜನಸಾಹಿತ್ಯಪೀಠ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೃತಿ ಬಿಡುಗಡೆ ಮಾಡಿದ ಡಾ. ರಂಗರಾಜ ವನದುರ್ಗ ಅವರು ಮೇಲಿನಂತೆ ಅಭಿಪ್ರಾಯ ಪಟ್ಟ ಅವರು ಕೃತಿಕಾರ ನಾಗೇಶ ನಾಯಕದ್ದು ಅಪರೂಪದ ಬರವಣಿಗೆ ಇವರಿಂದ ಇನ್ನಷ್ಟು ಒಳ್ಳೊಳ್ಳೆ ಕೃತಿಗಳು ಹೊರಬರಲಿ ಎಂದು ಹಾರೈಸಿದರು.

‘ಮನದ ಮಾತು’ ಹಾಗೂ ‘ಕಗ್ಗ ಕಾಲಂ’ ಎರಡು ಕೃತಿಗಳನ್ನು ಪರಿಚಯಿಸಿದ ಡಾ. ಎಚ್. ಬಿ. ಕೋಲಕಾರ  ನಾಗೇಶ ನಾಯಕ ಅವರ ಬರವಣಿಗೆ ಸ್ವಲ್ಪ ನೇರ ಹಾಗೂ  ಖಾರ. ಪ್ರಗತಿಪರ ವಿಚಾರಗಳನ್ನು ಹೊಂದಿವೆ. ಎಡಪಂಥಿಯ ಛಾಯೆ ಇವರ ಬರವಣಿಗೆಯಲ್ಲಿ ಕಂಡುಬರುತ್ತವೆ ಎಂದ ಅವರು ನಾಗೇಶ ನಾಯಕರ ಬರವಣಿಗೆಯಲ್ಲಿ ಯಾರದೇ ಅನುಕರಣಿಯಿಲ್ಲದೇ ತಮ್ಮದೇಯಾದ ಸ್ವಂತಿಕೆಯಿದೆ. ಜೀವನ ಪ್ರೀತಿ, ಜೀವನ ಮೌಲ್ಯಕ್ಕಾಗಿ ಮಿಡಿಯುವ ಬರಹ ಅವರದ್ದು ಎಂದು ಹೇಳಿದರು.

‘ಒಲವಿನೋಲೆಗಳು’   ಕೃತಿಯ ಕುರಿತು ಮಾತನಾಡಿದ ಕೃಷಿ ಅಧಿಕಾರಿಗಳಾದ ಚನ್ನಪ್ಪ ಅಂಗಡಿ ನಾಗೇಶ ನಾಯಿಕ ಅವರ ಈ ಕೃತಿಯಲ್ಲಿ ಸಮಕಾಲಿನ ಬದುಕಿನ ಚಿತ್ರಣ ನೀಡುವ ಲೇಖನಗಳಾಗಿದ್ದು ಅವು ಶಿರ್ಷಿಕೆಯೇ ಹೇಳುವಂತೆ ಪ್ರೇಮ ಪ್ರೀತಿಯ ಕುರಿತದ್ದವುಗಳಾಗಿವೆ ಎಂದರು.

News Belgaum-ನಾಗೇಶ ನಾಯಕ ಅವರ ಮೂರು ಕೃತಿಗಳ ಬಿಡುಗಡೆಅತಿಥಿಗಳಾಗಿ ಆಗಮಿಸಿದ್ದ ಎಲ್. ಎಸ್. ಶಾಸ್ತ್ರಿ ಬರಹಗಾರನಿಗೆ ಜೀವನದಲ್ಲಿ ತೃಪ್ತಿಯಿರಲಿ ಆದರೆ ಬರಹದಲ್ಲಿ ತೃಪ್ತಿಬೇಡ. ಹೊಸತನ್ನು ನೋಡುವ ಹೊಸ ಕಣ್ಣು ಲೇಖಕ ಹೊಂದಿರಬೇಕು ಅಂದಾಗಲೇ ಅವನೊಬ್ಬ ಯಶಸ್ವಿ ಲೇಖಕನಾಗಲು ಸಾಧ್ಯ ಈ ಎಲ್ಲ ಗುಣಗಳನ್ನು  ಲೇಖಕ ನಾಗೇಶ ನಾಯಕ ಹೊಂದಿದ್ದಾರೆಂದು ಹೇಳಿದರು.

ಕೃತಿಕಾರ ನಾಗೇಶ ನಾಯಕ ಮಾತನಾಡಿ ನನ್ನ ಬದುಕಿನ ಜೀವನಾನುಭವಗಳೇ ನನ್ನ ಬರವಣಿಗೆಯ ಸಾಮಗ್ರಿ. ಹಿರಿಯ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿಯರು ನನಗೇ ಬರೆಯಲು ಹಚ್ಚಿ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸಿದ್ದಾರೆ. ಇಂಥ ಹಲವರು ಸೇರಿ ನನ್ನನ್ನು ಲೇಖಕನನ್ನಾಗಿಸಿದ್ದಾರೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿರು.

ಶ್ರೀಮತಿ ಸುನಂದಾ ಮುಳೆ ಪ್ರಾರ್ಥಿಸಿದರು. ಕಾರ್ಯಕ್ರಮದ ಅಧ್ಯಕ್ಷತಯನ್ನು ಕ.ಸಾ.ಪ ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ ವಹಿಸಿದ್ದರು. ಎಚ್. ಕೆ. ಗುರವ ಅತಿಥಿಗಳಾಗಿ ಆಗಮಿಸಿದ್ದರು. ಜನಸಾಹಿತ್ಯಪೀಠ ಸಂಘಟನೆಯ ಅಧ್ಯಕ್ಷರಾದ ಪುಂಡಲೀಕ ಪಾಟೀಲ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಎಮ್. ವಾಯ್. ಮೆಣಸಿನಕಾಯಿ ನಿರೂಪಿಸಿದರು. ಕಾರ್ಯದರ್ಶಿಗಳಾದ ಜ್ಯೋತಿ ಬದಾಮಿ ವಂದಿಸಿದರು. The release of three works by Nagesh Nayaka      The power of the ground is the power of writing: Rangaraja Vanadurga

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.