ಉತ್ತಮ ಸಮಾಜಕ್ಕಾಗಿ

ನೇಕಾರರ ಬೇಡಿಕೆಗಳಿಗಾಗಿ ಡಿಸಿ ಕಚೇರಿ ಎದುರು ಜು. 23ಕ್ಕೆ ಧರಣಿ: ಗಜಾನನ ಗುಂಜೇರಿ

The Protest to DC office for the weavers' demands on Dec 23: Gajanana Gunjari

0

ಬೆಳಗಾವಿ: (news belagaviಬಡ ನೇಕಾರರ ಎಂದೆಂದಿನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘ ವತಿಯಿಂದ ಜು. 23ಕ್ಕೆ ಪ್ರತಿಭಟನೆಗೆ ಕರೆ ನೀಡಿದೆ.

ಬೆಳಗಾವಿಯ ವಡಗಾವಿ, ಶಹಾಪುರ, ಅನಗೋಳ, ಖಾಸಭಾಗ, ಮಜಗಾಂವ ಸೇರಿ ಇತರ ಪ್ರದೇಶಗಳು ನೇಕಾರಿಕೆಗೆ ಹೆಸರಾಗಿವೆ. ಸಾವಿರಾರು ಜನರು ನೇಕಾರಿಕೆ ಮೇಲೆಯೇ ಜೀವನ ನಡೆಸುತ್ತಾರೆ. ದಿನನಿತ್ಯ ದುಡಿದರೂ ಬದುಕು ಸುಧಾರಿಸಿಲ್ಲ ಈ ಬಗ್ಗೆ ಸರಕಾರಗಳಿಗೆ ಮಾಡಿದ ಮನವಿಗಳು ಫಲಪ್ರದವಾಗಿಲ್ಲ ಎಂದು ನೇಕಾರರ ಮುಖಂಡ ಗಜಾನನ ಗುಂಜೇರಿ ಬೇಸರ ವ್ಯಕ್ತಪಡಿಸಿದ್ದಾರೆ.

ಯಾಂತ್ರಿಕೃತ ನೇಕಾರಿಕೆಗೆ ನೆರವು, ಉತ್ಪನ್ನಗಳಿಗೆ ನೇರ ಮಾರುಕಟ್ಟೆ, ನೇಕಾರರು & ಅವರ ಅವಲಂಬಿತರಿಗೆ ಆರೋಗ್ಯ ಸೇವೆ, ಇನ್ಸೂರೆನ್ಸ್ ಮತ್ತು ಪಿಂಚಣಿ, ನಿರಂತರ ವಿದ್ಯುತ್ ಸಂಪರ್ಕ, ನೇಕಾರಿಕೆ ಓಣಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ರಿಯಾಯತಿ ದರದಲ್ಲಿ ನೂಲಿನ ಪೂರೈಕೆ, ನೇಕಾರರ ಮಕ್ಕಳಿಗಾಗಿ ಸರಕಾರಿ ಹಾಸ್ಟೇಲಗಳ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಬೇಡಿಕೆಗಳನ್ನು ಇಡುತ್ತ ಬರಲಾಗುತ್ತಿದೆ ಎಂದಿದ್ದಾರೆ. ನೇಕಾರರ ಸಮಸ್ಯೆಗಳು & ಬೇಡಿಕೆಗಳ ಪೂರೈಕೆಗಾಗಿ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘ ಬಾಗಲಕೋಟ ಇವರ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.