ಉತ್ತಮ ಸಮಾಜಕ್ಕಾಗಿ

ಕರ್ನಾಟಕದಲ್ಲಿ ಮೊದಲ ಹಂತದ ಜನಾಶೀರ್ವಾದ ಸಮಾವೇಶ ಯಶಸ್ವಿಯಾದ ಬಳಿಕ ಇದರ ಮುಂದುವರೆದ ಭಾಗವಾಗಿ ಎರಡನೇ ಹಂತದ ಸಮಾವೇಶ ವೇದಿಕೆ ಸಜ್ಜು:

The sequel is the sequel to the first phase of the Janashirva convention

0

 

ಬೆಳಗಾವಿ.:ಅಥಣಿ: (news belgaum)ಮುಂಬೈ ಕರ್ನಾಟಕ ಪ್ರಾಂತದ ಎರಡನೇ ಹಂತದ ಜನಾಶೀರ್ವಾದ ಸಮಾವೇಶಕ್ಕೆ ಚಾಲನೆ ನೀಡಲು  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಅಥಣಿ ಪಟ್ಟಣಕ್ಕೆ ಆಗಮಿಸಲಿದ್ದು,  ಸಮಾವೇಶಕ್ಕಾಗಿ  10 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ  ಸಜ್ಜುಗೊಳಿಸಲಾಗಿದೆ.

ಹೈದರಾಬಾದ್ ಕರ್ನಾಟಕದಲ್ಲಿ ಮೊದಲ ಹಂತದ ಜನಾಶೀರ್ವಾದ ಸಮಾವೇಶ ಯಶಸ್ವಿಯಾದ ಬಳಿಕ ಇದರ ಮುಂದುವರೆದ ಭಾಗವಾಗಿ ಎರಡನೇ ಹಂತದ ಸಮಾವೇಶವನ್ನು ಮುಂಬೈ ಕರ್ನಾಟಕ ಪ್ರಾಂತದಲ್ಲಿ ಹಮ್ಮಿಕೊಳ್ಳಲಾಗಿದೆ.

ಬಿಜೆಪಿ ಭದ್ರಕೋಟೆಯಾದ ಅಥಣಿ ಪಟ್ಟಣದಿಂದ ಎರಡನೇ ಹಂತದ ಸಮಾವೇಶಕ್ಕೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಫೆ. 24 ರಿಂದ 27 ರವರೆಗೆ ಎರಡನೇ ಹಂತದ ಸಮಾವೇಶ ಆರಂಭಗೊಳ್ಳಲಿದೆ.

ಬೃಹತ್ ವೇದಿಕೆ ಸಜ್ಜು:

ಅಥಣಿ ಪಟ್ಟಣದ ಸಂಸ್ಕೃತಿಕ ನಗರದ ಜಕನೂರು ಪ್ಲಾಟ್ ನಲ್ಲಿ 8 ಎಕರೆ ವಿಶಾಲವಾದ  ಪ್ರದೇಶದಲ್ಲಿ ಬೃಹತ್ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಸಮಾವೇಶದಲ್ಲಿ ಅಂದಾಜು 2 ರಿಂದ 3 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಇದಕ್ಕನುಗುಣವಾಗಿ ಜನರಿಗೆ ಕುಳಿತುಕೊಳ್ಳಲು ಆಸನಳನ್ನು ಕಲ್ಪಿಸಲಾಗಿದೆ.  ಅಲ್ಲದೇ ವೇದಿಕೆಯ ಮುಂಬಾಗದಲ್ಲಿ ನಾಲ್ಕು ಬೃಹತ್ ಎಲ್ ಸಿಡಿ ಟಿವಿಗಳನ್ನು ಬಳಸಲಾಗಿದೆ.

ಪಟ್ಟಣಕ್ಕೆ 12 .30 ಆಗಮಿಸಲಿರುವ  ಎಐಸಿಸಿ  ಅಧ್ಯಕ್ಷ ರಾಹುಲ್ ಗಾಂಧಿ ಎರಡನೇ ಹಂತದ ಸಮಾವೇಶಕ್ಕೆ ಚಾಲನೆ ನೀಡಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇದಕ್ಕೂ ಮೊದಲು ಐಗಳಿ ಕ್ರಾಸ್ ನಿಂದ ಅಥಣಿವರೆಗೆ  5 ಸಾವಿರ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲಿದ್ದಾರೆ.

ಪಟ್ಟಣದ ಎಸ್.ಎಸ್.ಎಮ್.ಎಸ್ ಕಾಲೇಜು ಮೈದಾನದಲ್ಲಿ ಎರಡು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ವೀರಕುಮಾರ್ ಪಾಟೀಲ್ ಪಟ್ಟಣಕ್ಕೆ ಭೇಟಿ ನೀಡಿ ಹ್ಯಾಲಿಪ್ಯಾಡ್ ಹಾಗೂ ವೇದಿಕೆ ಸ್ಥಳವನ್ನು ಪರಿಶೀಸಿಲಿದರು.

ಬಿಗಿಬಂದೋಬಸ್ತ್:

ಪಟ್ಟಣದಲ್ಲಿ ನಡೆಯಲಿರುವ ಜನಾಶೀರ್ವಾದ ಸಮಾವೇಶ ಹಿನ್ನಲೆ   ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು,  ಒಬ್ಬ  ಎಸ್ಪಿ, 5 ಡಿವೈಎಸ್ಪಿ, 15 ಸಿಪಿಐ, 35 ಪಿಎಸ್ಐ, 1 ಸಾವಿರ ಜನ ಪೊಲೀಸ್ ಸಿಬ್ಬಂದಿ, 6 ಕೆಎಸ್‌ಆರ್‌ಪಿ, 6 ಡಿಎಆರ್ ತುಕಡಿಗಳನ್ನು ನಿಯೋಜನೆಗೊಳಿಸಲಾಗಿದೆ.

ಅಥಣಿ ಸಮಾವೇಶ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಿಕೋಟಾದಲ್ಲಿ ನಡೆಯಲಿರುವ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಫೆ. 25 ರಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ, ಫೆ. 26ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ, ಧಾರವಾಡ ಜಿಲ್ಲೆಯ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ.The sequel is the sequel to the first phase of the Janashirva convention

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.