ಉತ್ತಮ ಸಮಾಜಕ್ಕಾಗಿ

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಸೋಮವಾರ ಸಂಜೆ ನಡೆದ ಎರಡನೆ  ಹಂತದ ಜನಾಶೀರ್ವಾದ ಕಾರ್ಯಕ್ರಮ

The second step is the Janashirva program

0


ಹುಬ್ಬಳ್ಳಿ: (news belgaum)ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಮಹದಾಯಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಯನ್ನು ಒತ್ತಾಯಿಸಿದರು.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಸೋಮವಾರ ಸಂಜೆ ನಡೆದ ಎರಡನೆ  ಹಂತದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮುಖ್ಯಮಂತ್ರಿ ಸಭೆಯನ್ನು ಕರೆದು ಮಹಾದಾಯಿ ಬಗ್ಗೆ ಚರ್ಚಸಬೇಕು,
ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ,ನಾವು ಸಹ ಮಹದಾಯಿ ಯೋಜನೆ ಜಾರಿಗೆ ಬದ್ಧರಿದ್ದೇವೆ ಎಂದರು.

ಪ್ರಧಾನಿ ಮಹಾದಾಯಿ ವಿಚಾರದಲ್ಲಿ  ಕೇವಲ‌ ಕುಂಟು ನೆಪ ಹೇಳುವದನ್ನು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.‌ರಾಹುಲ್ ಗಾಂಧಿ ಮಹದಾಯಿ ಬಗ್ಗೆ ಮಾತನಾಡುತ್ತಿದಂತೆ ಮೈದಾನದಲ್ಲಿ ಚಪ್ಪಾಳೆ ಸುರಿಮಳೆ ಸುರಿಯಿತು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ,ಸಿಎಂ ಸಿದ್ದರಾಮಯ್ಯ, ಶಾಸಕ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಸಚಿವ ವಿನಯ ಕುಲಕರ್ಣಿ, ಡಿಕೆ ಶಿವಕುಮಾರ, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡ ಸಮಾವೇಶದಲ್ಲಿ ಭಾಗಿಯಾಗಿದ್ದರು.The second step is the Janashirva program


ಧಾರವಾಡ: ಕಳೆದ ಮೂರ ದಿನಗಳಿಂದ ಮುಂಬೈ ಕರ್ನಾಟಕ ಪ್ರಾಂತ್ಯದ  ಜನಾಶೀರ್ವಾದ ಸಮಾವೇಶದಲ್ಲಿ ಭಾಗವಹಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮಾವರ ಸಂಜೆ ಧಾರವಾಡದ ಮುರುಘಾ ಮಠ ದರ್ಶನ ಪಡೆದ ಬಳಿಕ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಭೇಟಿ  ನೀಡಿದರು.

ಸವದತ್ತಿಯಿಂದ ವಿಷೇಶ ವಾಹನದಲ್ಲಿ ಬಂದ ರಾಹುಲ್ ಗಾಂಧಿ ಅವರು ಮುರುಘಾ ಮಠಕ್ಕೆ ಭೇಟಿ ನೀಡಿ ಮೃತ್ಯುಂಜಯಪ್ಪಗಳ ದರ್ಶನ ಪಡೆದರು. ಬಳಿಕ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಸಾರ್ವಜನಿಕರತ್ತ ತೆರಳಿ ಹಸ್ತಲಾಗವ ಮಾಡಿದರು.

ದೇವಸ್ಥಾನದ ಆವರಣದಲ್ಲಿ ಭದ್ರತೆಗಾಗಿ  ಬ್ಯಾರಿಕ್ಯಾಡ್ ಗಳನ್ನು ಇರಿಸಲಾಗಿತ್ತು. ಬ್ಯಾರಿಕ್ಯಾಡ್ ನ ಬದಿ ನಿಂತು ಯುವಕರು ಮೊಬೈಲ್ ಗಳಲ್ಲಿ ತಮ್ಮ  ನೆಚ್ಚಿನ ನಾಯಕನ ಚಿತ್ರ ಸೆರೆಹಿಡಿಯುವುದರಲ್ಲಿ ನಿರತರಾಗಿದ್ದರು.

ಬಳಿಕ ವಿಷೇಶ ಬಸ್ ನಲ್ಲಿ ತೆರಳುತ್ತಿರುವಾಗ ಮಹಿಳೆಯೊಬ್ಬರು ಬಸ್ ಅಡ್ಡಗಟ್ಟಿ ಗುಲಾಭಿ ಹೂ ಗುಚ್ಚ ನೀಡಿದರು.

ರಾಹುಲ್ ಗಾಂಧಿಗೆ ಸೀಬೆ ಹಣ್ಣು ಕೊಟ್ಟು ಸ್ವಾಗತಿಸಿದ ರೈತರು


ಧಾರವಾಡ: ಕಾಂಗ್ರೆಸ್ ಪಕ್ಷದ ವತಿಯಿಂದ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಸಮಾವೇಶಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಧಾರವಾಡದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.

ಸವದತ್ತಿಯಲ್ಲಿ ನಡೆದ ಸಮಾವೇಶವನ್ನು ಮುಗಿಸಿ ರಸ್ತೆ ಮೂಲಕವೇ ಧಾರವಾಡಕ್ಕೆ ಬಂದ ರಾಹುಲ್ ಗಾಂಧಿ ಅವರು ಮೊದಲಿಗೆ ಮುರುಘಾಮಠಕ್ಕೆ ಭೇಟಿ ನೀಡಿದರು. ನಂತರ ಅಲ್ಲಿಂದ ಶಿವಾಜಿ ವೃತ್ತಕ್ಕೆ ಬಂದು ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ನೇರವಾಗಿ ಹುಬ್ಬಳ್ಳಿಯತ್ತ ಹೊರಟರು. ಇದಕ್ಕೂ ಮುನ್ನ ಹುಬ್ಬಳ್ಳಿಯ ಮಾರ್ಗ ಮಧ್ಯದ ಟೋಲನಾಕಾ ಬಳಿಯೂ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಇದಾದ ಬಳಿ ಹುಬ್ಬಳ್ಳಿಯತ್ತ ಹೊರಟಿದ್ದ ರಾಹುಲ್ ಗಾಂಧಿ ಅವರಿಗೆ ನವಲೂರಿನ ರೈತರು ಪೇರಲ ಹಣ್ಣನ್ನು ಕೊಟ್ಟು ವಿಶಿಷ್ಟವಾಗಿ ಸ್ವಾಗತಿಸಿ ನಂತರ ಹುಬ್ಬಳ್ಳಿಗೆ ಬೀಳ್ಕೊಟ್ಟರು.

ಐಶಾರಾಮಿ ವಾಹನ..

ಕಾಂಗ್ರೆಸ್ ಪ್ರಚಾರಕ್ಕೆಂದೇ ನಿರ್ಮಿಸಲಾಗಿರುವ ಐಶಾರಾಮಿ ವಾಹನದಲ್ಲೇ ರಾಹುಲ್ ಗಾಂಧಿ ಅವರು ಸವದತ್ತಿಯಿಂದ ಹುಬ್ಬಳ್ಳಿಗೆ ತೆರಳಿದರು. ಇವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಲೋಕಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಿ.ಕೆ.ಶಿವಕುಮಾರ, ವಿನಯ ಕುಲಕರ್ಣಿ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು ಇದ್ದರು.

ಬೆಳಿಗ್ಗೆಯಿಂದಲೇ ಬಂದೋಬಸ್ತ್..

ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಧಾರವಾಡ ಪ್ರಮುಖ ರಸ್ತೆ, ವೃತ್ತ, ಸೇರಿದಂತೆ ಅನೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಧ್ಯಾಹ್ನ 2 ರ ಸುಮಾರಿಗೆ ರಾಹುಲ್ ಗಾಂಧಿ ಅವರು ಧಾರವಾಡದ ಮೂಲಕ ಹಾದು ಹುಬ್ಬಳ್ಳಿಗೆ ಹೋಗಬೇಕಿತ್ತು. ಆದರೆ, ಅವರು ಮುರುಘಾಮಠಕ್ಕೆ ಬಂದಿದ್ದೇ ಬರೊಬ್ಬರಿ 6 ಗಂಟೆಗೆ. ಬೆಳಿಗ್ಗೆಯಿಂದ ಬಂದೋಬಸ್ತ್ ಗಾಗಿ ನಿಂತಿದ್ದ ಪೊಲೀಸರು ಬಿಸಿಲಿನಲ್ಲಿ ಹೈರಾಣದ ಘಟನೆಯೂ ನಡೆಯಿತು.

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.